![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Sep 4, 2021, 5:41 PM IST
ಮಾದನಹಿಪ್ಪರಗಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಪಿಎಂಸಿ ಕಾಯ್ದೆಯೆಂಬ ಅಸ್ತ್ರದಿಂದ ರೈತರ ಮೇಲೆ ಯುದ್ಧಸಾರಿವೆ. ಹೀಗಾಗಿ ರೈತರು ರಾಜಕಾರಣಿಗಳಿಂದ ದೂರವಿರಿ ಎಂದು ನವಕರ್ನಾಟಕ ರಾಜ್ಯ ರೈತ ಸಂಘದ ರಾಜಾಧ್ಯಕ್ಷ ದಯಾನಂದ ಪಾಟೀಲ ಹೇಳಿದರು.
ಸ್ಥಳೀಯ ಶಿವಲಿಂಗೇಶ್ವರ ವಿರಕ್ತ ಮಠದದಲ್ಲಿ ಶುಕ್ರವಾರ ನಡೆದ ನವ ಕರ್ನಾಟಕ ರಾಜ್ಯ ರೈತ ಸಂಘದ ಆಳಂದ ತಾಲೂಕು ಅಧ್ಯಕ್ಷ ಮತ್ತು ಮಾದನಹಿಪ್ಪರಗಿ ಹೋಬಳಿ ಮಟ್ಟದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರಕಾರಿ ಅಧಿಕಾರಿಗಳು ಕೃಷಿ ಕೂಲಿ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳು ನೇರವಾಗಿ ಕೊಡುತ್ತಿಲ್ಲ.
ಕೃಷಿ ಇಲಾಖೆಯು ಬೇರೆ ಬೇರೆ ಸಿರಿದಾನ್ಯಗಳನ್ನು ಬೆಳೆಯಲು ಹೇಳುತ್ತಾರೆ. ಆದರೆ ಅದರಿಂದ ಬಡ ರೈತರು ಬಾಳು ಬೆಳಗುವುದಿಲ್ಲ. ಅನ್ನ ಕೊಡುವ ರೈತರ ಬಗ್ಗೆ ಕಾಳಜಿ ಇದ್ದರೆ ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಟ್ಟರಷ್ಟೇ ಸಾಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸತೀಶ ಗುತ್ತೇದಾರ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಎಪಿಎಂಎಸಿ ಕಾಯ್ದೆ ಮಾರಕವಾಗಿದೆ. ಇಂತಹವುಗಳ ಬಗ್ಗೆ ರೈತರು ಧ್ವನಿಯೆತ್ತಬೇಕಾಗಿದೆ ಎಂದರು. ನೂತನವಾಗಿ ಮಾದನಹಿಪ್ಪರಗಿ ಹೋಬಳಿ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿನಾಥ ಮೈಂದರಗಿ ಮಾತನಾಡಿ, ನಿಜವಾದ ರೈತರಿಗೆ ಸರಕಾರಿ ಸೌಲಭ್ಯಗಳು ಗೊತ್ತಿಲ್ಲ. ಸರಕಾರಿ ಸೌಲಭ್ಯಗಳು ರೈತರಿಗೆ ಸಿಗುವಂತಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.
ನೂತನವಾಗಿ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ದರ್ಗಾಶಿರೂರಿನ ಶಿವಲಿಂಗಪ್ಪ ಪೊಲೀಸ್ ಪಾಟೀಲ ಮಾತನಾಡಿದರು. ಮಠದ ಪೀಠಾಧಿಪತಿಗಳಾದ ಅಭಿನವ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ನವ ಕರ್ನಾಟಕ ರಾಜ್ಯ ರೈತರ ಸಂಘದ ಗೌರವಾಧ್ಯಕ್ಷ ಸಿದ್ದರಾಮ ಪೊಲೀಸ್ ಪಾಟೀಲ, ಜಿಲ್ಲಾಧ್ಯಕ್ಷ ಸತೀಶ ಗುತ್ತೇದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಯ ಕಾಂಬಳೆ, ಅಮರನಾಥ ಝಳಕಿ, ಜಿಲ್ಲಾ ಉಪಾಧ್ಯಕ್ಷ ಸಂತೋಷ ಝಳಕಿ, ಜಿಲ್ಲಾ ವಕ್ತಾರ ಜಗದೇವ ಕುಂಬಾರ, ಸಂಘದ ಪ್ರಮುಖರಾದ ಚಂದ್ರಕಾಂತ ಓಗೆ, ಸೂರ್ಯಕಾಂತ ಕುಂಬಾರ, ರಾಜಣ್ಣ ಕುಂಬಾರ ಕಾರಬಾರಿ, ಚಿತ್ತಾಪುರ ತಾಲೂಕಾಧ್ಯಕ್ಷ ರವಿಗುತ್ತೇದಾರ, ಸಾತಲಿಂಗಪ್ಪ ಸಲಗರ ಶೀಪು ಕೊಳ್ಳೆ, ಘಾಳಪ್ಪ ಹಡಲಗಿ, ಮಹಾಂತಯ್ಯ ಸ್ವಾಮಿ, ಶಾಂತಮಲ್ಲ ಭಾವಿಕಟ್ಟಿ ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.