ಬರಹ-ಪ್ರಸಾರ ಸಂಸ್ಕೃತಿ ಮರಳಲಿ
Team Udayavani, Nov 26, 2021, 11:56 AM IST
ಆಳಂದ: ಕಾಲ ಬದಲಾದಂತೆ ಒಳ್ಳೆಯ ಪುಸಕ್ತಗಳ ಬರಹದ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಹೊಸಬರು ಅರ್ಥಬರಿತ ಮೌಲ್ಯಯುತ ಪುಸ್ತಕ ಬರಹಕ್ಕೆ ಮುಂದಾಗಿ ಪ್ರಸಾರದ ಸಂಸ್ಕೃತಿ ಮರುಕಳಿಸಿ, ಓದಗರನ್ನು ಆಕರ್ಷಿಸುವಂತೆ ಆಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಾಬಾಯಿ ಹಕ್ಕಿ ಹೇಳಿದರು.
ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಗುರುವಾರ ಶಿಕ್ಷಣ ಸಂಯೋಜಕ ತಡಕಲ್ ವಲಯದ ಅಂಬರಾಯ ಕಾಂಬಳೆ ರಚಿಸಿದ ಸ್ಫೂರ್ತಿ ಕವಲನ ಸಂಕಲನ ಪುಸ್ತಕವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಭೆಯನ್ನು ಎಷ್ಟೇ ಒತ್ತಡವಿದ್ದರೂ ತಡೆಯಲಾಗದು. ಸರ್ಕಾರಿ ನೌಕರನಾಗಲಿ, ಕೃಷಿಕನಾಗಲಿ, ರಾಜಕಾರಣಿಯಾಗಲಿ, ಹೋರಾಟಗಾರ, ಪುರುಷ ಅಥವಾ ಮಹಿಳೆಯಾಗಲಿ ಎಂದಾದರೂ ಒಮ್ಮೆ ಪ್ರತಿಭೆ ಹೊರಹೊಮ್ಮಿಯೇ ಹೊಮ್ಮುತ್ತದೆ. ಅಂಬರಾಯ ಕಾಂಬಳೆ ತಮ್ಮ ಸರ್ಕಾರಿ ಸೇವೆಯಲ್ಲೂ ಕವನ ಸಂಕಲನ ಹೊರತಂದಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಶಿಕ್ಷಣ ಸಂಯೋಜಕ ಅಂಬರಾಯ ಕಾಂಬಳೆ ತಾವೇ ರಚಿಸಿ, ಮುದ್ರಿಸಿದ ಸ್ಫೂರ್ತಿ ಕವನ ಸಂಕಲನದ ಕುರಿತು ಮಾತನಾಡಿದರು. ಶಿಕ್ಷಣ ಇಲಾಖೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೊನಗುಂಡಕರ್, ಸಿಬ್ಬಂದಿ ತನುಜಾ, ಸುಪ್ರಿಡೆಂಟ್ ಜನಾಬಾಯಿ, ರಂಜನಾ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಗದೀಶ ಕೋರೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.