ಕಾರ್ಮಿಕರು ಸಂಘಟಿತರಾಗಲಿ
Team Udayavani, May 6, 2022, 1:12 PM IST
ಆಳಂದ: ಸಂಘಟಿತ ಹೋರಾಟದ ಮೂಲಕ ಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ ಹೇಳಿದರು.
ಪಟ್ಟಣದ ಭೀಮನಗರದಲ್ಲಿ ಸ್ಥಳೀಯ ಕಾರ್ಮಿಕ ಕಲ್ಯಾಣ ಸಮಿತಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಕಾರ್ಮಿಕರ ಮೇಲೆ ಬಂಡವಾಳ ಶಾಹಿಗಳ ದಬ್ಟಾಳಿಕೆ, ಶೋಷಣೆ ವಿರುದ್ಧ ಡಾ| ಬಿ.ಆರ್. ಅಂಬೇಡ್ಕರ್ ಅನೇಕ ಹೋರಾಟಗಳನ್ನು ಮಾಡಿ ಕಾರ್ಮಿಕರಿಗೆ ಅನುಕೂಲವಾಗುವ ಕಾನೂನುಗಳನ್ನು ರಚಿಸಿದ್ದಾರೆ. 12 ಗಂಟೆ ಕೆಲಸದ ಬದಲು ಎಂಟು ಗಂಟೆ ಕೆಲಸ ಮಾಡಬೇಕು. ರಜೆ, ಆಸ್ಪತ್ರೆ, ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯಗಳನ್ನು ನೀಡುವ ಕುರಿತು ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ ಎಂದು ಹೇಳಿದರು.
ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕಾನೂನಿನ ಮೂಲಕ ಸೌಲಭ್ಯಗಳ ಲಾಭ ಪಡೆದುಕೊಳ್ಳಲು ಸಂಘಟನೆ, ಶಿಕ್ಷಣ ಮತ್ತು ಹೋರಾಟಕ್ಕೆ ಮುಂದಾಗಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಶ್ರೇಷ್ಠವಾಗಿದೆ. ಇವರನ್ನು ಪ್ರೀತಿ, ಗೌರವದಿಂದ ಕಾಣಬೇಕು ಎಂದು ಹೇಳಿದರು.
ಬೆಳಮಗಿ ಬುದ್ಧ ವಿಹಾರದ ಬಂತೇ ಅಮರಜೋತಿ ಮಾತನಾಡಿ, ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಮಿಕ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಅವರನ್ನು ಸನ್ಮಾನಿಸುವ ಶ್ಲಾಘನೀಯ ಕಾರ್ಯಮಾಡಿದ್ದಾರೆ ಎಂದರು.
ಮಕ್ಕಳ ವೈದ್ಯ ಡಾ| ನಿಖೀಲ ಶಾಹ, ಅಂಗನವಾಡಿ ಮೇಲ್ವಿಚಾರಕಿ ಭಾಗಿರಥಿ ಎಂ. ಯಲ್ಲಶೆಟ್ಟಿ, ಪ್ರಾಂತ ರೈತ ಸಂಘದ ಪಾಂಡುರಂಗ ಮಾವೀನಕರ್, ಜಿಲ್ಲಾ ದಲಿತ ಸಮನ್ವಯ ಸಮಿತಿ ಸುಧಾಮ ಧನ್ನಿ, ಭೀಮನಗರದ ಶಾಮರಾವ್ ಸಾಲೇಗಾಂವ, ಪುರಸಭೆ ಸದಸ್ಯ ಲಕ್ಷ್ಮಣ ಝಳಕಿ, ಮುತ್ತಣ್ಣಾ ಸಾಲೇಗಾಂವ, ಅಪ್ಪಾಸಾಬ್ ತೀಥೆì, ಜಯಭೀಮ ದೊಡ್ಡಿ, ಸೂರ್ಯಕಾಂತ ಸಾಲೇಗಾಂವ, ಮಲ್ಲಿಕಾರ್ಜುನ ಮಂಟಗಿಕರ್, ಆನಂದರಾವ್ ಯಲಶೆಟ್ಟಿ, ಲಕ್ಷ್ಮಣ ಮುದಗಲೆ, ದಯಾನಂದ ಸಾಲೇಗಾಂವ, ಅನಿಲ ಯಲಶೆಟ್ಟಿ, ಸತೀಶ ಮೊದಲೆ, ಪ್ರಥ್ವಿರಾಜ ಮೊದಲೆ, ಲಕ್ಷ್ಮೀಕಾಂತ ತೋಳೆ, ಮಡಿವಾಳಪ್ಪ ಯಲಶೆಟ್ಟಿ ಮತ್ತಿತರರು ಇದ್ದರು.
ಸಮಿತಿ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಣ್ಣಾರಾವ್ ಪಾಟೀಲ ಸ್ವಾಗತಿಸಿದರು, ಮಡಿವಾಳಯ್ಯ ಮಠಪತಿ ನಿರೂಪಿಸಿದರು, ವಿಕ್ರಮ ಅಷ್ಟಗಿ ವಂದಿಸಿದರು. ಕಾರ್ಮಿಕ ಗೀತೆ ಕಲಾವಿದ ಕಾಶಿನಾಥ ಬಿರಾದಾರ, ಕಲ್ಯಾಣಿ ತುಕಾಣಿ ಹಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.