ತುಳಿದು ಬದುಕದೇ ತಿಳಿದು ಬದುಕಿ: ಯಳಸಂಗಿ
Team Udayavani, Jan 21, 2022, 12:14 PM IST
ಕಲಬುರಗಿ: ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವದೇ ಶ್ರೇಷ್ಠ, ತುಳಿದು ಬದುಕಿರುವವರು ಬಹುಬೇಗ ಅಳಿಯುತ್ತಾರೆ, ಆದರೆ ತಿಳಿದು ಬದುಕಿರುವವರು ಅಳಿದ ಮೇಲೂ ಉಳಿಯುತ್ತಾರೆ. ಈ ಸಾಲಿಗೆ ಸೇರಿದ ಆಧುನಿಕ ಮಹಾಸಂತ ತುಮಕೂರಿನ ಸಿದ್ಧಗಂಗಾ ಶಿವಕುಮಾರ ಮಹಾ ಸ್ವಾಮೀಜಿ ಎಂದು ಹೋರಾಟಗಾರ ಪ್ರಭುದೇವ ಯಳಸಂಗಿ ಹೇಳಿದರು.
ನಗರದ ಆಳಂದ ರಸ್ತೆಯ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಮ್ಮಿಕೊಂಡಿರುವ ತುಮಕೂರನ ದಿ. ಡಾ| ಶಿವಕುಮಾರ ಮಹಾಸ್ವಾಮಿಗಳ ಸ್ಮರಣೋತ್ಸವದ ಮುನ್ನಾ ದಿನದ ಕಾರ್ಯಕ್ರಮದ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಕಾಯಕ ಜೀವಿಗಳನ್ನು ಸನ್ಮಾನಿಸಿ, ಅವರು ಮಾತನಾಡಿದರು.
ಸಂಘವು ಎಲೆಮರೆ ಕಾಯಿಯಂತೆ ಸೇವೆ ಮಾಡುತ್ತಿರುವುದನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ. ಈ ಭಾಗದ ಸಾಹಿತಿಗಳು, ಲೇಖಕರು, ಕಲಾವಿದರನ್ನು ರಾಜ್ಯಮಟ್ಟಕ್ಕೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಮಾತನಾಡಿ, ಜಾತಿ, ಮತ, ಪಂಥ, ಮೀರಿ ಬೆಳೆದು ಸಮಸಮಾಜ ನಿರ್ಮಾಣ ಮಾಡಲು ಪೂಜ್ಯರ ಪರಿಶ್ರಮ ಅಪಾರವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಇಂತಹ ಮಹಾನ್ ವ್ಯಕ್ತಿಗಳೇ ಆದರ್ಶವಾಗಬೇಕೆಂದು ಹೇಳಿದರು. ರಘುನಂದನ ಕುಲಕರ್ಣಿ, ಮಲಕಾರಿ ಪೂಜಾರಿ, ಲಕ್ಷ್ಮೀ ಧಾಕಲಿ, ಕಲ್ಯಾಣಿ ತುಕ್ಕಾಣಿ, ಜನಪದ ಕಲಾವಿದ ರಾಜು ಹೆಬ್ಟಾಳ ಇತರರು ಇದ್ದರು. ಇದೆ ಸಂದರ್ಭದಲ್ಲಿ ಕೇದಾರನಾಥ ಎಸ್. ಕುಲಕರ್ಣಿ, ರವಿಕುಮಾರ ಶಹಾಪುರಕರ, ಪಾಂಡುರಂಗ ಕಟಕೆ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸುಲ್ತಾನಾ ಯಾದಗಿರ, ರಂಜಿತಾ ಶ್ರೀಚಂದ, ಅಶ್ವಿನಿ ಆಚಾರ್ಯ, ತ್ರಿವೇಣಿ ಹಾಗೂ ಸಂಘದ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.