ಜೇರಟಗಿಯಲ್ಲಿ ಅಜಯಸಿಂಗ್‌ ಗ್ರಾಮ ವಾಸ್ತವ್ಯ

ಉಳ್ಳವರನ್ನು ಮಾತ್ರ ಕಡೆ ನೋಡಬೇಡಿ. ಬಡವರ ಕಡೆ ನೋಡಿ, ರೇಷನ್‌ ಸರಿಯಾಗಿ ಸಿಗುತ್ತಿಲ್ಲ.

Team Udayavani, Jan 29, 2021, 3:40 PM IST

ಜೇರಟಗಿಯಲ್ಲಿ ಅಜಯಸಿಂಗ್‌ ಗ್ರಾಮ ವಾಸ್ತವ್ಯ

ಕಲಬುರಗಿ: ಜೇವರ್ಗಿ ಕ್ಷೇತ್ರದ ಶಾಸಕ ಡಾ| ಅಜಯಸಿಂಗ್‌ ತಮ್ಮ ಜನ್ಮದಿನ ಆಚರಿಸಿಕೊಳ್ಳದೇ ತಾಲೂಕಿನ ಕೊನೆ ಹಳ್ಳಿಯಾದ ಜೇರಟಗಿ ಗ್ರಾಮದಲ್ಲಿ ಗುರುವಾರ ರಾತ್ರಿ ವಾಸ್ಯವ್ಯ ಮಾಡಿದರು. ಕಲಬುರಗಿ- ವಿಜಯಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲಿರುವ ರಾತ್ರಿ 9:10ರ ಸುಮಾರಿಗೆ ಜೇರಟಗಿ ಗ್ರಾಮಕ್ಕೆ ಆಗಮಿಸಿದ ಶಾಸಕರನ್ನು ಡೊಳ್ಳು, ಬಾಜಾ-ಭಜಂತ್ರಿಗಳಿಂದ ಗ್ರಾಮಸ್ಥರು ಸ್ವಾಗತಿಸಿದರು.

ಜೇರಟಗಿ ಗ್ರಾಮದ ಮೋದಿನಸಾಬ ಹಣಗಿಕಟ್ಟಿ ಮನೆಯಲ್ಲಿ ಊಟ ಮಾಡಿ ಕುಟುಂಬದ ಮಾಹಿತಿ ಪಡೆದುಕೊಂಡ ಶಾಸಕರು ತದನಂತರ ಗ್ರಾಮದ ಸರ್ಕಾರಿ
ಶಾಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಸಿದರು. ರಾತ್ರಿ ಮೋದಿನಸಾಬ್‌ ಮನೆಯಲ್ಲಿ ತಂಗಿದರು. ಕೇವಲ ಮೂರು ಎಕರೆ ಹೊಲ ಹೊಂದಿರುವ ಮೋದಿನಸಾಬ್‌ ಮನೆಯ ಹಿಂದಿನ ಭಾಗ ಭಾಗಶಃ ಕಳೆದ ಮಳೆಗಾಲದಲ್ಲಿ ಬಿದ್ದಿದ್ದು, ಈಗ ಪತ್ರಾಸ ಹಾಕಲಾಗಿದೆ.

ಮೋದಿನಸಾಬ್‌ ಹೊಲದ ಬೆಳೆಯು ಅತಿಯಾದ ಮಳೆಯಿಂದ ಹಾನಿಯಾಗಿದೆ. ಇವರಿಗೆ ನಾಲ್ವರು ಮಕ್ಕಳಿದ್ದಾರೆ. ಶಾಸಕರ ವಾಸ್ತವ್ಯಕ್ಕಾಗಿ ಶೌಚಾಲಯ ನಿರ್ಮಿಸಲಾಗಿದೆ. ಒಟ್ಟಾರೆ ಜೇರಟಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಮಾಲೀಕ ಮೋದಿನ್‌ಸಾಬ್‌ ಖುಷಿಯಲ್ಲಿದ್ದಾರೆ. ಶಾಸಕರು ತಮ್ಮೂರಿಗೆ ಬಂದು ಮನೆಯಲ್ಲೇ ಮೊಕ್ಕಾಂ ಮಾಡುತ್ತಿದ್ದಾರಲ್ಲ ಎನ್ನುವ ಸಂತಸದಲ್ಲಿದ್ದಾರೆ. ತಮ್ಮ ಮನೆಯಲ್ಲೇ ವಾಸ್ತವ್ಯ ಹೂಡೋದನ್ನ ತುಂಬು ಹೃದಯದಿಂದ ಸ್ವಾಗತಿಸಿರುವ ಮೋದಿನ್‌ ಸಾಬ್‌ ಶಾಸಕರು ಊರಿಗೆ ಬಂದು ಜನರ ಸಮಸ್ಯೆ ಆಲಿಸುವುದೇ ತಮಗೆ ಖುಷಿ ಎಂದಿದ್ದಾರೆ.

ಜನ್ಮ ದಿನ: ಜ. 29ರಂದು ಶಾಸಕ ಡಾ| ಅಜಯಸಿಂಗ್‌ 47ನೇ ಜನ್ಮ ದಿನ. ಶುಕ್ರವಾರದಂದು ಅಜಯಸಿಂಗ್‌ ಶೋಷಿತ ಸಮುದಾಯದ ಕೂಲಿ ಕಾರ್ಮಿಕ ರಮೇಶ ಹೊಸ್ಮನಿ ಅವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಲಿದ್ದಾರೆ. ರಮೇಶ ಕೂಲಿ ಕಾರ್ಮಿಕನಾದರೂ ಶಾಸಕರಿಗಾಗಿ ಸಂತೋಷದಿಂದ
ಉಪಹಾರ ಸಿದ್ಧಪಡಿಸೋದಾಗಿ ಹೇಳಿದ್ದು ಇದು ತನಗೆ ದೊರಕಿರುವ ಅವಕಾಶ ಎಂದಿದ್ದಾನೆ. ಅಲ್ಪಸಂಖ್ಯಾತರ ಮನೆಯಲ್ಲಿ ವಾಸ್ತವ್ಯ, ಪರಿಶಿಷ್ಟ ಜಾತಿ ಸಮುದಾಯದವರ ಮನೆಯಲ್ಲಿ ಉಪಹಾರ ಮಾಡುವ ಮೂಲಕ ತಾವು ಸಾಮರಸ್ಯದ ಸಂದೇಶ ಸಾರುತ್ತಿರೋದಾಗಿ ಅಜಯಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಪ್ರತಿ ತಿಂಗಳು ಗ್ರಾಮ ವಾಸ್ತವ್ಯ
ಕಲಬುರಗಿ: ತಮ್ಮ ಜನ್ಮ ದಿನದಂದು ಆರಂಭಿಸಲಾಗಿರುವ ಈ ಗ್ರಾಮ ವಾಸ್ತವ್ಯವನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಶಾಸಕ ಡಾ| ಅಜಯಸಿಂಗ್‌ ತಿಳಿಸಿದರು. ಮೋದಿನಸಾಬ್‌ ಮನೆಯಲ್ಲಿ ಊಟ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ಕಡ್ಡಾಯವಾಗಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ಈ ವಾಸ್ತವ್ಯದಿಂದ ಗ್ರಾಮದ ಸಮಸ್ಯೆ ಏನು ಎಂಬುದು ತಮಗೆ ಮನವರಿಕೆ ಆಗುತ್ತದೆ. ಇದರಿಂದ ಅನುದಾನ ತರಲು ಅನುಕೂಲವಾಗುತ್ತದೆ. ಅಲ್ಲದೇ ಯಾವ ಕಾರ್ಯಕ್ಕೆ ಬಳಸಬೇಕೆಂಬುದು ಇದರಿಂದ ಗೊತ್ತಾಗುತ್ತದೆ. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬಹುದಾಗಿದೆ.

ದೊಡ್ಡ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಗ್ರಾಮ ವಾಸ್ತವ್ಯ ಮಾಡಿದ ತಕ್ಷಣ ಎಲ್ಲ ಸಮಸ್ಯೆ ಬಗೆಹರಿಯತ್ತವೆ ಎಂಬುದಿಲ್ಲ. ಹಳ್ಳಿ-ಹಳ್ಳಿ ನಡುವೆ ಸಮಸ್ಯೆ ಬೇರೆ- ಬೇರೆ ಯಾಗಿರುತ್ತವೆ. ಇದೆಲ್ಲ ವಾಸ್ತವ್ಯದಿಂದ ಗೊತ್ತಾಗುತ್ತದೆ ಎಂದು ಹೇಳಿದರು. ಈ ಗ್ರಾಮ ವಾಸ್ತವ್ಯ ಚುನಾವಣೆಗೆ ಮಾಡುತ್ತಿಲ. ಗ್ರಾಮಗಳು ಯಾವ್ಯಾವು ಅಭಿವೃದ್ಧಿಯಾಗಿವೆ ಎಂದು ಮನವರಿಕೆ ಮಾಡಿಕೊಳ್ಳಲು ಮತ್ತು ಸಮಸ್ಯೆಗಳನ್ನು ಅರಿಯಲು, ಕಟ್ಟಕಡೆ ವ್ಯಕ್ತಿಗೆಸ್ಪಂದಿಸಲು ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲಾಗಿದೆ. ನಾನು ವಿಧಾನಸಭೆ ಮುಖ್ಯಸಚೇತಕನಾಗಿದ್ದು, ಸಮಸ್ಯೆಗಳನ್ನು ವಿಧಾನಸಭೆಯಲ್ಲಿಗಮನಕ್ಕೆ ತರುವೆ. ಮುಂದಿನ ತಿಂಗಳು ಯಡ್ರಾಮಿ ತಾಲೂಕಿನಲ್ಲಿ ಒಂದು ಗ್ರಾಮ ಆಯ್ಕೆಮಾಡಿಕೊಳ್ಳುವೆಎಂದು ನಂತರ ನಡೆದ ಸಮಾರಂಭದಲ್ಲಿ ಹೇಳಿದರು.

ಪಾದಯಾತ್ರೆ-ಗ್ರಾಮ ಪ್ರದಕ್ಷಿಣೆ
ಜ. 29ರಂದು ಜೇರಟಗಿ ಗ್ರಾಮ ಪ್ರದಕ್ಷಿಣೆ ಮಾಡುವ ಶಾಸಕರು ಪಾದಯಾತ್ರೆಯಲ್ಲಿಯೇ ಊರನ್ನು ಸುತ್ತಿ , ಪ್ರದಕ್ಷಿಣೆ ಮಾಡುವ ಮೂಲಕ ಜನರನ್ನು ಭೇಟಿ ಮಾಡಲಿದ್ದಾರೆ. ಇದಾದ ನಂತರ ಊರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಅಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಿದ್ದಾರೆ. ಇದರ ಅಂಗವಾಗಿ ಆಸ್ಪತ್ರೆ ಪರಿಸರದಲ್ಲಿ ಕಸ ಗೂಡಿಸುವ ಮೂಲಕ ಸ್ವಚ್ಚತಾ ಅಭಿಯಾನದ ಸಂದೇಶ ಸಾರಲಿದ್ದಾರೆ. ಇಲ್ಲಿಂದ ಮತ್ತೆ ಮೋದೀನ್‌ಸಾಬ್‌ ಮನೆಗೆ ಹೋಗಿ ಬೆಳಗಿನ ಸ್ನಾನಾದಿಗಳನ್ನು ಪೂರೈಸಿ ಅಲ್ಲಿಂದ ಊರಲ್ಲಿರುವ ರೇವಣಸಿದ್ಧೇಶ್ವರ ಹಾಗೂ ಚೆನ್ನಬಸವೇಶ್ವರ ಮಂದಿರಗಳಿಗೆ ತೆರಳಿ ದೇವರ ದರ್ಶನ ಪಡೆದ ನಂತರ ರಮೇಶ ಹೊಸ್ಮನಿ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಲಿದ್ದಾರೆ.

ತದನಂತರ ಎರಡು ಗಂಟೆಗಳ ಕಾಲ ಊರಲ್ಲಿ ಜನರೊಂದಿಗೆ ಸಂವಾದಿಯಾಗುವ ಶಾಸಕರು ಜನರ ಅಹವಾಲುಗಳನ್ನು ದಾಖಲೆ ಮಾಡಿಕೊಳ್ಳಲಿದ್ದಾರೆ. ಇದಾದ ನಂತರ ಜೇರಟಗಿಯಲ್ಲಿ ಅಂದು ನಡೆಯುತ್ತಿರುವ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶಾಸಕರು ಮೊದೀನಸಾಬ್‌ ಮನೆಯಲ್ಲಿ ಖಡಕ್‌ ಬಿಳಿ ಜೋಳ ರೊಟ್ಟಿ, ಸಜ್ಜೆ ರೊಟ್ಟಿ, ಬದನೆ ಕಾಯಿ ಪಲ್ಲೆ, ಹಿಂಡಿ ಪಲ್ಲೆ, ಕಾಳು ಪಲೆÂ, ಮೊಸರು ಹಿಂಡಿ, ಅನ್ನ ಸಾರು ಸವಿದರು.

ಶಾಸಕರ ಜತೆಯಲ್ಲಿ ತಹಶೀಲ್ದಾರ್‌ ಸಿದ್ಧರಾಯ ಭೋಸಗಿ, ತಾಲೂಕು ವೈದ್ಯಾಧಿಕಾರಿ ಡಾ| ಸಿದ್ದು ಪಾಟೀಲ, ತಾಲೂಕು ಪಂಚಾಯತ್‌ ಇಒ ವಿಲಾಸರಾಜ್‌, ಮುಖಂಡರಾದ ರಾಜಶೇಖರ ಸಿರಿ, ಅಣ್ಣಾರಾಯ ನಿಷಿ ದೇಶಮುಖ, ಚಂದ್ರಶೇಖರ ಪುರಾಣಿಕ, ಹಣಮಂತ ಭೂಸನೂರ, ಗಿರೀಶ ವಿಜಯಾಪುರ, ಭೂಬಾ ತಿವಾರಿ, ಮಲ್ಲಿಕಾರ್ಜುನ ಬೂದಿಹಾಳ, ವಿಜಯಕುಮಾರ ಕಲ್ಲಹಂಗರಗಾ, ವಿಜಯಕುಮಾರ ಬಿರಾದಾರ, ಧರ್ಮರಾಯ ಜೋಗುರ ಹಾಗೂ ಮಹಾಂತ ಸ್ವಾಮೀಜಿ ಇದ್ದರು.

ಸಮಸ್ಯೆ ತೋಡಿಕೊಂಡ ಮಹಿಳೆಯರು: ಶಾಸಕ ಡಾ| ಅಜಯಸಿಂಗ್‌ ಮೋದಿನಸಾಬ್‌ ಮನೆಯಲ್ಲಿ ಊಟ ಮುಗಿಸಿ ಹೊರಬರುತ್ತಿದ್ದಂತೆ ಗ್ರಾಮದ ಮಹಿಳೆಯರು, ಉಳ್ಳವರನ್ನು ಮಾತ್ರ ಕಡೆ ನೋಡಬೇಡಿ. ಬಡವರ ಕಡೆ ನೋಡಿ, ರೇಷನ್‌ ಸರಿಯಾಗಿ ಸಿಗುತ್ತಿಲ್ಲ. ಮೊನ್ನೆಯ ಮಳಾಗ ಮನೆ ಬಿದ್ದು, ಹೊರಗ ಬಿದ್ದಿವಿ. ವಿಧವಾ ಮಾಸಾಶನ ವೂ ಸಿಕ್ತಾ ಇಲ್ಲ ಎಂದು ಗೋಳು ತೋಡಿಕೊಂಡರು. ಮಹಿಳೆಯರು ಶೌಚಾಲಯ ಇಲ್ಲದಿದ್ದಕ್ಕೆ ಕಷ್ಟ ಅನುಭವಿಸುತ್ತಿದ್ದೇವೆ ಎಂದು ಹೇಳಿದರು. ಶಾಸಕರು, ತಮ್ಮ ಸಮಸ್ಯೆಗಳನ್ನು ಖುದ್ದಾಗಿ ಅರಿಯಲು ತಮ್ಮ ಬಳಿ ಬಂದಿದ್ದೇನೆ. ಹಂತ-ಹಂತವಾಗಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.