ಮುಂಗಾರು ಪೂರ್ವ ಮಳೆ; ಕೃಷಿ ಚಟುವಟಿಕೆ ಚುರುಕು
Team Udayavani, Jun 4, 2022, 10:55 AM IST
ಚಿಂಚೋಳಿ: ತಾಲೂಕಿನಲ್ಲಿ ಮುಂಗಾರು ಪೂರ್ವದಲ್ಲೇ ಅಲ್ಪಮಟ್ಟಿಗೆ ಮಳೆ ಆಗಿರುವುದರಿಂದ ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ತಮ್ಮ ಹೊಲಗಳಲ್ಲಿರುವ ಕಸಕಡ್ಡಿಗಳನ್ನು ತೆಗೆದು ಹಾಕುತ್ತಿದ್ದಾರೆ.
ತಾಲೂಕಿನಲ್ಲಿ ಮೇ ಕೊನೆ ವಾರದಲ್ಲಿ ಸಿಡಿಲು, ಮಿಂಚು, ಗುಡುಗು, ಬಿರುಗಾಳಿ ಸಮೇತ ಬಿದ್ದ ಅಲ್ಪಮಳೆಯಿಂದ ಭೂಮಿ ಸ್ವಲ್ಪಮಟ್ಟಿಗೆ ಹದವಾಗಿದೆ. ಆದ್ದರಿಂದ ರೈತರು ತಮ್ಮ ಹೊಲಗಳಲ್ಲಿ ಕಳೆದ ವರ್ಷ ಬಿತ್ತನೆ ಮಾಡಿದ ಬೆಳೆಗಳ ಕಟಾವು ಮಾಡಿದ ತೊಗರಿ ಕಟ್ಟಿಗೆ, ಜೋಳದ ದಂಟು ತೆಗೆದು ಹಾಕಿ ಹೊಲದಲ್ಲಿಯೇ ಸುಟ್ಟು ಹಾಕುತ್ತಿದ್ದಾರೆ. ಕುಂಚಾವರಂ, ಸುಲೇಪೇಟ, ಚಿಮ್ಮನಚೋಡ, ಐನಾಪುರ, ಕೋಡ್ಲಿ,ನಿಡಗುಂದಾ, ಚಿಂಚೋಳಿ, ಚಂದನಕೇರಾ, ಗಡಿಕೇಶ್ವಾರ, ರುದನೂರ, ರಾಯಕೋಡ, ಮಿರಿಯಾಣ, ಕನಕಪುರ, ಸಾಲೇಬೀರನಳ್ಳಿ ಇನ್ನಿತರ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ.
ಮುಂಗಾರು ಬಿತ್ತನೆಗಾಗಿ ರೈತರು ತಮ್ಮ ಮನೆಯಲ್ಲಿ ಸಂಗ್ರಹ ಮಾಡಿರುವ ಬಿತ್ತನೆ ಬೀಜಗಳನ್ನು ಶುಚಿಗೊಳಿಸಿದ್ದಾರೆ. ಅಲ್ಲದೇ ಖೂರಿಗೆ, ಬಿತ್ತನೆ ಬೀಜಕ್ಕಾಗಿ ಉಡಿ ಚೀಲ, ಡಿಎಪಿ, ಯೂರಿಯಾ ರಸಗೊಬ್ಬರ ಖರೀದಿಸಿ ಮಳೆರಾಯನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ತಾಲೂಕಿನಲ್ಲಿ ಕಳೆದ ವರ್ಷ ಮೇ 28ರಂದು ಮುಂಗಾರು ಪ್ರಾರಂಭವಾಗಿ ಜೂ. 8ರ ವರೆಗೆ ಸತತವಾಗಿ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದರು. ಆದರೆ ಪ್ರಸಕ್ತ ಸಾಲಿನಲ್ಲಿ ಇನ್ನು ಉತ್ತಮ ಮಳೆ ಬೀಳದ ಕಾರಣ ಬಿತ್ತನೆ ಕಾರ್ಯ ಪ್ರಾರಂಭವಾಗಿಲ್ಲ. ಹೀಗಾಗಿ ತಮ್ಮ ಹೊಲಗಳಲ್ಲಿರುವ ಕಸ-ಕಡ್ಡಿಗಳನ್ನು ಸುಟ್ಟು ಹಾಕುತ್ತಿದ್ದಾರೆ. ಮಳೆ ನೀರು ಹೊಲದಲ್ಲಿ ನಿಲ್ಲದಂತೆ ಬದು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.
ತಾಲೂಕಿನಲ್ಲಿ ಜೂನ್‌ನಲ್ಲಿ ಮೃಗಶಿರಾ ಮುಗಿದ ನಂತರ ಮಳೆ ಬೀಳುವ ಸಾಧ್ಯತೆ ಇದೆ. ಕೇರಳದಲ್ಲಿ ಮುಂಗಾರು ಪ್ರವೇಶ ಆಗಿರುವುದರಿಂದ ನಮ್ಮ ರಾಜ್ಯದಲ್ಲಿ ಮಳೆ ಇನ್ನು ಪ್ರಾರಂಭ ಆಗಬೇಕಾದರೆ (ಮಿರಗ) ಕಾಯಬೇಕಾಗುತ್ತದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೊಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.