ಈಜಿಪ್ತ್ ನ ಮನೆ ಮಹಡಿ ಮೇಲೆ ದೇಶಿ ತರಕಾರಿ ಬೆಳೆಸಿದ ಕನ್ನಡಿಗ


Team Udayavani, May 7, 2020, 12:09 PM IST

7-May-06

ಮುದ್ದೇಬಿಹಾಳ: ಈಜಿಪ್ತ್ ನ ಕೈರೋದ ತಮ್ಮ ಮನೆಯ ಟೆರೇಸಿನಲ್ಲಿ ಡಾ| ಚಂದ್ರಶೇಖರ ಬಿರಾದಾರ ಅವರು ಬೆಳೆಸಿರುವ ತರಕಾರಿ.

ಮುದ್ದೇಬಿಹಾಳ: ಕೋವಿಡ್ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್‌ಡೌನ್‌ದಿಂದಾಗಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅನಿವಾರ್ಯತೆ ಅನೇಕರಿಗೆ ಇದೆ. ಇದನ್ನು ಸದಉಪಯೋಗ ಪಡಿಸಿಕೊಂಡ ಈಜಿಪ್ತ್ ನ ಕೈರೋದ ವಿಶ್ವವಿಖ್ಯಾತ ಪಿರ್ಯಾಮಿಡ್‌ ಬಳಿ ವಾಸವಿರುವ ಕನ್ನಡಿಗ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಡಾ| ಚಂದ್ರಶೇಖರ ಬಿರಾದಾರ ಮನೆ ಟರೇಸ್‌ ಮೇಲೆ ವಿವಿಧ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ.

ಢವಳಗಿ ಗ್ರಾಮದ ಡಾ| ಚಂದ್ರಶೇಖರ ಬಿರಾದಾರ ಕೃಷಿ ವಿಜ್ಞಾನಿಯಾಗಿದ್ದಾರೆ. ವಿವಿಧ ವಿದೇಶಿ ಕಂಪನಿಗಳಲ್ಲಿ ಭಾರತದ ಪ್ರತಿನಿಧಿಯಾಗಿ ಮಹತ್ವದ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದು, ಅಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಈಜಿಪ್ತ್ನಿಂದಲೇ ಉದಯವಾಣಿ ಜತೆ ಮಾತನಾಡಿದ್ದಾರೆ. ಈಜಿಪ್ತ್ನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಕೋವಿಡ್ ಹಾವಳಿ ಇದೆ. ಕನ್ನಡಿಗರೆಲ್ಲ ಒಂದೇ ಕಡೆ ನೆಲೆಸಿದ್ದೇವೆ. ಎಲ್ಲರೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸೋಂಕಿನಿಂದ ಸುರಕ್ಷಿತವಾಗಿದ್ದೇವೆ. ನಾವೆಲ್ಲ ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಬಿಡುವಿನ ಅವಧಿಯಲ್ಲಿ ಮನೆಯ ಟೆರೇಸ್‌ ಸೇರಿದಂತೆ ಲಭ್ಯ ಜಾಗದಲ್ಲಿ ಹೂವು, ತರಕಾರಿ ಬೆಳೆಯುತ್ತಿದ್ದೇವೆ. ಈ ಮೂಲಕ ದೇಶೀಯತೆಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿ ಸಣ್ಣ ಸ್ಥಳ ಇದ್ದರೆ ಸಾಕು ಅಂದಾಜು 50 ತರಹದ ತರಕಾರಿ ಬೆಳೆಯಬಹುದು. ಬಳಕೆ ಇಲ್ಲದ ಕಂಟೇನರ್‌ಗಳನ್ನು ಇದಕ್ಕಾಗಿ ಉಪಯೋಗಿಸಬಹುದು. 5 ಹಂತ ಮಾಡಿಕೊಂಡು ಮೊದಲ ಹಂತದಲ್ಲಿ ಗಜ್ಜರಿ, ಬೀಟರೂಟ್‌, ಈರುಳ್ಳಿ, ಬಳ್ಳೊಳ್ಳಿ, ಬಟಾಟಿ, ಮೂಲಂಗಿ, ಅರಿಷಿಣ, ಶುಂಠಿ, ಹೂಕೋಸು, ಗೆಣಸು, ಎರಡನೇ ಹಂತದಲ್ಲಿ ಎಲೆ ಬಿಡುವ ತರಕಾರಿಗಳಾದ ಮೆಂತೆಪಲ್ಲೆ, ಕೊತ್ತಂಬರಿ, ಸಬ್ಬಸಿಗೆ, ರಾಜಗಿರಿ, ಕಿರಕ್‌ ಸಾಲಿ, ದೊಡ್ಡಗೋಣಿ ಸೊಪ್ಪು, ಪಾಲಕ್‌, ಅರ್ಗುಲಾ, ಹುಣಸಿಕಿ ಮುಂತಾದ ಹಸಿರು ತರಕಾರಿ, ಮೂರನೇ ಹಂತದಲ್ಲಿ ಬದನೆಕಾಯಿ, ಮೆಣಸಿನಕಾಯಿ, ಬೀನ್ಸ್‌, ಟೊಮ್ಯಾಟೊ, ಕಾಲಿಫ್ಲವರ್‌, ಬಟಾಣಿ, ಕೋಸುಗಡ್ಡೆ, ಬ್ರೂಸೆಲ್‌ ಮೊಗ್ಗು, ಖಲೋರ್ಬಿ ಮುಂತಾದವು, ನಾಲ್ಕನೇ ಹಂತದಲ್ಲಿ ತೊಂಡೆ, ಸವತಿಕಾಯಿ, ಅವರೆ, ಚಳ್ಳಂಬರಿ ಸೇರಿ ಬಳ್ಳಿಯಲ್ಲಿ ಬೆಳೆಯುವ ತರಕಾರಿ. ಐದನೇ ಹಂತದಲ್ಲಿ ನುಗ್ಗೇಕಾಯಿ ಸೇರಿ ಎತ್ತರದಲ್ಲಿ ಬೆಳೆಯುವ ತರಕಾರಿ ಹೀಗೆ ಹತ್ತು ಹಲವು ಬಗೆಹ ತರಕಾರಿ ಬೆಳೆಯಬಹುದು ಎನ್ನುತ್ತಾರೆ ಅವರು.

ಈ ರೀತಿ ಮಾಡುವುದರಿಂದ ಮನೆಯ ವಾತಾವರಣವೂ ತಂಪಾಗಿರುತ್ತದೆ. ಆಹ್ಲಾದಕರ ಗಾಳಿ ಬೀಸುತ್ತಿರುತ್ತದೆ. ಈ ಪದ್ಧತಿಯಲ್ಲಿ ಬೆಳೆದ ತರಕಾರಿಗಳಲ್ಲಿ ಹೆಚ್ಚಿನ ಫಲ ಕೊಡುವ ಶಕ್ತಿ ಇರುತ್ತದೆ ಜೊತೆಗೆ ರುಚಿ, ಗುಣಮಟ್ಟ, ಬಾಳಿಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ. ಇಂಥ ಪರಿಸರ ಮನೆಯಲ್ಲಿ ನಿರ್ಮಿಸುವುದರಿಂದ ಹಕ್ಕಿಗಳು ಅಲ್ಲಿ ಬಂದು ಹೋಗಿ ಮಾಡುವುದರಿಂದ ಪಕ್ಷಿಗಳ ಕಲರವವೂ ಮನಕ್ಕೆ ಮುದ ನೀಡುವಂತಿರುತ್ತದೆ. ಕೊರೊನಾ ರೋಗದಿಂದ ಪಾರಾಗಲು ಇದು ಸೂಕ್ತ ಕ್ರಮವಾಗಿದೆ ಎಂದಿದ್ದಾರೆ.

ಡಿ.ಬಿ.ವಡವಡಗಿ

ಟಾಪ್ ನ್ಯೂಸ್

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.