ಕೇಂದ್ರೀಯ ವಿವಿ ಪದವೀಧರರಿಗಿಲ್ಲ ಟೀಚರ್‌ ಭಾಗ್ಯ!


Team Udayavani, Apr 9, 2022, 10:38 AM IST

3teachers

ಆಳಂದ: ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ಲ್ಲಿ ಬಿಎ (ಆನರ್ಸ್‌) ಪದವಿಗಳಂತಹ ಕೋರ್ಸ್‌ ಮುಗಿಸಿ, ಬಿಇಡಿ ಮಾಡಿದ ನೂರಾರು ಅಭ್ಯರ್ಥಿಗಳನ್ನು ರಾಜ್ಯ ಸರ್ಕಾರದ 6ರಿಂದ 8ನೇ ತರಗತಿಯ ಶಾಲಾ ಶಿಕ್ಷಕರ ನೇಮಕಾತಿಯಿಂದ ವಂಚಿತರನ್ನಾಗಿ ಮಾಡಲಾಗಿದೆ.

ಈಗಾಗಲೇ ಈ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು ಕೇಂದ್ರೀಯ ವಿವಿಯಲ್ಲಿ ಶಿಕ್ಷಣ ಪೂರೈಸಿದ ಆನರ್ಸ್‌ ಪದವೀಧರರಿಗೆ ಮಾತ್ರ ಕರ್ನಾಟಕದಲ್ಲಿ ಭಾಷಾ ಶಿಕ್ಷಕರಾಗಲು ಶಿಕ್ಷಣ ಇಲಾಖೆ ನಿಯಮದಿಂದ ಹೊರಗಿಡಲಾಗಿದೆ. ಇದರಿಂದ ಆಕಾಂಕ್ಷಿಗಳು ದಿಕ್ಕು ತೋಚದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಸಿಎನ್‌ಆರ್‌ ನಿಯಮದಂತೆ ಇಂಗ್ಲಿಷ್‌ ಭಾಷಾ ಶಿಕ್ಷಕರಾಗಲು ಇಂಗ್ಲಿಷ್‌ ಐಚ್ಛಿಕ ವಿಷಯದ ಜತೆಗೆ ಇತರೆ ಭಾಷೆಗಳಾದ ಕನ್ನಡ, ತೆಲುಗು, ಮರಾಠಿ ಹೀಗೆ ಇತರ ಭಾಷೆ ಓದಿರಬೇಕು ಎನ್ನುವ ನಿಯಮವಿದೆ. ಹೀಗಾಗಿ ಕೇಂದ್ರೀಯ ವಿವಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಇಂಗ್ಲಿಷ್‌ನೊಂದಿಗೆ ಇತರೆ ಭಾಷೆ ಓದಿಲ್ಲ. ಇದೇ ಕಾರಣಕ್ಕೆ ಅವರನ್ನು ಶಿಕ್ಷಕರ ನೇಮಕಾತಿಯಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಆಕಾಂಕ್ಷಿಗಳು ಅಳಲು ತೋಡಿಕೊಂಡಿದ್ದಾರೆ.

ಭರವಸೆ ಈಡೇರಿಸಿಲ್ಲ: ಈ ಕುರಿತು ಅನೇಕ ಬಾರಿ ಶಿಕ್ಷಣ ಸಚಿವರಿಗೆ ಮನವಿ ಮಾಡಿದಾಗ ಈ ಅಭ್ಯರ್ಥಿಗಳನ್ನು ಪರಿಗಣಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಬದಲಾವಣೆಗಳಿಲ್ಲದೇ ಹಳೆಯ ನಿಯಮಾಳಿಯಂತೆ ಕಳೆದ ಮಾ.23ರಂದು ನೇಮಕಾತಿ ಕುರಿತು ಆನ್‌ಲೈನ್‌ ಪ್ರಕ್ರಿಯೆ ಪ್ರಾರಂಭವಾಗಿದೆ. 2009ರಲ್ಲಿ ಪ್ರಾರಂಭವಾದ ಕೇಂದ್ರೀಯ ವಿವಿಯಲ್ಲಿ ಬಿಎ (ಆನರ್ಸ್‌) ಕೋರ್ಸ್‌ಗಳು 2010ರಿಂದ ಜಾರಿಯಲ್ಲಿವೆ. ನೂರಾರು ವಿದ್ಯಾರ್ಥಿಗಳು ಈ ಪದವಿ ಪೂರೈಸಿದ್ದಾರೆ.

ತಮ್ಮ ಮೂರು ವರ್ಷದ ಪದವಿ ಶಿಕ್ಷಣದ ವೇಳೆ ಇಂಗ್ಲಿಷ್‌ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿರುತ್ತಾರೆ. ಅಲ್ಲದೇ ಕನ್ನಡ, ಹಿಂದಿ, ಅರ್ಥಶಾಸ್ತ್ರ, ಇತಿಹಾಸ, ಮನೋವಿಜ್ಞಾನದಂತಹ ವಿವಿಧ ವಿಷಯಗಳನ್ನೂ ಎರಡು ವರ್ಷ ಅಧ್ಯಯನ ಮಾಡಿರುತ್ತಾರೆ. ಇದೇ ರೀತಿ ಐಚ್ಛಿಕ ವಿಷಯವನ್ನು ಅಧ್ಯಯನ ಮಾಡಿರುತ್ತಾರೆ. ಯುಜಿಸಿ ನಿಯಮದಂತೆ ಈ ರೀತಿಯ ಪಠ್ಯಕ್ರಮ ಹೊಂದಿದ್ದು, ಅನೇಕ ರಾಜ್ಯ ಮತ್ತು ಹೊರರಾಜ್ಯದ ವಿದ್ಯಾರ್ಥಿಗಳು ಪದವಿ ಪೂರೈಸಿದ್ದಾರೆ. ಇಂಥ ಪಠ್ಯಕ್ರಮ ಮತ್ತು ವಿಶ್ವವಿದ್ಯಾಲಯಕ್ಕೆ ರಾಜ್ಯ ಸರ್ಕಾರದಿಂದ ಮಾನ್ಯತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಕರ್ನಾಟಕ ಕೇಂದ್ರೀಯ ವಿವಿ ಅರ್ಹ ವಿದ್ಯಾರ್ಥಿಗಳು ಟಿಇಟಿ ಹಾಗೂ ಸಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದರೂ ಇಂತಹ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಇಲಾಖೆ ನಿಯಮಗಳಲ್ಲಿ ಅವಕಾಶ ಕಲ್ಪಿಸದಿರುವುದು ವಿಪರ್ಯಾಸ.

ವಿದ್ಯಾರ್ಥಿಗಳ ಬೇಡಿಕೆ ಏನು?

ಕರ್ನಾಟಕ ರಾಜ್ಯಪತ್ರ ನಿಯಮಾವಳಿಯಲ್ಲಿ 6ರಿಂದ 8ನೇ ತರಗತಿ ಭಾಷಾ ಶಿಕ್ಷಕರಾಗಲು ಐಚ್ಛಿಕ ವಿಷಯದ ಜತೆ ಇನ್ನಿತರ ಭಾಷೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಕೊಂಕಣಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಂಸ್ಕೃತ ಭಾಷೆಗಳನ್ನು ಸತತವಾಗಿ ಬಿಎ ಪದವಿಯಲ್ಲಿ ಮೂರು ವರ್ಷ ಅಧ್ಯಯನ ಮಾಡಿರಬೇಕೆಂಬ ನಿಯಮವನ್ನು ತಿದ್ದುಪಡಿ ಮಾಡಿ, ಕರ್ನಾಟಕ ಕೇಂದ್ರೀಯ ಅಭ್ಯರ್ಥಿಗಳ ಆಂಗ್ಲ ಮತ್ತು ಇತರೆ ಭಾಷೆಗಳನ್ನು ಎರಡು ವರ್ಷ ಕಾಲ ಅಧ್ಯಯನ ಮಾಡಿದ್ದನ್ನು ಪರಿಗಣಿಸಿ ನಿಯಮ ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಬೇಕು. ಮತ್ತೊಂದೆಡೆ ಮೈಸೂರಿನ ರಿಜನಲ್‌ ಇನ್‌ಸ್ಟಿಟ್ಯೂಟ್‌ ಆಂಗ್ಲ ವಿಭಾಗದ ವಿದ್ಯಾರ್ಥಿಗಳಿಗೆ ಇದೇ ರೀತಿಯಿದ್ದ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ಅದೇ ರೀತಿ ಕೇಂದ್ರೀಯ ವಿವಿ ಸಮಸ್ಯೆಯನ್ನು ಬಗೆಹರಿಸಿ, ನಿಯಮಗಳನ್ನು ಸಡಿಲಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆ.

ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇಂಗ್ಲಿಷ್‌ ಶಿಕ್ಷಕರ ಕೊರತೆ ನೀಗಿಸುವುದು ಕೇಂದ್ರೀಯ ವಿವಿಯಲ್ಲಿ ಓದಿದ ಆಕಾಂಕ್ಷಿಗಳಿಗೆ ಅವಕಾಶ ಒದಗಿಸುವುದರಿಂದ ಸಾಧ್ಯವಾಗುತ್ತದೆ. ನಾವು ಉನ್ನತ ಅಧ್ಯಯನಶೀಲರಾಗಿದ್ದೇವೆ. ಎಂಜಿನಿಯರಿಂಗ್‌ ಓದಿದವರಿಗೆ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಟ್ಟಂತೆ ಇಂಗ್ಲಿಷ್‌ ಓದಿದವರಿಗೂ ಅವಕಾಶ ಮಾಡಿಕೊಟ್ಟು ನ್ಯಾಯ ನೀಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. 2021ರಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶ ಕುಮಾರ ಹಾಗೂ ಆಯುಕ್ತರು, ಶಶೀಲ ಜಿ. ನಮೋಶಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಕೇಂದ್ರೀಯ ವಿವಿ ನಿಕಟಪೂರ್ವ ವಿದ್ಯಾರ್ಥಿಗಳು.

ರಾಜ್ಯ ಸರ್ಕಾರ 6ರಿಂದ 8ನೇ ತರಗತಿ ಶಾಲಾ ಶಿಕ್ಷಕರ ನೇಮಕಾತಿಗೆ ಹೊರಡಿಸಿದ ಸಿಎನ್‌ಆರ್‌ ನಿಯಮಗಳಲ್ಲಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಬಿಎ ಆನರ್ಸ್‌ ಪದವಿ ಪಡೆದ ವಿದ್ಯಾರ್ಥಿಗಳನ್ನು ಕೈಬಿಡಲಾಗಿದೆ. ಸಿಎನ್‌ಆರ್‌ ನಿಯಮ ಸೂಕ್ತ ತಿದ್ದುಪಡಿ ಮಾಡಿ ವಿದ್ಯಾರ್ಥಿಗಳ ಅರ್ಹತೆ ಗುರುತಿಸಿ, ಅವರಿಗೂ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರಾಗಲು, ನೇಮಕಾತಿಯಲ್ಲಿ ಉದ್ಯೋಗ ಪಡೆಯಲು ಅವಕಾಶ ನೀಡಬೇಕು ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ವಿಸ್ತಾರವಾಗಿ ಪತ್ರ ಬರೆಯಲಾಗಿದೆ. -ಪ್ರೊ| ಬಸವರಾಜ ಡೋಣೂರ, ಕುಲಸಚಿವರು, ಕರ್ನಾಟಕ ಕೇಂದ್ರೀಯ ವಿವಿ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.