ಕ್ಷಯ ನಿವಾರಣೆಗೆ ಪೌಷ್ಟಿಕ ಆಹಾರ ಮುಖ್ಯ
Team Udayavani, Feb 5, 2022, 12:43 PM IST
ಕಲಬುರಗಿ: ಕ್ಷಯರೋಗ ನಿವಾರಿಸಲು ರೋಗಿಗಳಲ್ಲಿ ಜಾಗೃತಿ ಜತೆಗೆ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯವಾಗಿದೆಯಲ್ಲದೇ ಕ್ಷಯರೋಗಿಗೆ ಪೌಷ್ಟಿಕ ಪೌಡರ್ ನೀಡುತ್ತಿರುವ ರೋಟರಿ ಕ್ಲಬ್ ಸೇವೆ ಮಾದರಿಯಾಗಿದೆ ಎಂದು ಡಿಸಿಪಿ ಅಡ್ಮೂರು ಶ್ರೀನಿವಾಸಲು ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ರೋಟರಿ ಕ್ಲಬ್‌ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಸಾಕ್ಷಮ್ ಪರ್ವ ಟಾಟಾ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ರೋಟರಿ ಕ್ಲಬ್ ಆಫ್ ಗುಲಬುರ್ಗಾ ನಾರ್ಥ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕ್ಷಯರೋಗಿಗೆ ಪೌಷ್ಟಿಕ ಆಹಾರ ಪೌಡರ್ ವಿತರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷಯರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ನಿರಂತರ ಔಷಧಸೇವಿಸುವುದರಿಂದ ರೋಗ ಬೇಗ ಗುಣಮುಖವಾಗುತ್ತದೆ ಎಂದರು.
ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಮಾತನಾಡಿ, ಕ್ಷಯ ರೋಗದಿಂದ ಬಳಲುತ್ತಿರುವ ಬಡವರ, ನಿರ್ಗತಿಕರ ಸೇವೆಗೆ ಸಂಘ-ಸಂಸ್ಥೆಗಳು ಸೇವೆಗೆ ಮುಂದಾಗಬೇಕಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಧಿಕಾರಿ ಡಾ| ವಿವೇಕನಂದ ರೆಡ್ಡಿ ಮಾತನಾಡಿ, ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈ ಜೋಡಿಸುವುದರ ಜೊತೆಗೆ, ಜನರಿಗೆ ಕ್ಷಯರೋಗ ಲಕ್ಷಣಗಳ ಮಾಹಿತಿ ನೀಡಬೇಕು. ಅಂದಾಗ ರೋಗ ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರೋಟರಿ ಕ್ಲಬ್ ಗುಲ್ಬರ್ಗ ನಾರ್ತ್ ಅಧ್ಯಕ್ಷ ರಾಮಕೃಷ್ಣ ಬೋರಾಳ್ಕರ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗಿಯ ಕಾರ್ಯಕ್ರಮಾಧಿಕಾರಿ ಅಬ್ದುಲ್ ಶಫಿ ಅಹ್ಮದ್, ಜಿಲ್ಲಾ ಕ್ಷಯರೋಗ ಮೇಲ್ವಿಚಾರಕ ಸುರೇಶ ದೊಡ್ಡಮನಿ ಮುಂತಾದವರಿದ್ದರು.
ಎಚ್‌ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಪ್ರಮುಖರಾದ ಮಂಜುನಾಥ ಕಂಬಾಳಿಮಠ, ಶಶಿಧರ ಪಟ್ನಾಯಕ್, ಡಾ| ಶರಣಬಸಪ್ಪ ಸಜ್ಜನ್, ಶರಣಪ್ಪ ಸಿಂಗೆ, ಚಿತ್ರಶೇಖರ ಕಂಠಿ, ದಿನೇಶ್ ಪಾಟೀಲ, ಸುಹಾಸ ಬಣಗೆ, ಶಿವಾನಂದ್ ಬೇಲೂರ, ಆನಂದ ದಂಡೋತಿ, ಗೋಪಾಲ ಮಳಖೇಡಕರ್ ಇತರರಿದ್ದರು. ಬಾಬುರಾವ ಶೇರಿಕರ್ ನಿರೂಪಿಸಿದರು, ನಾಗರಾಜ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.