ಕಬ್ಬು ಕಟಾವು ಆದ 15 ದಿನದಲ್ಲಿ ಹಣ ಪಾವತಿ
Team Udayavani, Nov 9, 2021, 10:05 AM IST
ಶಹಾಬಾದ: ರೈತರ ಹೊಲದಲ್ಲಿ ಕಬ್ಬು ಕಟಾವು ಆದ ಹದಿನೈದು ದಿನದೊಳಗಾಗಿ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಚೌಡಾಪುರ ಕೆಪಿಆರ್ ಸಕ್ಕರೆ ಕಾರ್ಖಾನೆಯ ಡಿಜಿಎಂ ರಾಜಶೇಖರ ಪಾಟೀಲ ಹೇಳಿದರು.
ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಚೌಡಾಪುರ ಕೆಪಿಆರ್ ಸಕ್ಕರೆ ಕಾರ್ಖಾನೆ ವತಿಯಿಂದ ಕಬ್ಬು ಬೆಳೆದ ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ಟನ್ ಕಬ್ಬಿಗೆ 2300ರಿಂದ 2400ವರೆಗೆ ನಿಗದಿ ಮಾಡುವ ಮೂಲಕ ರೈತರ ಖಾತೆಗೆ ಹಣ ಸಂದಾಯ ಮಾಡುತ್ತೇವೆ. ನಮ್ಮ ಕಾರ್ಖಾನೆ ವತಿಯಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಕಟಾವು ಮಾಡಿದ ಹದಿನೈದು ದಿನದೊಳಗಾಗಿ ಹಣ ಸಂದಾಯ ಮಾಡುವುದಾದರೆ ಮಾತ್ರ ನಿಮಗೆ ಕಬ್ಬು ನೀಡುತ್ತೇವೆ. ಇಲ್ಲದಿದ್ದರೇ ಬೇರೆ ಕಾರ್ಖಾನೆಯವರಿಗೆ ನೀಡುತ್ತೇವೆ ಎಂದು ರೈತರು ಹೇಳಿದರು.
ಅದಕ್ಕೆ ಅಧಿಕಾರಿ ಹದಿನೈದು ದಿನದೊಳಗಾಗಿ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರೈತರು ಒಪ್ಪಿಗೆ ಸೂಚಿಸಿದರು.
ಕೆಪಿಆರ್ ಸಕ್ಕರೆ ಕಾರ್ಖಾನೆಯ ಸಂತೋಷ, ವೀರಪ್ಪ, ರೈತ ಮುಖಂಡರಾದ ಮಕದುಮ್ ಪಟೇಲ್, ಅಣಿರುದ್ರಗೌಡ, ಭೀಮುಗೌಡ ಖೇಣಿ, ಸಾಯಬಣ್ಣ ಕೊಲ್ಲೂರ್, ಹರ್ಷದ, ಶಿವಪ್ಪ ಕಂಟಿಕರ್, ಮಾರ್ಥಂಡ ಬುರ್ಲಿ, ಈರಣ್ಣ, ಕಾಲೀದ್ ಪಟೇಲ್, ಮಲ್ಲೇಶಪ್ಪ ಹೆಗ್ಗುಂಡಿ, ನಾಗೇಂದ್ರ ಟೆಂಗಳಿ, ಸಂಗಣ್ಣ ಬಾಗೋಡಿ, ಇಬ್ರಾಹಿಮ್, ಮೆಹಬೂಬಲಾಲ, ಶಿವಪ್ಪ ಹೆಗ್ಗುಂಡಿ, ಮಲ್ಲೇಶಿ, ಪ್ರಕಾಶಮ ರಾಮಣ್ಣ ಪೂಜಾರಿ, ಈರಣ್ಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಖರ್ಗೆ ಹೆಸರು ಅನಗತ್ಯವಾಗಿ ತರಲಾಗಿದೆ; ಚೆನ್ನಾರೆಡ್ಡಿ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.