ಸಂಕಷ್ಟಕ್ಕೆ ಪೊಲೀಸ್ ಇಲಾಖೆ ಸ್ಪಂದನೆ: ಇಶಾ
Team Udayavani, Mar 25, 2022, 9:59 AM IST
ಜೇವರ್ಗಿ: ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೇ ಘನತೆ, ಗೌರವ, ಮರ್ಯಾದೆ ಹಾಳಾಗುತ್ತದೆ ಎನ್ನುವ ಕೀಳರಿಮೆ ಬಿಡಿ, ನೊಂದವರು, ಸಂಕಷ್ಟದಲ್ಲಿರುವ ಜನರಿಗೆ ನ್ಯಾಯ ಒದಗಿಸಲು ಪೊಲೀಸ್ ಇಲಾಖೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದರು.
ತಾಲೂಕಿನ ಗುಡೂರ ಎಸ್.ಎ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್’ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಇಬ್ಬರು ಬೀಟ್ ಪೊಲೀಸರನ್ನು ನೇಮಿಸಲಾಗುವುದು. ರಾತ್ರಿ ಪೆಟ್ರೋಲಿಂಗ್ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಸಿಪಿಐ ಶಿವಪ್ರಸಾದ ಮಠದ್ ಮಾತನಾಡಿ, ಪೊಲೀಸರ ಜತೆ ಒಡನಾಟ ಹೊಂದಲು, ಮುಕ್ತವಾಗಿ ಮಾತನಾಡಲು ಈ ವಿನೂತನ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕಲಬುರಗಿಯಲ್ಲಿ ಎಸ್ಪಿ ಇಶಾ ಪಂತ್ ಹಾಕಿಕೊಂಡಿದ್ದಾರೆ ಎಂದರು.
ಪಿಎಸ್‌ಐ ಸಂಗಮೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗಂಗಮ್ಮ ಸಾಹೇಬಗೌಡ ಬುಟ್ನಾಳ, ಪಿಡಿಒ ಬಿ.ಆರ್. ಪಾಟೀಲ, ಮುಖಂಡರಾದ ಮಲ್ಲೇಶಗೌಡ ಪೊಲೀಸ್ ಪಾಟೀಲ, ಮೈಲಾರಿ ಹೊನಗುಂಟಿ, ಬಸವರಾಜರೆಡ್ಡಿ ಗದಗಿ, ಸಿದ್ಧು ಪೂಜಾರಿ, ಸುಭಾಷ ದೊಡ್ಮನಿ, ಮಹಾಂತೇಶ ಪವಾರ, ದೊಡ್ಡಪ್ಪ ಪೂಜಾರಿ, ಅಶೋಕ ಪಾಟೀಲ, ಶರಣು ವಡಗೇರಿ, ಕಮಲಾಬಾಯಿ ಖೂಬು, ಸಾವಿತ್ರಿಬಾಯಿ ಪವಾರ, ಕಮಲಾಬಾಯಿ ರಾಠೊಡ, ಅಮರಪ್ಪ ತಳವಾರ, ಬಸವರಾಜ ವಡಗೇರಿ, ಈರಣ್ಣ ಜವಳಿ, ದೇವಿಂದ್ರ ಗುತ್ತೇದಾರ ಅಣಬಿ, ಸದ್ಧಾಮ ಜಮಾದಾರ, ಹಣಮಂತ ಸುಬೇದಾರ, ದೌಲಪ್ಪ ಚನ್ನೂರ, ಮರೆಪ್ಪ ನಾಗರಾಳ ಮತ್ತಿತರರು ಇದ್ದರು.
ಇದೆ ವೇಳೆ ಪ್ರತಿಭಾವಂತ ಇಬ್ಬರು ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕು.ಭಾಗ್ಯಶ್ರೀ ಪ್ರಾರ್ಥನಾಗೀತೆ ಹಾಡಿದರು, ಅಶೋಕ ಪಾಟೀಲ ಸ್ವಾಗತಿಸಿದರು, ಗಂಗಾಧರ ಮಣೂರ ನಿರೂಪಿಸಿ, ವಂದಿಸಿದರು.
ಕಲಬುರಗಿ ಕಾಳಜಿ ತಂಡ, ಜೇವರ್ಗಿ ಪೊಲೀಸರಿಂದ ಮಹಿಳಾ ದೌರ್ಜನ್ಯ, ಕೋಮುವಾದ, ಮಾದಕವಸ್ತು, ಟ್ರಾಫಿಕ್, ಗಾಂಜಾ ಸೇವನೆ ಕುರಿತು ರೂಪಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ಐದು ಬಾರಿ ನಡೆದಿದೆ ಶಾಲೆಯಲ್ಲಿ ಕಳ್ಳತನ ಗುಡೂರ ಎಸ್.ಎ ಗ್ರಾಮದ ಸರ್ಕಾರಿ ಶಾಲೆ ಕೋಣೆಗಳ ಬಾಗಿಲ ಕೀಲಿಯನ್ನು ಐದು ಬಾರಿ ಮುರಿದು ಕಂಪ್ಯೂಟರ್, ಸಿಪಿಒ, ಕ್ರೀಡಾ ಸಾಮಗ್ರಿ, ಸೈಕಲ್‌ಗಳು, ಮಕ್ಕಳ ಶೂ, ಸಾಕ್ಸ್ ಸೇರಿದಂತೆ ಅನೇಕ ಉಪಯುಕ್ತ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಅಲ್ಲದೇ ಶಾಲೆ ಕೋಣೆ ಆವರಣದಲ್ಲೇ ರಾತ್ರಿ ವೇಳೆ ಇಸ್ಪೀಟ್, ಮಧ್ಯಪಾನ ಮಾಡಲಾಗುತ್ತಿದೆ. ಗ್ರಾಮದ ಕಿರಾಣಿ, ಹೋಟೆಲ್‌ಗಳಲ್ಲಿಯೂ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆಗೆ ಬರುವಂತಾಗಿದೆ ಎಂದು 8ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ ಸಂಗಣ್ಣ ಎಸ್ಪಿಗೆ ಮಾಹಿತಿ ನೀಡಿದಳು.
ಶಾಲೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಸುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.