ಅಬಕಾರಿ ದಾಳಿ: ಸೇಂದಿ-ಸರಾಯಿ ವಶಕ್ಕೆ
Team Udayavani, Jul 27, 2022, 1:15 PM IST
ಶಹಾಬಾದ: ನಗರದ ವಿವಿಧೆಡೆ ಅಬಕಾರಿ ಪೊಲೀಸರು ದಾಳಿ ನಡೆಸಿ ಎಂಟು ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ 40ಲೀಟರ್ ಬೆಲ್ಲದ ಕೊಳೆ, 30ಲೀಟರ್ ಕಲಬೆರಕೆ ಸೇಂದಿ ವಶಪಡಿಸಿಕೊಳ್ಳಲಾಗಿದೆ.
ಮಡ್ಡಿ ನಂ. 2ಏರಿಯಾದ ಶಹಾಬಾದದ ಮೂರು ಮನೆಗಳಲ್ಲಿ ಎಂಟು ಲೀಟರ್ ಕಳ್ಳಭಟ್ಟಿ ಸರಾಯಿ, 40 ಲೀಟರ್ ಬೆಲ್ಲದ ಕೊಳೆ ಹಾಗೂ ವಾಡಿ ಪಟ್ಟಣದ ವಿಜಯ ನಗರ ಏರಿಯಾದಲ್ಲಿ 30 ಲೀಟರ್ ಕಲಬೆರಕೆ ಸೇಂದಿಯನ್ನು ಮಾರಾಟಕ್ಕಾಗಿ ತಯಾರಿಸಿ ಸಂಗ್ರಹಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತರ ಆದೇಶ ಹಾಗೂ ಅಬಕಾರಿ ಉಪ ಆಯುಕ್ತರ ನಿರ್ದೇಶನದ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಿತ್ತಾಪುರ ನೇತೃತ್ವದಲ್ಲಿ ನಾಲ್ಕು ಕಡೆ ಸಾಮೂಹಿಕ ಅಬಕಾರಿ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ.
ಆರೋಪಿತಳಾದ ಮಡ್ಡಿ ನಂ. 2 ಏರಿಯಾದ ಸಕ್ಕುಬಾಯಿ ರಮೇಶ ಚವ್ಹಾಣ ದಿವಳ ಎನ್ನುವಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಚಿತ್ತಾಪುರ ವಲಯದ ಅಬಕಾರಿ ಉಪ ನಿರೀಕ್ಷಕಿ ವಿಜಯಲಕ್ಷ್ಮೀ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡ್ಡಿ ನಂ. 2 ಏರಿಯಾದ ರೇಣುಕಾ ಅರ್ಜುನ ಚವ್ಹಾಣ ವಿರುದ್ಧ ಚಿತ್ತಾಪುರ ಅಬಕಾರಿ ನಿರೀಕ್ಷಕ ರಮೇಶ ಬಿರಾದಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುನೀತಾಬಾಯಿ ಚಂದ್ರಕಾಂತ ಚವ್ಹಾಣ, ವಾಡಿ ವಿಜಯನಗರದ ನಾಗಮ್ಮಾ ನಂದಕುಮಾರ ಬನಸುಡೆ ವಿರುದ್ಧ ಚಿತ್ತಾಪುರ ಉಪವಿಭಾಗದ ಅಬಕಾರಿ ನಿರೀಕ್ಷಕ ಶರಣಗೌಡ ಬಿರಾದಾರ ಪ್ರಕರಣ ದಾಖಲಿಕೊಂಡಿದ್ದಾರೆ. ದಾಳಿಯಲ್ಲಿ ಸಿಬ್ಬಂದಿಗಳಾದ ಶಿವಾನಂದ, ಶರಣಬಸಪ್ಪ, ನಾಗರಾಜ ಹಾಗೂ ವಾಹನ ಚಾಲಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ
Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು