![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Dec 23, 2021, 12:06 PM IST
ಚಿತ್ತಾಪುರ: ಪ್ರತಿಯೊಬ್ಬ ಯುವಕರು ಸಂಘ ಟಿತರಾಗಿ ಹೋರಾಟ ಮಾಡಿದಾಗ ಸಮಾಜ ಬಲಿಷ್ಠವಾಗುತ್ತದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಸಮಾಜದ ಸದಸ್ಯತ್ವ ಅಭಿಯಾನ, ತಾಲೂಕು ವೀರಶೈವ ಸಮಾಜ ಯುವ ಘಟಕದ ಅಧ್ಯಕ್ಷರ ಆಯ್ಕೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಯುವಕರ ಸಂಘಟನೆ ಅಗತ್ಯವಾಗಿದ್ದರಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದರು.
ಕಲಬುರಗಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮಹಿಳೆಯರಿಗಾಗಿ ವಸತಿ ನಿಲಯ ಆರಂಭಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಣದ ವ್ಯಾಸಂಗಕ್ಕಾಗಿ ಮಹಿಳೆಯರಿಗೆ ಉಚಿತ ವಸತಿ ನೀಡಲು ಚಿಂತನೆ ಮಾಡಲಾಗಿದೆ. ರಾಜಕೀಯ ರಹಿತವಾಗಿ ಸಮಾಜದಲ್ಲಿ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು ಎಂದರು.
ಮುಖಂಡ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಸಮಾಜದಲ್ಲಿನ ಕಟ್ಟಕಡೆಯ ಮನುಷ್ಯನಿಗೆ ಅನ್ಯಾಯವಾದಾಗಲೂ ಸಮಾಜದ ಎಲ್ಲರೂ ಸೇರಿ ಪ್ರತಿಭಟನೆ ಮಾಡಿ ನ್ಯಾಯ ದೊರಕಿಸಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲ್ ಪುರಕರ್, ಯುವ ಪ್ರಧಾನ ಕಾರ್ಯದರ್ಶಿ ಶಾಂತರೆಡ್ಡಿ ಪೇಠಶಿರೂರ, ತಾಲೂಕು ಯುವ ಘಟಕದ ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಮಲ್ಲಿನಾಥಗೌಡ ಸನ್ನತಿ ಮಾತನಾಡಿದರು.
ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಶಿವರಾವ್ ಪಾಟೀಲ ಬೆಳಗುಂಪಾ, ಮುಖಂಡರಾದ ಮಲ್ಲಣ್ಣ ಮಾಸ್ತರ, ಶಿವರಾಜ ಪಾಟೀಲ ತಿಳಿಗೋಳ, ಚಂದ್ರಶೇಖರ ತೆಂಗಳಿ, ಶಿವರಾಜ ಪಾಟೀಲ ತುನ್ನೂರ್, ಶರಣು ತೆಂಗಳಿ, ಭೀಮಾಶಂಕರ ಮೇಟಿಕರ, ವೀರಣ್ಣ ಸುಲ್ತಾನಪುರ್, ವಿಶ್ವನಾಥ ಪಾಟೀಲ ಅಲ್ಲೂರ್, ವಿಶ್ವನಾಥರೆಡ್ಡಿ ಕರದಾಳ, ನಿಹಾಲ ಪಾಟೀಲ, ಕೋಟೇಶ್ವರ ರೇಷ್ಮಿ, ಅಶೋಕ ನಿಪ್ಪಾಣಿ, ಅನಿಲ ಬೊಮ್ಮನಳ್ಳಿ, ಶಿವರೆಡ್ಡಿ ಪಾಲಪ್, ಮಲ್ಲು ಇಂದೂರ, ವೀರಣ್ಣ ಯಾರಿ, ರಾಚಣ್ಣ ಬೊಮನಳ್ಳಿ, ಆನಂದ ನರಬೋಳಿ, ಬಸವಂತರಾಯ ಪಾಟೀಲ, ಶ್ರೀನಿವಾಸರೆಡ್ಡಿ ಪಾಲಪ್, ಶಿವರಾಜ ಪಾಳೇದ್, ರಮೇಶ ಬೊಮ್ಮನಳ್ಳಿ ಇದ್ದರು. ಅಂಬರೀಶ ಸುಲೇಗಾಂವ ಸ್ವಾಗತಿಸಿದರು, ಜಿಲ್ಲಾ ಯುವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್ ನಿರೂಪಿಸಿದರು, ಚನ್ನವೀರ ಕಣಗಿ ವಂದಿಸಿದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.