ರಾವೂರ ಮಠಕ್ಕೆ ಯಾತ್ರಿನಿವಾಸ ನಿರ್ಮಾಣ
Team Udayavani, Apr 30, 2022, 11:47 AM IST
ವಾಡಿ: ಸುಕ್ಷೇತ್ರ ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಭಕ್ತರ ಅನುಕೂಲಕ್ಕಾಗಿ ಯಾತ್ರಿನಿವಾಸ ನಿರ್ಮಿಸಲು ಅನುದಾನ ನೀಡುವುದಾಗಿ ಶಾಸಕ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಶುಕ್ರವಾರ ಶ್ರೀಮಠಕ್ಕೆ ಭೇಟಿ ನೀಡಿದ ಶಾಸಕ ಖರ್ಗೆ, ಮಠದ ಉತ್ತರಾಧಿಕಾರಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು, ಸನ್ಮಾನ ಸ್ವೀಕರಿಸಿ ಅವರು ಮಾತುಕತೆ ನಡೆಸಿದರು.
ಇದೇ ವೇಳೆ ಆಶೀರ್ವಚನ ನೀಡಿದ ಸಿದ್ಧಲಿಂಗ ಸ್ವಾಮೀಜಿ, ರಾಜಕೀಯ ಕ್ಷೇತ್ರದಲ್ಲಿ ಪ್ರಬುದ್ಧ ರಾಜಕಾರಣಿಯಾಗಿ ಜನರ ಸೇವೆ ಮಾಡುತ್ತಿರುವುದು ನಮಗೆ ಹೆಮ್ಮೆ ತರಿಸಿದೆ. ಕ್ಷೇತ್ರವನ್ನು ಪ್ರಗತಿಯ ದಿಕ್ಕೆನೆಡೆ ಸಾಗಿಸುತ್ತಿರುವ ನಿಮ್ಮ ಕಾರ್ಯ ಇನ್ನಷ್ಟು ಪ್ರಗತಿಶೀಲವಾಗಿ ಮುಂದುವರಿಸಿರಿ ಎಂದು ಶುಭ ಕೋರಿದರು.
ಮಠದಲ್ಲಿ ವರ್ಷಂಪ್ರತಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ವರ್ಷಕ್ಕೊಮ್ಮೆ ಜಾತ್ರೆಯೂ ನಡೆಯುತ್ತದೆ. ಈ ವೇಳೆ ದೂರದಿಂದ ಬರುವ ಭಕ್ತರಿಗಾಗಿ ಯಾತ್ರಿನಿವಾಸದ ಅಗತ್ಯವಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಪ್ರಿಯಾಂಕ್, ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸಲು ಅನುದಾನ ನೀಡುತ್ತೇನೆ ಎಂದು ಪೂಜ್ಯರಿಗೆ ಭರವಸೆ ನೀಡಿದರು.
ಮುಖಂಡರಾದ ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ಸಿದ್ಧುಗೌಡ ಅಫಜಲಪುರಕರ, ಅಬ್ದುಲ್ ಅಜೀಜ್ ಸೇಠ, ಶ್ರೀನಿವಾಸ ಸಗರ, ಜಗನಗೌಡ ಪಾಟೀಲ ರಾಮತೀರ್ಥ, ಶಿವಲಿಂಗಪ್ಪ ವಾಡೇದ, ಶರಣು ಜ್ಯೋತಿ, ಸಿದ್ಧಲಿಂಗ ಬಾಳಿ, ಯೂನ್ಯೂಸ್ ಪ್ಯಾರೆ, ಈಶ್ವರ ಬಾಳಿ ಹಾಗೂ ಮತ್ತಿತರರು ಇದ್ದರು.
ರಥೋತ್ಸವದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಪ್ರಿಯಾಂಕ್
ಇತ್ತೀಚೆಗೆ ರಾವೂರ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ವೇಳೆ ಗ್ರಾಮದ ಲಕ್ಷ್ಮೀಕಾಂತ (25) ಎಂಬಾತ ರಥದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದ ಯುವಕನ ಮನೆಗೆ ಭೇಟಿ ನೀಡಿದ ಶಾಸಕ ಪ್ರಿಯಾಂಕ್ ಖರ್ಗೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದೇ ಘಟನೆಯಲ್ಲಿ ಗಾಯಗೊಂಡ ಭೀಮಾಶಂಕರ, ಯಂಕಪ್ಪ ಎನ್ನುವರ ಮನೆಗೂ ತೆರಳಿ ಆರೋಗ್ಯ ವಿಚಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.