ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Feb 13, 2022, 3:42 PM IST
ಶಹಾಬಾದ: ಡಾ| ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ನ್ಯಾಯಾಧೀಶರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಸಂವಿಧಾನ ಸರಂಕ್ಷಣಾ ಸಮಿತಿ ವತಿಯಿಂದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಹಣಮಂತರಾವ್ ಪಾಟೀಲಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಂವಿಧಾನ ಸರಂಕ್ಷಣಾ ಸಮಿತಿ ಹಿರಿಯ ಮುಖಂಡ ಮಲ್ಲೇಶಿ ಸಜ್ಜನ್, ರಾಯಚೂರು ನ್ಯಾಯಾಧೀಶರ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿ ಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಸರಂಕ್ಷಣಾ ಸಮಿತಿ ಅಧ್ಯಕ್ಷ ಹರೀಶ ಕರಣಿಕ್, ಕಾರ್ಯಧ್ಯಕ್ಷ ಶಿವಕುಮಾರ ತಳವಾರ, ಉಪಾಧ್ಯಕ್ಷ ವಿಕ್ರಮ ಪ್ರಸಾದ, ಪ್ರಧಾನ ಕಾರ್ಯದರ್ಶಿ ಪ್ರವೀಣ ರಾಮಕೋಟೆ, ಕಾರ್ಯದರ್ಶಿ ಕಿರಣಕುಮಾರ ಚವ್ಹಾಣ ಘಟನೆ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬ ಧೋರಣೆ ಅನುಸರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಸ್ನೇಹಲ್ ಜಾಯಿ, ಬಸವರಾಜ ಮಯೂರ, ಪ್ರವೀಣಕುಮಾರ ರಾಜನ್, ಸುರೇಶ ಮೆಂಗನ, ಭರತ್ ಧನ್ನಾ, ಅನಿಲ ಚವ್ಹಾಣ, ಅನಿಲ ದೊಡ್ಡಮನಿ, ವೆಂಕಟೇಶ ಚವ್ಹಾಣ, ನರೇಂದ್ರ ದಂಡಗುಲಕರ್, ಜಗನ್ನಾಥ ಎಸ್. ಎಚ್, ಶಿವನಾಗ, ಆಕಾಶ ಹಿರೇಮಠ, ಶಿವರಾಜ ನಾಟೇಕಾರ, ಜಯರಾಜ, ಪಾರುಷ ಸರ್ಜಾಪುರ, ರಾಕೇಶ ಶಿರೂರಕರ್, ಗುರುಕೃಷ್ಣ, ರವಿಕುಮಾರ, ಚಂದು, ಉತ್ತಪ್ಪ,ಯಲ್ಲಾಲಿಂಗ ಗೋಳಾ(ಕೆ), ರೋಹಿತ ದಂಡಗುಲಕರ್ಮ ಆಕಾಶ ಪಾವನೂರ, ಕೃಷ್ಣ ರ್ಯಾಪನೂರ, ಶ್ರೀನಿವಾಸ ತಳವಾರ, ಶಂಕರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.