ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ: ಆರು ಮಂದಿ ಸೆರೆ
ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆ
Team Udayavani, Apr 17, 2022, 11:26 AM IST
ಕಲಬುರಗಿ: ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ ಮತ್ತೆ ಆರು ಜನರನ್ನು ಬಂಧಿಸಿದೆ.
ಮೂವರು ಪರೀಕ್ಷೆ ಮೇಲ್ವಿಚಾರಕರು, ಜೈಲ್ ವಾರ್ಡನ್ ಬಂಧಿತರಲ್ಲಿ ಸೇರಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದಂತಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳಾದ ರಾಯಚೂರಿನ ಪ್ರವೀಣ ಕುಮಾರ ಕೆ., ರಾಯಚೂರಿನ ಜೈಲ್ ವಾರ್ಡನ್ ಚೇತನ ನಂದಗಾಂವ, ಕಲಬುರಗಿಯ ಅರುಣ ಮತ್ತು ಅಕ್ರಮ ನಡೆದಿರುವ ಜ್ಞಾನ ಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿದ್ದ ಸಾವಿತ್ರಿ, ಸಿದ್ಧಮ್ಮ ಹಾಗೂ ಸುಮಾ ಬಂಧಿತರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರದ ಹಿಂದೆ ವಿರೇಶ ನಿಡಗುಂದಾ ಎಂಬಾತನನ್ನು ಸಿಐಡಿ ತಂಡದವರು ಬಂಧಿಸಿದ್ದರು. ಆತನ ತಂದೆ ಜಿಲ್ಲೆಯ ಸೇಡಂ ಠಾಣೆಯಲ್ಲಿ ಮುಖ್ಯಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿಐಡಿ ಪೊಲೀಸರು ಇಲಾಖೆಯ ಸಿಬ್ಬಂದಿ ಪುತ್ರನ ಮಗ ಎಂಬುದನ್ನು ಲೆಕ್ಕಿಸದೇ ಬಂಧಿಸುವ ಮೂಲಕ ತನಿಖೆ ಪ್ರಖರತೆ ತೀವ್ರಗೊಳಿಸಿದ್ದಾರೆ.
ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಎಸ್ಪಿ ರಾಘವೇಂದ್ರ ಭಟ್, ಡಿವೈ ಎಸ್ಪಿಗಳಾದ ಎಸ್.ವಿ.ಪಾಟೀಲ, ಪ್ರಕಾಶ ರಾಠೊಡ ಹಾಗೂ ತಂಡದವರು ಕಳೆದ 14 ದಿನಗಳಿಂದ ತನಿಖೆ ನಡೆಸುತ್ತಿದ್ದಾರೆ. ಈಗ ಪ್ರಕರಣದ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದೆ.
ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಇನ್‌ಸ್ಪೆಕ್ಟರ್ ನಗರದ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಿಜೆಪಿಯ ಪ್ರಭಾವಿ ನಾಯಕಿಯೊಬ್ಬರಿಗೆ ಸೇರಿರುವ ನಗರದ ಜಿಡಿಎ ಬಡಾವಣೆಯ ಗೋಕುಲ್ ನಗರದ ಜ್ಞಾನಜ್ಯೋತಿ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬಂಧಿತರೆಲ್ಲ ಪರೀಕ್ಷೆ ಬರೆದಿದ್ದರು.
ಬಂಧಿತನಾಗಿದ್ದ ವಿರೇಶ ಒಎಂಆರ್ ಸೀಟ್‌ಲ್ಲಿ ಕೇವಲ 21 ಪ್ರಶ್ನೆಗೆ ಉತ್ತರ ಬರೆದಿದ್ದ. ಆದರೆ, ನಂತರ ನೋಡಿದಾಗ ಆತ ಎಲ್ಲ ನೂರು ಪ್ರಶ್ನೆಗಳಿಗೆ ಉತ್ತರಿಸಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಸಿಐಡಿ ತಂಡದವರು ತನಿಖೆ ಚುರುಕುಗೊಳಿಸಿದ್ದರು. ಈಗ ಮತ್ತೆ ಆರು ಜನರನ್ನು ಬಂಧಿಸುವ ಮೂಲಕ ತನಿಖೆಯು ಒಂದು ಹಂತ ತಲುಪಿದಂತಾಗಿದೆ. ಇದರ ಬೆನ್ನಲ್ಲಿಯೇ ಇನ್ನೊಂದು ರೀತಿಯಲ್ಲಿ ತನಿಖೆ ನಡೆಸಲು ಸಿಐಡಿ ತಂಡದವರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತ ಆರು ಜನರನ್ನು ಶನಿವಾರ ಸಂಜೆ ಸಿಐಡಿ ತಂಡದವರು ಇಲ್ಲಿನ 4ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ತನಿಖೆ ಮುಂದುವರಿಸಲು, ಇನ್ನಷ್ಟು ಮಾಹಿತಿ ಕಲೆ ಹಾಕಲು ಬಂಧಿತರನ್ನು ಇನ್ನಷ್ಟು ವಿಚಾರಣೆ ಮಾಡುವುದಿದೆ. ಆದ್ದರಿಂದ ಎಲ್ಲರನ್ನು ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಆರೋಪಿತರ ಪರ ವಕೀಲರು ಆಕ್ಷೇಪಿಸಿ, ಈಗಾಗಲೇ ವಿಚಾರಣೆ ಮುಗಿಸಿದ್ದಾರೆ. ಹೀಗಾಗಿ ಸಿಐಡಿ ವಶಕ್ಕೆ ನೀಡದೇ, ನ್ಯಾಯಾಂಗ ವಶಕ್ಕೆ ನೀಡಬೇಕು. ಇಲ್ಲವೇ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿರೇಶನನ್ನು ಕಸ್ಟಡಿಗೆ ಪಡೆದಿದ್ದ ಸಿಐಡಿ ತಂಡದವರು ಶನಿವಾರ ಮರಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ಪೂರ್ಣವಾಗಿದೆ ಎಂದು ಹೇಳಿದಾಗ ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಪೊಲೀಸರು ಆತನನ್ನು ಕೇಂದ್ರ ಕಾರಾಗೃಹಕ್ಕೆ ಕರೆದು ಕೊಂಡು ಹೋದರು. ಒಟ್ಟಾರೆ ಪಿಎಸ್‌ಐ ನೇಮ ಕಾತಿಯ ಸಿಇಟಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.