ಎಚ್ಚರ..ಶಂಕಿತರ ಸಂಖ್ಯೆ ಹೆಚ್ಚಳ..!
ಪ್ರಯೋಗಾಲಯಕ್ಕೆ ನಿನ್ನೆ ಆರು ಮಾದರಿ ರವಾನೆ | ಸಡಿಲಗೊಂಡ ಪೊಲೀಸ್ ಇಲಾಖೆ ಬಿಗಿ
Team Udayavani, Apr 7, 2020, 12:45 PM IST
ರಾಯಚೂರು: ನಗರದ ಮಡ್ಡಿಪೇಟೆ ಬಡಾವಣೆಯಲ್ಲಿನ ನ್ಯಾಯಬೆಲೆ ಅಂಗಡಿ ಎದುರು ಜನರು ಮಾಸ್ಕ್ ಧರಿಸದೇ ಗುಂಪಾಗಿ ನಿಂತಿರುವುದು.
ರಾಯಚೂರು: ಇಷ್ಟು ದಿನ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣವೇ ಬಂದಿಲ್ಲ ಎನ್ನುವ ನಂಬಿಕೆಯಲ್ಲಿ ಹೊರಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸೋಮವಾರ ಜಿಲ್ಲೆಯಿಂದ ಆರು ಶಂಕಿತರ ವರದಿ ಪರೀಕ್ಷೆಗೆ ಕಳುಹಿಸಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಈ ವರೆಗೂ 20 ಜನ ಶಂಕಿತರ ರಕ್ತ ಮತ್ತು ಗಂಟಲಿನ ಮಾದರಿಯನ್ನು ಲ್ಯಾಬ್‌ಗ ಕಳುಹಿಸಲಾಗಿದೆ. ಸೋಮವಾರ ದಿನದಂದೇ ಆರು ಜನರ ಮಾದರಿ ಕಳುಹಿಸಲಾಗಿದೆ. ಒಟ್ಟು ಇದರಲ್ಲಿ ಒಂಭತ್ತು ನೆಗೆಟಿವ್ ಬಂದರೆ, ಎರಡು ತಿರಸ್ಕೃತಗೊಂಡಿವೆ. ಇನ್ನೂ 9 ಜನರ ವರದಿ ಬರಬೇಕಿದೆ.
ವಿದೇಶದಿಂದ 174 ಜನ ಹಿಂದಿರುಗಿದ್ದು, ಅವರು ಸೇರಿದಂತೆ 774 ಕುಟುಂಬ ಸದಸ್ಯರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಉಳಿಸಲಾಗಿದೆ. ಇನ್ನೂ ಸರ್ಕಾರಿ
ಕ್ವಾರಂಟೈನ್‌ನಲ್ಲಿ 27 ಜನರನ್ನು ಉಳಿಸಲಾಗಿದೆ. ಲಾಕ್ ಡೌನ್ ಅವ ಧಿ ಮುಗಿಯುತ್ತಿದ್ದರೆ, ಶಂಕಿತರ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸಡಿಲವಾದ ಹಿಡಿತ: ಲಾಕ್ ಡೌನ್ ಆರಂಭದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದ ಪೊಲೀಸ್ ಇಲಾಖೆ ಕಾಲಕ್ರಮೇಣ ಬಿಗಿ ಹಿಡಿತ ಸಡಿಲಗೊಳಿಸುತ್ತಿದೆ. ಇದು
ಜನಸಂಚಾರಕ್ಕೆ ಅನುವು ಮಾಡಿಕೊಡುವಂತಾಗಿದೆ. ಒಬ್ಬರನ್ನು ನೋಡಿ ಮತ್ತೂಬ್ಬರು ನಗರಕ್ಕೆ ಬರುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸೋಮವಾರ
ನಗರದಲ್ಲಿ ಜನಸಂಚಾರ ಹೆಚ್ಚಾಗಿತ್ತು. ನಗರದ ಎಪಿಎಂಸಿಯಂತೂ ಗೀಜಗನ ಗೂಡಿನಂತಾಗಿದೆ. ಅಲ್ಲಿ ನಿಷೇಧಾಜ್ಞೆ ನಿಯಮಗಳಾಗಲಿ, ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನಾಗಲಿ ಕೈಗೊಂಡಿದ್ದು ಕಿಂಚಿತ್ತೂ ಕಾಣಿಸಲಿಲ್ಲ. ಇನ್ನೂ ಮಾಲ್‌ಗಳಲ್ಲೂ ಜನಸಂದಣಿ ಹೆಚ್ಚಾಗಿದೆ. ಚಂದ್ರಮೌಳೇಶ್ವರ ವೃತ್ತದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ಪಡಿತರದೇ ತಲೆನೋವು:
ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ಉಲ್ಲಂಘನೆ ವಿಚಾರದಲ್ಲಿ ಜಿಲ್ಲೆಯ ಬಹುತೇಕ ನ್ಯಾಯಬೆಲೆ ಅಂಗಡಿಗಳೇ ಅಗ್ರಪಂಕ್ತಿಯಲ್ಲಿವೆ. ಈಗಾಗಲೇ
ಜಿಲ್ಲಾಡಳಿತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಟ್ಟೆಚ್ಚರ ವಹಿಸಿದೆ. ಆದರೂ, ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇದು ಕಂಡು ಬರುತ್ತಿಲ್ಲ.
ಜನರು ನಾ ಮುಂದು ನೀ ಮುಂದು.. ಎಂದು ನೂಕು ನುಗ್ಗಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಪಡಿತರ ಪಡೆಯಲು ಜನರು ಗುಂಪುಗುಂಪಾಗಿ ಸೇರುತ್ತಿದ್ದರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ.
ಜಿಲ್ಲೆಯಲ್ಲಿ 715 ನ್ಯಾಯಬೆಲೆ ಅಂಗಡಿಗಳಿದ್ದು, ಅದರಲ್ಲಿ 24 ನ್ಯಾಯಬೆಲೆ ಅಂಗಡಿಗಳು ಮುಚ್ಚಿವೆ. ಸರ್ಕಾರ ಉಚಿತ ಪಡಿತರ ವಿತರಿಸಲು ಆದೇಶ
ಮಾಡಿದ್ದು, ಎಲ್ಲೆಡೆ ಗದ್ದಲ ಹೆಚ್ಚಾಗಿದೆ. ಯಾವ ಅಂಗಡಿ ಮಾಲೀಕರ ವಿರುದ್ಧವೂ ಈವರೆಗೆ ಕ್ರಮ ಕೈಗೊಂಡಿಲ್ಲ.
ತೆರೆದ ಖಾಸಗಿ ಆಸ್ಪತ್ರೆ-ಕ್ಲಿನಿಕ್ ಇಷ್ಟು ದಿನ ರೋಗಿಗಳಿಲ್ಲ ಎನ್ನುವ ಕಾರಣಕ್ಕೆ ಬಾಗಿಲು ಹಾಕಿದ್ದ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಸೋಮವಾರ ಸೇವೆಗೆ
ಮುಕ್ತವಾಗಿದ್ದವು. ಆರೋಗ್ಯ ಸಚಿವ ಬಿ. ಶ್ರೀರಾಮುಲು ಖಡಕ್ ಸೂಚನೆ ನೀಡುತ್ತಿದ್ದಂತೆ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಬಹುತೇಕ ಖಾಸಗಿ ಆಸ್ಪತ್ರೆಗಳ ಓಪಿಡಿಗಳು ಸೇವೆಗೆ ಮುಕ್ತಗೊಂಡಿದ್ದವು. ಆದರೂ ಕೆಲವೊಂದು ಕ್ಲಿನಿಕ್‌ಗಳು ಮುಚ್ಚಿದ್ದವು.
ಸಿದ್ದಯ್ಯಸ್ವಾಮಿ ಕುಕನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.