ಮಾರಮ್ಮ ದೇವಿಗೆ ಮೊಸರನ್ನ ಹರಕೆ
ದೇಗುಲದ ಬಾಗಿಲು ಮುಚ್ಚಿಸಿದ ಪೊಲೀಸರು | 41ರಲ್ಲಿ ಬರಬೇಕಿದೆ 30 ಮಂದಿ ವರದಿ
Team Udayavani, Apr 8, 2020, 12:34 PM IST
ರಾಯಚೂರು: ಎಪಿಎಂಸಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿ ಕಾರಿ ಆರ್. ವೆಂಕಟೇಶಕುಮಾರ ಮುನ್ನೆಚ್ಚರಿಕೆ, ಸಾಮಾಜಿಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ರಾಯಚೂರು: ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತ ಸಾಕಷ್ಟು ಯತ್ನ ನಡೆಸಿದ್ದರೆ ಮತ್ತೊಂದೆಡೆ ನಗರದ ಕಂಡಗಡ್ಡೆ ಮಾರಮ್ಮದೇವಿಗೆ ಮೊಸರನ್ನ ನೈವೇದ್ಯ ಮಾಡಿದರೆ ರೋಗ ನಿವಾರಣೆಯಾಗಲಿದೆ ಎನ್ನುವ ವದಂತಿ ಹಬ್ಬಿದೆ.
ಈ ಸುದ್ದಿ ಕೇಳುತ್ತಿದ್ದಂತೆ ಸಾಕಷ್ಟು ಮಹಿಳೆಯರು ದೇವಸ್ಥಾನಕ್ಕೆ ತೆರಳಿ ನೈವೇದ್ಯ ಸಲ್ಲಿಸಿದ ಪ್ರಸಂಗ ಬುಧವಾರ ನಡೆದಿದೆ. ಯಾವುದೋ ಮಹಿಳೆ ಮೈಯಲ್ಲಿ ದೇವಿ ಬಂದು ಈ ರೀತಿ ಹೇಳಿದ್ದಾಳೆ ಎನ್ನಲಾಗಿದ್ದು, ಮಂಗಳವಾರ ದೇವಿ ವಾರವಾದ ಕಾರಣ ಜನ ಈ ರೀತಿ ಹರಕೆ ತೀರಿಸಿದ್ದಾರೆ. ಅಲ್ಲದೇ ನಿಷೇಧಾಜ್ಞೆ ಲೆಕ್ಕಿಸದೆ ಜನತೆ ದೇವಸ್ಥಾನದತ್ತ ಮುಖ ಮಾಡಿದ್ದು ಕಂಡು ಬಂತು. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನು ಮನೆಗೆ ಕಳುಹಿಸಿ ದೇಗುಲ ಮುಚ್ಚಿಸಿದರು.
ಜಿಲ್ಲೆಯಲ್ಲಿ ಶಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಮಂಗಳವಾರ ಮತ್ತೆ 21 ಜನರ ಗಂಟಲಿನ ಮಾದರಿಯನ್ನು ಪರೀಕ್ಷೆಗೆಂದು ಲ್ಯಾಬ್ ಕಳುಹಿಸಲಾಗಿದೆ. ಈ ವರೆಗೂ 41 ಮಾದರಿ ಕಳುಹಿಸಿದಂತಾಗಿದೆ. ಅದರಲ್ಲಿ ಒಂಭತ್ತು ವರದಿಗಳು ನೆಗೆಟಿವ್ ಆಗಿದ್ದು, ರೋಗ ಲಕ್ಷಣಗಳು ಇಲ್ಲದ ಕಾರಣ ಎರಡು ತಿರಸ್ಕೃತವಾಗಿವೆ. 30 ವರದಿಗಳು ಬರಬೇಕಿದೆ. ಈ ವರೆಗೂ ವಿದೇಶಗಳಿಂದ 174 ಮಂದಿ ಹಿಂತಿರುಗಿದ್ದಾರೆ. ಸರ್ಕಾರಿ ಕ್ವಾರಂಟೈನ್‌ನಲ್ಲಿ 48 ಜನರನ್ನು ಉಳಿಸಲಾಗಿದೆ. ಜಿಲ್ಲೆಯಿಂದ ಈ ವರೆಗೆ ಕಳುಹಿಸಲಾದ ವರದಿಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್.
ವೆಂಕಟೇಶಕುಮಾರ ತಿಳಿಸಿದ್ದಾರೆ.
ಸಾಮಾನ್ಯ ರೋಗಿಗಳ ಚಿಕಿತ್ಸೆಗೆ ತುರ್ತಾಗಿ ಸ್ಪಂದಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ರಜೆ ಮಂಜೂರು ಮಾಡುವುದನ್ನು ನಿರ್ಬಂದಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕೊರೋನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ನಿಮಿತ್ತ ನಿಷೇಧಾಜ್ಞೆ ಜಾರಿಗೊಳಿಸಿದರೂ ಗೂಡ್ಸ್ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗಲಾಗುತ್ತಿದೆ. ಮಂಗಳವಾರ ಜಿಲ್ಲಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಅ ಧಿಕಾರಿಗಳು, 30 ಗೂಡ್ಸ್ ವಾಹನಗಳ ಚಾಲಕರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.