ಅನುಮತಿ ಇಲ್ಲದೆ ಕಾರ್ಮಿಕರ ಸಾಗಾಟ
ಪ್ರತಿ ವ್ಯಕ್ತಿಗೆ ಸಾವಿರ ರೂ. ಪಡೆದು ಲಾರಿಯಲ್ಲಿ ಬೆಂಗಳೂರಿಂದ ಸ್ಥಳಾಂತರ
Team Udayavani, May 2, 2020, 12:19 PM IST
ರಾಯಚೂರು: ಸರ್ಕಾರಿ ಪದವಿ ಕಾಲೇಜು ಬಳಿ ಬೆಂಗಳೂರಿನಿಂದ ಕಾರ್ಮಿಕರನ್ನು ಕರೆತಂದ ಲಾರಿಯನ್ನು ಪೊಲೀಸರು ನಿಲ್ಲಿಸಿರುವುದು.
ರಾಯಚೂರು: ಅಂತರ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆ ತರಲು ಸರ್ಕಾರವೇ ಆದೇಶ ನೀಡಿದ್ದಾಗ್ಯೂ ಕೂಲಿ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದ ಕಾರ್ಮಿಕರನ್ನು ಲಾರಿಯಲ್ಲಿ ತಮ್ಮೂರಿಗೆ ಅನಧಿಕೃತವಾಗಿ ಸಾಗಿಸಿದ ವಿಚಾರ ಬಯಲಾಗಿದೆ.
ಪ್ರತಿ ವ್ಯಕ್ತಿಗೆ ಸಾವಿರ ರೂ. ಪಡೆದು ಲಾರಿಯಲ್ಲಿ ಕರೆ ತರಲಾಗಿದೆ. ಅಕ್ಕಿ ಮೂಟೆಗಳನ್ನು ಅಡ್ಡಗಟ್ಟಿ ಪೊಲೀಸರನ್ನು ವಂಚಿಸಲಾಗಿದೆ. ರಾತ್ರೋರಾತ್ರಿ ಪ್ರಯಾಣ ಬೆಳೆಸಿರುವ ಅವರ ವಾಹನವನ್ನು ಯಾವುದೇ ಜಿಲ್ಲೆಯಲ್ಲೂ ತಡೆದು ವಿಚಾರಣೆ ನಡೆಸಿಲ್ಲ. ಚಿಕ್ಕಮಕ್ಕಳು ಸೇರಿ 50ಕ್ಕೂ ಹೆಚ್ಚು ಜನರಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರ, ಮಾರುತಿ ನಗರ ಸೇರಿ ವಿವಿಧೆಡೆ ಕೆಲಸ ಮಾಡಿಕೊಂಡಿದ್ದರು. ಲಾರಿ ಚಾಲಕ ಸಿಕ್ಕಿಬಿದ್ದಿದ್ದಾನೆ. ಜೆಪಿ ನಗರದ ನಿವಾಸಿ ಪಾಷಾ ಎಂಬಾತನಿಗೆ ಕಾರ್ಮಿಕ ಸ್ಥಳಾಂತರಿಸುವ ಹೊಣೆ ನೀಡಿರುವುದು ಗೊತ್ತಾಗಿದೆ. ತಪ್ಪು ಗ್ರಹಿಕೆಯಿಂದ ಪ್ರಯಾಣ ಬೆಳೆಸಿದ್ದಾರೆ. ರಾಯಚೂರು, ಯಾದಗಿರಿ ಜಿಲ್ಲೆಯ ಕಾರ್ಮಿಕರು ಲಾರಿಯಲ್ಲಿದ್ದರು. ನಗರದಲ್ಲಿ ತಡೆದು ವಿಚಾರಿಸಿದಾಗ ಸತ್ಯ ಗೊತ್ತಾಗಿದೆ. ಎಲ್ಲ ಕಾರ್ಮಿಕರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಸಹಾಯವಾಣಿ ಆರಂಭ
ಜಿಲ್ಲೆಯಲ್ಲಿ ವಾಸಿಸುತ್ತಿರುವ ಬೇರೆ ರಾಜ್ಯದ ಕೂಲಿ ಕಾರ್ಮಿಕರು ಮತ್ತು ಇತರರು ತಮ್ಮ ರಾಜ್ಯಗಳಿಗೆ ತೆರಳಲು ಇಚ್ಛಿಸಿದಲ್ಲಿ ಮತ್ತು ಪ್ರಸ್ತುತ ಬೇರೆ ರಾಜ್ಯಗಳಲ್ಲಿರುವ ಜಿಲ್ಲೆಯ ಕಾರ್ಮಿಕರು ಮತ್ತು ಇತರರು ತವರಿಗೆ ಬರಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. 1950, 1077, 08532-228559, 08532-226383 ಈ ಸಂಖ್ಯೆಗಳಿಗೆ
ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಬೇಕು. ವಾಸಿಸುತ್ತಿರುವ ಸ್ಥಳ ಮತ್ತು ಜನರ ಸಂಖ್ಯೆ, ಎಲ್ಲಿಗೆ ಹೋಗಬೇಕು, ಬರಬೇಕು ಎಂಬ ಮಾಹಿತಿ ಮತ್ತು ದೂರವಾಣಿ ಸಂಖ್ಯೆ ನೋಂದಣಿ ಮಾಡಿಕೊಳ್ಳಬೇಕು. ಅವರಿಗೆ ಜಿಲ್ಲಾಡಳಿತದಿಂದ ನೆರವು ನೀಡಲಾಗುವುದು ಎಂದು ರಾಯಚೂರು ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.