24.6 ಮಿಮೀ ಮಳೆ; 60 ಹೆಕ್ಟೇರ್ ಬೆಳೆ ಹಾನಿ
ಅಫಜಲಪುರ-ಆಳಂದ-ಚಿಂಚೋಳಿಯಲ್ಲಿ ಹೆಚ್ಚು ಮಳೆ, ಬಿರುಗಾಳಿ
Team Udayavani, May 20, 2022, 5:23 PM IST
ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 24.6 ಮಿ.ಮೀ ಮಳೆಯಾಗಿದೆ. ವಾಡಿಕೆಯಂತೆ 9 ಮಿಲಿ ಮೀಟರ್ ಆಗಬೇಕಾಗಿತ್ತು. ಆದರೆ ಈ ಬಾರಿ 15.6 ಮಿ.ಮೀ ಹೆಚ್ಚಾಗಿದೆ.
ಇದರಿಂದಾಗಿ ತೋಟಗಾರಿಕೆ ಬೆಳೆಗಳಾದ ಬಾಳೆ, ಕಲ್ಲಂಗಡಿ, ಈರುಳ್ಳಿ, ಟೊಮ್ಯಾಟೋ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು 60 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ತೋಟಗಾರಿಕೆ ಬೆಳೆಗಾರರು ಕಂಗಾಲಾಗಿದ್ದಾರೆ.
ಜಿಲ್ಲೆಯ ಅಫಜಲಪುರ, ಆಳಂದ ತಾಲೂಕಿನಲ್ಲಿ ತಲಾ 30.5 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿಯೇ ಹೆಚ್ಚು. ಇನ್ನುಳಿದಂತೆ ಕಳೆದ 24 ಗಂಟೆಯಲ್ಲಿ (ಮೇ 19) ಚಿತ್ತಾಪುರದಲ್ಲಿ 6.3 ಮಿ.ಮೀ, ಜೇವರ್ಗಿಯಲ್ಲಿ 8.2 ಮಿ.ಮೀ, ಕಾಳಗಿ 4 ಮಿ.ಮೀ, ಶಹಾಬಾದ 4.5 ಮಿ.ಮೀ ಮಳೆಯಾಗಿದೆ. ಮೂರು ತಾಲೂಕು ಹೊರತು ಪಡಿಸಿ ಕಲಬುರಗಿ, ಆಳಂದ, ಅಫಜಲಪುರ, ಸೇಡಂ, ಚಿಂಚೋಳಿಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ.
ಬಿರುಗಾಳಿಗೆ 60 ಹೆಕ್ಟೇರ್ ಬೆಳೆ ಹಾನಿ: ಮಳೆಗಿಂತ ಬಿರುಗಾಳಿ ಹೊಡೆತಕ್ಕೆ ಭಾರಿ ಅನಾಹುತ ಉಂಟಾಗಿದೆ. ಒಟ್ಟು 60 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. ಪಪ್ಪಾಯಿ ಮತ್ತು ಬಾಳೆ ಬೆಳೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.
ಅಲ್ಲಲ್ಲಿ ಈರುಳ್ಳಿ, ಟೊಮ್ಯಾಟೋ ಮತ್ತು ಕಲ್ಲಂಗಡಿ ಬೆಳೆಗೂ ಹೊಡೆತ ಬಿದ್ದಿದೆ. ಚಿಂಚೋಳಿ, ಅಫಜಲಪುರ, ಆಳಂದ ತಾಲೂಕಿನಲ್ಲಿ ಬಾಳೆ, ಪಪ್ಪಾಯಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಕಲಬುರಗಿ ನಗರದಲ್ಲಿ ಎತ್ತರ ಪ್ರದೇಶದಲ್ಲಿನ ಮನೆಗಳ ಮೇಲ್ಚಾವಣಿ ಹಾರಿ ಹೋಗಿವೆ.
ಅದಲ್ಲದೆ, 18ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಿಡಿಲಿಗೆ 8ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಪ್ರಸಕ್ತ ಸಾಲಿನಲ್ಲಿ 60.7 ಮಿ.ಮೀ ಮಳೆ: ಜಿಲ್ಲೆಯಲ್ಲಿ ಸರಾಸರಿಯಾಗಿ 60.7 ಮಿ.ಮೀ ಮಳೆಯಾಗಿದೆ. ವಾಡಿಕೆಯಂತೆ 50.7 ಮಿ.ಮೀ ಮಳೆಯಾಗಬೇಕಿತ್ತು. ಆಳಂದದಲ್ಲಿ 71.4 ಮತ್ತು ಚಿತ್ತಾಪುರದಲ್ಲಿ 71.5 ಮಿ.ಮೀ ಮಳೆಯಾಗಿದೆ. ಬಹುತೇಕ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪ್ರತಿ ತಾಲೂಕಿನಲ್ಲಿ 50 ಮಿ.ಮೀ ಮಳೆಯಾಗಿದೆ.
ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಬಿದ್ದಿರುವ ಮಳೆಗೆ ಒಟ್ಟು 60 ಹೆಕ್ಟೇರ್‌ನಲ್ಲಿದ್ದ ಬೆಳೆ ಹಾನಿಗೊಳಗಾಗಿದೆ. ಪಪ್ಪಾಯಿ, ಬಾಳೆ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಕೂಡಲೇ ಸಮೀಕ್ಷೆ ಮಾಡಲಾಗುವುದು. ಇನ್ನೆರಡರು ದಿನ ಮಳೆ ಬೀಳುವ ಸಾಧ್ಯತೆ ಇದೆ. ಮಳೆಗಿಂತ ಬಿರುಗಾಳಿಯಿಂದಲೇ ಹೆಚ್ಚು ಹಾನಿಯಾಗಿದೆ. ಪ್ರಭುರಾಜ ಹಿರೇಮಠ, ಡಿಡಿ, ತೋಟಗಾರಿಕೆ
–ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.