ಗ್ರಾಮೀಣದಲ್ಲಿ ಶೌಚಾಲಯ ಬಳಕೆ ಜಾಗೃತಿ ಮೂಡಲಿ
Team Udayavani, Jan 15, 2022, 11:40 AM IST
ಅಫಜಲಪುರ: ಗ್ರಾಮೀಣ ಭಾಗದ ಜನರಲ್ಲಿ ಇನ್ನಾದರೂ ಶೌಚಾಲಯ ಬಳಕೆ ಜಾಗೃತಿ ಮೂಡಲಿ ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ದೇವಲ ಗಾಣಗಾಪುರ ಗ್ರಾಮದ ಯತಿರಾಜ್ ಶಿಕ್ಷಣ ಸಂಸ್ಥೆಯಲ್ಲಿ ಆತ್ಮ ನಿರ್ಭರ ಭಾರತ, ಸ್ವತ್ಛ ಭಾರತ ಅಭಿಯಾನದಡಿ ನೂತನವಾಗಿ ನಿರ್ಮಿಸಲಾಗಿರುವ ನಾರಿ ನಿರ್ಮಲ ನಿಲಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ಸ್ವತ್ಛವಾಗಬೇಕು. ಜನರ ಜೀವನ ಶೈಲಿ ಸುಧಾರಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿಯಾಗಿದೆ. ಅದರಂತೆ ಅವರು ಯೋಜನೆ ರೂಪಿಸುತ್ತಿದ್ದಾರೆ. ಅವರ ಕನಸು ನನಸಾಗಬೇಕಾದರೆ ಇಂತಹ ಕ್ರಿಯಾತ್ಮಕ ಕೆಲಸಗಳು ಹೆಚ್ಚು ನಡೆಯಬೇಕು. ಯತಿರಾಜ್ ಶಿಕ್ಷಣ ಸಂಸ್ಥೆ ಶೌಚಾಲಯಕ್ಕೆ ನಾರಿ ನಿರ್ಮಲ ನಿಲಯವೆಂದು ಹೆಸರಿಟ್ಟು ಪ್ರಧಾನಿಗೆ ಸಮರ್ಪಸಿದ್ದು ನಿಜಕ್ಕೂ ಖುಷಿ ತಂದಿದೆ ಎಂದರು.
ಸಂಸ್ಥೆ ಸಂಸ್ಥಾಪಕ ಭೀಮರಾವ್ ಚೌಡಾಪುರಕರ್, ಅಧ್ಯಕ್ಷೆ ಮೀರಾ ಚವಡಾಪುರಕರ, ಗ್ರಾ.ಪಂ ಉಪಾಧ್ಯಕ್ಷ ಕರುಣಾಕರ ಭಟ್ ಪೂಜಾರಿ, ಮಾಜಿ ಅಧ್ಯಕ್ಷ ನಂದಕುಮಾರ ಕೆ. ಪೂಜಾರಿ, ದೇವಿಂದ್ರ ಜಮಾದಾರ, ಬಲವಂತ ಜಕಬಾ, ಮಲ್ಲುಸಾಹುಕಾರ ಕಣ್ಣಿ ತೆಲ್ಲೂರ, ನಂದಕುಮಾರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಗೋವಿಂದರಾವ್ ಚೌಡಾಪುರಕರ್ ಹಾಗೂ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.