ಅಕ್ಕಮಹಾದೇವಿ ವಚನ ಅರಿತು ಅಳವಡಿಸಿಕೊಳ್ಳಿ: ಡಾ| ಪಟ್ಟದ್ಧೇವರು
Team Udayavani, Mar 28, 2022, 11:14 AM IST
ಚಿಂಚೋಳಿ: ಶಿವಶರಣೆ ಜಗನ್ಮಾತೆ ಅಕ್ಕಮಹಾದೇವಿ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ, ಪೂಜ್ಯ ಡಾ| ಬಸವಲಿಂಗ ಪಟ್ಟದೇವರು ನುಡಿದರು.
ದೇಗಲಮಡಿ ಗ್ರಾಮದಲ್ಲಿ ಪರಮ ಪೂಜ್ಯ ಡಾ| ಬಸವಲಿಂಗ ಅವಧೂತರ 10ನೇ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಶರಣೆ ಅಕ್ಕಮಹಾದೇವಿ ವಚನಗಳನ್ನು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು. ಮನಸ್ಸು ಪವಿತ್ರವಾಗಿದ್ದರೆ ದೇವರನ್ನು ಕಾಣಬಹುದು ಎಂದರು.
ಪೂಜ್ಯ ಡಾ| ಬಸವಲಿಂಗ ಅವದೂತರ ಆರ್ಶೀವಚನ ನೀಡಿ, ಭಕ್ತರು ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡರೆ ನಾವು ಮಾಡಿದ ಪಾಪಗಳು ಪರಿಹಾರ ಆಗುತ್ತವೆ ಎಂದು ಹೇಳಿದರು.
ತಡೋಳ ಕಟ್ಟಿಮಠ ಸಂಸ್ಥಾನ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಯಾರ ಮನೆಯಲ್ಲಿ ಭಜನೆ ಮತ್ತು ಭೋಜನ ಇರುತ್ತದೋ ಅಲ್ಲಿ ಸ್ವರ್ಗ ಮತ್ತು ಆನಂದ ಇರುತ್ತದೆ ಎಂದರು.
ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಅವಧೂತರ ಪುಣ್ಯಾಶ್ರಮಕ್ಕೆ ನಾನು ಶಾಸಕನಾಗಿ ಬಂದಿಲ್ಲ. ಮಠದ ಭಕ್ತನಾಗಿ ಬಂದಿದ್ದೇನೆ. ಅಧಿಕಾರ ಇರಲಿ, ಬಿಡಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪೂಜ್ಯರ ಆಶೀರ್ವಾದ ನನ್ನ ಮೇಲಿರಲಿ ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಡಿವೈಎಸ್ಪಿ ಬಸವೇಶ್ವರ ಹೀರಾ, ದೇಗಲಮಡಿ ಗ್ರಾಪಂ ಅಧ್ಯಕ್ಷೆ ಶೋಭಾ ಮುದ್ದಾ, ಉಮಾ ಪಾಟೀಲ, ಲಕ್ಷ್ಮಣ ಆವಂಟಿ, ಶ್ರೀಮಂತ ಕಟ್ಟಿಮನಿ, ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ಐ ಮಂಜುನಾಥರೆಡ್ಡಿ, ಚಿತ್ರಶೇಖರ ಪಾಟೀಲ, ಶರಣಗೌಡ ಮುದ್ದಾ, ವಿವೇಕ ಪಾಟೀಲ, ಹಿರಿಯ ಪತ್ರಕರ್ತ ಶಾಮರಾವ ಚಿಂಚೋಳಿ, ಜಗನ್ನಾಥ ಶೇರಿಕಾರ, ಅವಿನಾಶ ಗೋಸುಲ, ಸಿದ್ಧಪ್ಪಗೌಡ ಮುದ್ದ ಇನ್ನಿತರರು ಭಾಗವಹಿಸಿದ್ದರು. ಕು. ಅನ್ವಿತಾ ಪಾಟೀಲ ಪ್ರಾರ್ಥಿಸಿದರು, ಬೀದರ ದೇವೇಂದ್ರ ಕರಂಜಿ ಸ್ವಾಗತಿಸಿದರು, ನವಲಿಂಗ ಪಾಟೀಲ ವಂದಿಸಿದರು. ಬೀದರ, ಜಹೀರಾಬಾದ, ಚಿಂಚೋಳಿ, ಹುಮನಾಬಾದ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.