ಪರಿಹಾರ ವಿತರಣೆ ವಿಳಂಬ-ಅಧಿಕಾರಿ ಅಮಾನತು
Team Udayavani, Jun 23, 2022, 1:12 PM IST
ಅಫಜಲಪುರ: ಜಿಲ್ಲಾಧಿಕಾರಿ ಯಶವಂತ ಗುರುಕರ್ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಆಗಮಿಸಿದಾಗ ಗ್ರಾ.ಪಂ ನಿವೃತ್ತ ನೌಕರರು ಬಾಕಿ ವೇತನ ಪಾವತಿ ಮಾಡಿಸಿ, ಇಲ್ಲವೇ ವಿಷ ಕೊಡಿ ಎಂದು ವಿಷದ ಬಾಟಲಿಯೊಂದಿಗೆ ಜಿಲ್ಲಾಧಿಕಾರಿಗಳ ಬಳಿ ಬಂದಾಗ “ವಿಷ ತೋರಿಸಿ ಅಂಜಿಕೆ ಹಾಕುವುದಲ್ಲ, ಸಮಸ್ಯೆ ಹೇಳಿ’ ಎಂದು ಸಿಡಿಮಿಡಿಗೊಂಡರು.
ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿ ಅಹವಾಲು ಸ್ವೀಕರಿಸುತ್ತಿರುವಾಗ ಈ ಪ್ರಸಂಗ ನಡೆಯಿತು. ಗೌರ (ಬಿ) ಗ್ರಾಪಂ ನಿವೃತ್ತ ನೌಕರರು ಜಿಲ್ಲಾಧಿಕಾರಿಗಳ ಬಳಿ ಹೂವಿನ ಬುಟ್ಟಿಯಲ್ಲಿ 1500ರೂ. ಹಾಗೂ ವಿಷದ ಬಾಟಲಿಯೊಂದಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡರು. ನಾವು ವೇತನಕ್ಕಾಗಿ ಸತ್ಯಾಗ್ರಹ ಮಾಡಿದರೂ ಪ್ರಯೋಜನವಾಗಿಲ್ಲ, ನಾವು ಮಾಡಿದ ಕೆಲಸಕ್ಕೆ ವೇತನ ನೀಡಲು ಅಧಿಕಾರಿಗಳು ಹಿಂದೇಟು ಹಾಕುವುದೇಕೆ? ಹೀಗಾಗಿ ನೀವೆ ನಮಗೆ ವಿಷ ನೀಡಿ ಎಂದಾಗ ಜಿಲ್ಲಾಧಿಕಾರಿಗಳು “ಮುಖಂಡರು ಎನಿಸಿಕೊಂಡವರನ್ನು ಕರೆತಂದು, ವಿಷ ತೋರಿಸಿ ಹೆದರಿಸಬೇಡಿ. ನಿಮ್ಮ ಸಮಸ್ಯೆ ಹೇಳಿದ್ದೀರಿ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರಲ್ಲದೇ ಪಿಡಿಒ ಅವರನ್ನು ಕರೆದು ತರಾಟೆಗೆ ತೆಗೆದುಕೊಂಡು ಸಂಜೆ ವೇಳೆಗೆ ಇವರ ವೇತನ ಪಾವತಿಯಾಗಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿ ಅಮಾನತು: ಮೇ ತಿಂಗಳಲ್ಲಿ ಬಂದ ಅಕಾಲಿಕ ಮಳೆಯಿಂದ ತಾಲೂಕಿನ ಬಡದಾಳ, ರೇವೂರ ಗ್ರಾಮದ ಬೆಳೆ ಹಾನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 4.50ಲಕ್ಷ ರೂ. ಪರಿಹಾರ ಬಂದು 45 ದಿನವಾದರೂ ರೈತರಿಗೆ ಪರಿಹಾರ ನೀಡದೇ ಕಾಲಹರಣ ಮಾಡಿದ ಅಧಿಕಾರಿ ಸೊಹೇಲ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತಹಶೀಲ್ದಾರ್ ಸಂಜೀವಕುಮಾರ ದಾಸರ್, ತಾಪಂ ಇಒ ರಮೇಶ ಸುಲ್ಪಿ, ಅಧಿಕಾರಿಗಳಾದ ಚೇತನ ಗುರಿಕಾರ, ನಾಗರಾಜ ಕ. ಸಂಜುಕುಮಾರ ಚವ್ಹಾಣ, ಕೆ. ಬಾಲಕೃಷ್ಣ, ಮೀನಾಕ್ಷಮ್ಮ ಪಾಟೀಲ, ಅಶೋಕ ಬಬಲಾದ, ಸೈಯದ್ ಇಸಾ, ಎಸ್.ಎಚ್ ಗಡಗಿಮನಿ, ಸುರೇಂದ್ರನಾಥ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.