ಎಸ್ಸಿ ಪ್ರಮಾಣ ಪತ್ರಕ್ಕೆ ಮನವಿ
Team Udayavani, Feb 10, 2022, 11:48 AM IST
ಅಫಜಲಪುರ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವಾಸವಾಗಿರುವ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಹೈದ್ರಾಬಾದ ಕರ್ನಾಟಕ ಬೇಡಜಂಗಮ ಸಮಾಜ ಸಂಸ್ಥೆ ವತಿಯಿಂದ ತಹಶೀಲ್ದಾರ್ ನಾಗಮ್ಮ ಅವರಿಗೆ ಮನವಿ ಮಾಡಿಕೊಳ್ಳಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ಅಮರೇಶ್ವರ ರಾವೂರಮಠ ಮಾತನಾಡಿ, ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರ ನಿರ್ಣಯ ಕೈಗೊಂಡಿದೆ. ಹೀಗಾಗಿ ಬೇಡ ಜಂಗಮ ಸಮಾಜದವರು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದಾಗ ಸರ್ಕಾರದ ಆದೇಶಗಳನ್ನು ಪರಿಗಣಿಸಿ, ಪ್ರಮಾಣಪತ್ರ ನೀಡಬೇಕೆಂದು ವಿನಂತಿಸಿದರು.
ಮುಖಂಡ ಚಿದಾನಂದ ಮಠ ಮಾತನಾಡಿ, ಸಮಾಜ ಬಾಂಧವರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಸ್ಥಳ ತನಿಖೆ ಮತ್ತು ಪಂಚನಾಮೆ ಸಮಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಹಾಗೂ ನಿರ್ದೇಶನ ಪರಿಗಣಿಸಲು ತಿಳಿಹೇಳಾಗಿದೆ, ಅಲ್ಲದೇ ಗ್ರಾಮ ಲೇಖಪಾಲಕರು ಹಾಗೂ ಕಂದಾಯ ನಿರೀಕ್ಷಕರು ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ, ನಿರ್ದೇಶನ, ಸರ್ಕಾರದ ಆದೇಶಗಳನ್ನು ಗಣನೆಗೆ ತೆಗೆದುಕೊಂಡು ಪರಿಗಣಿಸಲು ಕಟ್ಟುನಿಟ್ಟಿನ ಸೂಚನೆ ನೀಡಲು ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.
ಮುಖಂಡರಾದ ಮಲ್ಲಯ್ಯ ಹೊಸಮಠ, ಶರಣಯ್ಯ ಹಿರೇಮಠ, ಮಲ್ಲಯ್ಯ ಶಿವಲಿಂಗಯ್ಯ, ಶಿವಲಿಂಗಯ್ಯ ಮಠ, ವಿಶ್ವನಾಥ ಮಠಪತಿ, ಶಾಂತಯ್ಯ ಕಳ್ಳಿಮಠ, ಸೋಮಯ್ಯ ಹಿರೇಮಠ, ಮಹೇಶ ಮಠ, ಶಿವಾನಂದ ಚೆನ್ನಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.