ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ರೈತರ ವಿರೋಧ
Team Udayavani, May 23, 2020, 10:37 AM IST
ಸೇಡಂ: ಪಟ್ಟಣದ ತರ್ನಳ್ಳಿ ರಸ್ತೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಶಾಂತಕುಮಾರ ಚನ್ನಕ್ಕಿ ತರ್ನಳ್ಳಿ ರಸ್ತೆಯಲ್ಲಿ ಒಟ್ಟು ಐದು ಎಕರೆ ಪ್ರದೇಶದಲ್ಲಿ ಒಳಚರಂಡಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗುತ್ತಿದೆ. ಘಟಕ ಸ್ಥಾಪನೆಗೂ ಮುನ್ನ ಸುತ್ತಮುತ್ತಲು ಇರುವ ಜಮೀನುಗಳ ರೈತರಿಗೆ ಮಾಹಿತಿ ನೀಡಿಲ್ಲ, ಅವರ ಅಭಿಪ್ರಾಯವನ್ನೂ ಪಡೆದಿಲ್ಲ ಎಂದು ತಿಳಿಸಿದರು. ಘಟಕ ಸ್ಥಾಪನೆಯಿಂದ ಅನೇಕ ಜಮೀನುಗಳಿಗೆ ಹಾನಿಯಾಗಲಿದೆ. ಜನ- ಜಾನುವಾರುಗಳ ಜೀವಕ್ಕೆ ಅಪಾಯವುಂಟಾಗಲಿದೆ. ಜೊತೆಗೆ ಅಂತರ್ಜಲ ಮಟ್ಟ ಕಲುಷಿತವಾಗುವ ಸಾಧ್ಯತೆ ಇದ್ದು, ಕೂಡಲೇ ಘಟಕ ಸ್ಥಾಪನೆ ಕಾರ್ಯ ಕೈಬಿಡಬೇಕು. ಇಲ್ಲವಾದರೆ ತಮ್ಮ ಸಮಾಧಿ ಮೇಲೆ ಘಟಕ ಸ್ಥಾಪಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ಬಾರಿ ಶಾಸಕರು, ಮಾಜಿ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ, ಘಟಕ ಬೇರೆಡೆ ಸ್ಥಳಾಂತರಿಸಲು ಕೋರಲಾಗಿದೆ. ಆದರೂ ಸ್ಪಂದನೆ ದೊರೆಯುತ್ತಿಲ್ಲ. ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಒಳಚರಂಡಿ ನೀರು ಶುದ್ಧೀಕರಣ ಘಟಕ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಕೂಡಲೇ ಬೇರೆ ಸ್ಥಳಾಂತರಿಸಬೇಕು. ಅಲ್ಲಿಯವರೆಗೂ ಪಟ್ಟು ಬಿಡುವುದಿಲ್ಲ ಎಂದು ಎಚ್ಚರಿಸಿದರು. ನರೇಶ ಪೂಜಾರಿ ತರ್ನಳ್ಳಿ,, ಅಣ್ಣಪ್ಪ ಪೂಜಾರಿ ತರ್ನಳ್ಳಿ, ಶಾಂತಕುಮಾರ ಚನ್ನಕ್ಕಿ, ಚಂದ್ರು ಚನ್ನಕ್ಕಿ, ಭಿಮಾಶಂಕರ ಚನ್ನಕ್ಕಿ, ನಿರ್ಮಲಾ ಸುಣಗಾರ, ಅನ್ನಪೂರ್ಣ ಸುಣಗಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.