ದಲಿತ ಸೇನೆ ಮಹಿಳಾ ಘಟಕಕ್ಕೆ ಆಯ್ಕೆ
Team Udayavani, Dec 10, 2021, 12:16 PM IST
ಅಫಜಲಪುರ: ಅನ್ಯಾಯದ ವಿರುದ್ಧ ಹೋರಾಟ ಮಾಡಲು ತಾಲೂಕಿನಲ್ಲಿ ಮಹಿಳಾ ಸಂಘಟನೆ ರಚಿಸುವಂತೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಆದೇಶದ ಮೇರೆಗೆ ದಲಿತ ಸೇನೆ ಮಹಿಳಾ ತಾಲೂಕಾಧ್ಯಕ್ಷೆಯಾಗಿ ರೂಪಾ ಸಾಲೋಟಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ದಲಿತ ಸೇನೆ ಅಧ್ಯಕ್ಷ ಮಾಹಾಂತೇಶ ಬಳೂಂಡಗಿ ಹೇಳಿದರು.
ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ತಾಲೂಕು ಕಾರ್ಯಾಧ್ಯಕ್ಷೆ ಅನಸೂಯಾ ವೈ. ಆರೇಕರ್, ಪ್ರಧಾನ ಕಾರ್ಯಾಧ್ಯಕ್ಷೆ ಸಾವಿತ್ರಿ ಭೌರಗಿ, ಖಜಾಂಚಿಯಾಗಿ ಮುನಿರಾ ಬೇಗಂ, ಉಪಾಧ್ಯಕ್ಷೆಯಾಗಿ ಮಮತಾ ಎನ್. ದೊಡ್ಮನಿ, ಭಾರತಿ ಕುಂಬಾರ, ಸಂಘಟನಾ ಕಾರ್ಯದರ್ಶಿಯಾಗಿ ಸರಸ್ವತಿ ಇಸ್ಪೂರ, ನಗರ ಘಟಕ ತಾಲೂಕಾಧ್ಯಕ್ಷೆಯಾಗಿ ಸುನಂದಾ ಸುಲೇಕರ್, ಉಪಾಧ್ಯಕ್ಷೆಯಾಗಿ ಶೋಭಾ ಚೆನ್ನೂರ, ಪ್ರಧಾನ ಕಾರ್ಯದರ್ಶಿಯಾಗಿ ನಾಗಮ್ಮ ಶಿರಗಿರಿ ಅವರನ್ನು ನೇಮಕ ಮಾಡಲಾಯಿತು ಎಂದು ತಿಳಿಸಿದರು.
ದಲಿತ ಸೇನೆ ಮುಖಂಡರಾದ ನಿಂಗು ಪಾಟೋಳಿ, ರವಿ ಅಳ್ಳಗಿ, ಮಹಾದೇವ ಬಂಕಲಗಿ, ಬಾಬು ಕೇಸಾಪುರ ,ಮಡಿವಾಳ ಹೊಸ್ಮನಿ, ಸಾಗರ ಅಳ್ಳಗಿ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.