ಬೇಡಿಕೆ ಈಡೇರಿಕೆಗೆ ಆಗ್ರಹ
Team Udayavani, May 14, 2020, 10:37 AM IST
ಶಹಾಬಾದ: ಎಐಡಿವೈಒ ಕಾರ್ಯಕರ್ತರು ಫಲಕ ಹಿಡಿದು ಮನೆಯಿಂದಲೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಶಹಾಬಾದ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಜೆಷನ್ ಜಿಲ್ಲಾ ಸಮಿತಿಯಿಂದ ಮನೆಯಿಂದಲೇ ಆಗ್ರಹಿಸಲಾಯಿತು.
ಲಾಕ್‌ಡೌನ್‌ನಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್ 19 ಹೋರಾಟಗಾರರಿಗೆ ಮಾಸ್ಕ್ ಹಾಗೂ ಸುರಕ್ಷಿತ ಕಿಟ್ ನೀಡಬೇಕು. ಪರೀಕ್ಷೆ ಉಚಿತ ಮಾಡಬೇಕು. ವಲಸೆ ಕಾರ್ಮಿಕರಿಗೆ, ದಿನಗೂಲಿಗಳು, ಇ-ಕಾಮರ್ಸ್ ಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಜತೆಗೆ, ಕಾರ್ಮಿಕರ ಉದೋಗ್ಯ ರಕ್ಷಿಸಬೇಕು ಹಾಗೂ ಪೂರ್ಣ ವೇತನ ನೀಡಬೇಕು. ಅರೆಕಾಲಿಕ ಉಪನ್ಯಾಸಕ, ಅನುದಾನ ರಹಿತ ಶಾಲೆ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಅಡಿ ಸಹಾಯ ಧನ ನೀಡಬೇಕು. ಗೋದಾಮುಗಳಲ್ಲಿ ಕೊಳೆಯುತ್ತಿರುವ 77 ದಶಲಕ್ಷ ಟನ್ ಆಹಾರ ಧಾನ್ಯ ಹಸಿದವರಿಗೆ ಹಂಚಬೇಕು. ನಿರೋದ್ಯೋಗಿಗಳಿಗೆ ಮತ್ತು ಜನ್‌ಧನ್ ಖಾತೆದಾರರಿಗೆ ಮುಂದಿನ ಕನಿಷ್ಠ 6 ತಿಂಗಳು ಮಾಸಿಕ 5000 ರೂ. ಸಹಾಯ ಪ್ಯಾಕೇಜ್ ನೀಡಬೇಕು. ನರೇಗಾ ಅಡಿ ಮಾನವ ದಿನಗಳ ಸಂಖ್ಯೆಯನ್ನು 200ಕ್ಕೆ ಏರಿಸಬೇಕು ಎಂದು ಒತ್ತಾಯಿಸಲಾಯಿತು. ಎಐಡಿವೈಒ ಜಿಲ್ಲಾ ಅಧ್ಯಕ್ಷ ನಿಂಗಣ್ಣ ಜಂಬಗಿ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್. ಫಲಕ ಹಿಡಿದು ಸರ್ಕಾರಕ್ಕೆ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ
Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು