ಲಾಕ್‌ಡೌನ್ ಪಾಲನೆಯೇ ದೊಡ್ಡ ಸೇವೆ
Team Udayavani, Apr 15, 2020, 10:39 AM IST
ಶಹಾಬಾದ: ನಗರದ ರಾಮಘಡ ಆಶ್ರಯ ಕಾಲೋನಿ ಬಡಜನರಿಗೆ ಶಾಸಕ ಬಸವರಾಜ ಮತ್ತಿಮಡು ಆಹಾರ ಪದಾರ್ಥ ವಿತರಿಸಿದರು.
ಶಹಾಬಾದ: ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೂಂದಿಲ್ಲ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಮಂಗಳವಾರ ನಗರದ ರಾಮಘಡ ಆಶ್ರಯ ಕಾಲೋನಿ ಬಡಜನರಿಗೆ ಹಾಗೂ ನಿರ್ಗತಿಕರ ಕುಟುಂಬದವರಿಗೆ ಆಹಾರ ಪದಾರ್ಥ ನೀಡಿ ಅವರು ಮಾತನಾಡಿದರು. ಕೊರೊನಾ ರೋಗಕ್ಕೆ ಯಾವುದೇ ಮದ್ದಿಲ್ಲ. ನೀವು ಮನೆಯಲ್ಲಿರುವುದೇ ಅದಕ್ಕೆ ಮದ್ದು. ಆದ್ದರಿಂದ ಯಾರು ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರಬೇಡಿ. ಹೊರಗೆ ಬಂದಾಗ ಸಾಮಾಜಿಕ ಅಂತರ ಕಾಪಾಡಿ ಎಂದರು.
ಬಿಜೆಪಿ ನಗರಾಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ಶಾಸಕರು ತಮ್ಮ ಮತಕ್ಷೇತ್ರದ ಜನರು ಆಹಾರದ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಪೊಟ್ಟಣದಲ್ಲಿ ಮನೆಗೆ ಬೇಕಾದ ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ಹಿಟ್ಟು, ಎಣ್ಣೆ, ಸಕ್ಕರೆ, ಹಾಲು, ಚಹಾಪತ್ತಿ, ಜೀರಗಿ, ಸಾಸಿವೆ ಸೇರಿದಂತೆ ಅನೇಕ ವಸ್ತುಗಳನ್ನು ನೀಡಿದ್ದಾರೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ನೀಲಗಂಗಾ ಬಬಲಾದ, ತಹಶೀಲ್ದಾರ್ ಸುರೇಶ ವರ್ಮಾ, ನಿಂಗಣ್ಣ ಹುಳಗೋಳಕರ್, ಚಂದ್ರಕಾಂತ ಗೊಬ್ಬೂರಕರ್, ಸುಭಾಷ ಜಾಪೂರ, ರವಿ ರಾಠೊಡ, ಸದಾನಂದ ಕುಂಬಾರ,ಕನಕಪ್ಪ ದಂಡಗುಲಕರ್, ಅಣ್ಣಪ್ಪ ದಸ್ತಾಪುರ, ಭೀಮಯ್ಯ ಗುತ್ತೇದಾರ, ಶ್ರೀಧರ ಜೋಷಿ, ಡಿ.ಸಿ. ಹೊಸಮನಿ, ಅಮರ ಕೋರೆ, ಸಂಜಯ ಕೋರೆ, ಶರಣು ಕವಲಗಿ, ದುರ್ಗಪ್ಪ ಪವಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.