ಕ್ವಾರಂಟೈನ್‌ದಿಂದ ಮನೆಗೆ ಹೋದವರಿಗೆ ಸೋಂಕು
Team Udayavani, May 30, 2020, 10:38 AM IST
ಸಾಂದರ್ಭಿಕ ಚಿತ್ರ
ಶಹಾಬಾದ: ನಗರದ ವಿವಿಧ ಕ್ವಾರಂಟೈನ್ ಕೇಂದ್ರದಿಂದ ಗುರುವಾರ ಮನೆಗೆ ತೆರಳಿದ್ದ ಸುಮಾರು ಏಳು ಜನರಿಗೆ ಶುಕ್ರವಾರ ಕೋವಿಡ್ ಸೋಂಕು ಪತ್ತೆಯಾಗಿದೆ.
ನಗರದ ಜಿಪಿಎಸ್ ಶಾಲೆಯ ಕ್ವಾರಂಟೈನ್ ಕೇಂದ್ರದಿಂದ ಗುರುವಾರ ಮನೆಗೆ ಹೋಗಿದ್ದ ನಾಲ್ವರಿಗೆ ಹಾಗೂ ಭಂಕೂರ ವಸತಿ ನಿಲಯದಲ್ಲಿದ್ದ ಮೂವರಿಗೆ ಸೋಂಕು ಕಂಡು ಬಂದಿದೆ. ನಗರ ಜಿಪಿಎಸ್ ಶಾಲೆಯಲ್ಲಿ 69 ಜನ ಮುಂಬೈ ವಲಸಿಗರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಗುರುವಾರ ಓರ್ವ ಮಹಿಳೆಗೆ ಸೋಂಕು ಕಂಡು ಬಂದಿತ್ತು. ಅವಳನ್ನು ಕಲಬುರಗಿಗೆ ಸಾಗಿಸಿ, ಉಳಿದವರನ್ನು ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಕಳುಹಿಸಲಾಗಿತ್ತು. ಹೀಗೆ ಕಳುಹಿಸಿದ ಮೂವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನು ಶುಕ್ರವಾರ ಅಂಬುಲೆನ್ಸ್ ಮೂಲಕ ಕಲಬುರಗಿಗೆ ಕಳುಹಿಸಲಾಗಿದೆ.
ನಗರದ ಜಿಪಿಎಸ್ ಶಾಲೆಯಲ್ಲಿ ಸೋಂಕು ಕಂಡು ಬಂದ ವ್ಯಕ್ತಿಯೊಬ್ಬ ಗುರುವಾರ ಗೋಳಾ (ಕೆ) ಗ್ರಾಮದ ಮನೆಯಲ್ಲಿದ್ದು, ಶುಕ್ರವಾರ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದಾನೆ ಎನ್ನಲಾಗಿದೆ. ಆತನ ಕುಟುಂಬಸ್ಥರು ಶುಕ್ರವಾರ ಗೋಳಾ ಶಾಲೆ ಆವರಣದಲ್ಲಿ ಶಾಸಕರು ನೀಡಿದ ದಿನಸಿ ಕಿಟ್ ಪಡೆಯಲು ಜನರ ಮಧ್ಯೆ ಇದ್ದರು ಎನ್ನಲಾಗಿದೆ.
ಭಂಕೂರನಲ್ಲಿ ಕೋವಿಡ್ ಸೊಂಕು ಕಂಡು ಬಂದ ವ್ಯಕ್ತಿಗಳು ಕ್ವಾರಂಟೈನ್ ಕೇಂದ್ರದ ಸಮೀಪದಲ್ಲಿಯೇ ತಮ್ಮ ಮನೆ ಇರುವುದರಿಂದ ಇದ್ದ 14 ದಿನ ತಮ್ಮ ಮನೆಗೆ ಹೋಗಿ, ಮನೆಯವರೊಂದಿಗೆ ಬೆರೆತಿದ್ದು, ಅವರಲ್ಲಿ ಓರ್ವ ವ್ಯಕ್ತಿ ಕ್ರೂಸರ್‌ನಲ್ಲಿ ಕಲಬುರಗಿಗೆ ಹೋಗಿದ್ದಾನೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.