ಸಡಗರದ ಘಾಣದಕಲ್ಲು ಸಿದ್ಧಬಸವೇಶ್ವರ ಪರ್ವ
ಸಂಜೆ 7 ಗಂಟೆಯವರೆಗೂ ಬಂದ ಭಕ್ತಾ ದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
Team Udayavani, Sep 24, 2021, 6:05 PM IST
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಕೋಳಕೂರ ಗ್ರಾಮದ ಆರಾಧ್ಯ ದೈವ ಘಾಣದಕಲ್ಲು ಸಿದ್ಧ ಬಸವೇಶ್ವರರ ಮಹಾ ಪರ್ವ ಗುರುವಾರ ಸಡಗರ-ಸಂಭ್ರಮದಿಂದ ಜರುಗಿತು. ಪರ್ವ ನಿಮಿತ್ತ ಗುರುವಾರ ಬೆಳಗ್ಗೆ 6 ಗಂಟೆಗೆ ಸಿದ್ಧಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಮಂಗಳಾರತಿ, ನೈವೇದ್ಯ ಅರ್ಪಿಸಲಾಯಿತು. ನಂತರ ಗ್ರಾಮದ ಸಿದ್ಧಬಸವೇಶ್ವರ ದೇವಸ್ಥಾನದಿಂದ 4 ಕಿ.ಮೀ ದೂರದ ಘಾಣದಕಲ್ ದೇವಸ್ಥಾನದ ವರೆಗೆ ಅದ್ಧೂರಿ ಪಲ್ಲಕ್ಕಿ ಉತ್ಸವ ಜರುಗಿತು.
ಮಧ್ಯಾಹ್ನ 1 ಗಂಟೆಗೆ ಪರ್ವ ನಿಮಿತ್ತ ದೇವಸ್ಥಾನ ಸದ್ಭಕ್ತ ಮಂಡಳಿ ತಯಾರಿಸಿದ ಭಜ್ಜಿ ಪಲ್ಲೆ, ಜೋಳದ ರೊಟ್ಟಿ ಪ್ರಸಾದ ಸೇವೆ ಪ್ರಾರಂಭವಾಯಿತು. ಸಂಜೆ 7 ಗಂಟೆಯವರೆಗೂ ಬಂದ ಭಕ್ತಾ ದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋಳಕೂರ ಸೇರಿದಂತೆ ಜೇವರ್ಗಿ, ರದ್ದೇವಾಡಗಿ, ಕೂಡಿ, ಕೋಬಾಳ, ಮಂದ್ರವಾಡ, ಬಣಮಿಗಿ, ಕೋನಾಹಿಪ್ಪರಗಿ, ಗೌನಳ್ಳಿ, ಜನಿವಾರ, ರಾಸಣಗಿ ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.
ಕೋಳಕೂರ ಹಾಗೂ ಕಲಬುರಗಿ ರೋಜಾಮಠದ ಕೆಂಚಬಸವ ಶಿವಾಚಾರ್ಯ ಸ್ವಾಮೀಜಿ, ರಾಜಶೇಖರ ಸೀರಿ, ವೀರೇಶ ಪಾಟೀಲ, ಬಸವರಾಜ ಬಿರಾಳ, ಯಶ ವಂತ್ರಾಯ ಬಣಮಿ, ಶಿವಣ್ಣಗೌಡ ಮಂದರ ವಾಡ, ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಸಿದ್ಧು ಸಾಹು ಅಂಗಡಿ ಹಾಗೂ ರಾಜಕೀಯ ಮುಖಂಡರು, ಭಕ್ತರು ಆಗಮಿಸಿ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.