ಅಂಗವಿಕಲರ ಬಸ್ ಪಾಸ್ ನಿಯಮ ಸರಳೀಕರಿಸಿ
Team Udayavani, Feb 5, 2022, 12:33 PM IST
ಚಿತ್ತಾಪುರ: ಅಂಗವಿಕಲರ ಬಸ್ ಪಾಸ್ ನವೀಕರಣ ವೇಳೆ ಹಳೆ ಪಾಸ್ ಪಡೆದು ಹೊಸ ಪಾಸ್ ನೀಡುವಂತೆ ನಿಯಮ ಸರಳೀಕರಣ ಮಾಡಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ಧೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಶಿರಸ್ತೇದಾರ ಅಶ್ವತ್ಥ್ ನಾರಾಯಣ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂಗವಿಕಲರು ವಾಸ ಮಾಡುವ ಸ್ಥಳದಿಂದ 100 ಕಿ.ಮೀ ವರೆಗೆ ಉಚಿತವಾಗಿ ಬಸ್‌ನಲ್ಲಿ ಸಂಚರಿಸಲು ಪ್ರತಿವರ್ಷ ಜನವರಿಯಲ್ಲಿ ಬಸ್ ಪಾಸ್ ನೀಡುತ್ತದೆ. ಡಿಸೆಂಬರ್‌ನಲ್ಲಿ ಪಾಸ್ ಕೊನೆಗೊಳ್ಳುತ್ತದೆ. ಆದರೆ ಇದುವರೆಗೆ ಕೇವಲ ಶೇ.10ರಷ್ಟು ಅಂಗವಿಕಲರಿಗೆ ಮಾತ್ರ ಬಸ್ ಪಾಸ್ ನೀಡಲಾಗಿದೆ. ಅನೇಕ ಅಂಗವಿಕಲರು ಬಸ್ ಪಾಸ್‌ಗಾಗಿ ಅಲೆದಾಡುತ್ತಿದ್ದಾರೆ ಎಂದರು.
ಹಳೆ ಪಾಸ್ ನೋಡಿ ನವೀಕರಣಗೊಳಿಸಿ ಹೊಸ ಪಾಸ್ ನೀಡುವ ವ್ಯವಸ್ಥೆಯಿದೆ. ಅಂಗವಿಕಲರು ಆರೋಗ್ಯ ಇಲಾಖೆ ವೈದ್ಯರು ತಪಾಸಣೆ ಮಾಡಿ, ನೀಡಿರುವ ಗುರುತಿನ ಚೀಟಿ ನೋಡಿ ಬಸ್ ಪಾಸ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅರ್ಜಿ ಸಲ್ಲಿಸಲು ಯುಡಿಐಡಿ ಗುರುತಿನ ಚೀಟಿ ಕಡ್ಡಾಯವೆಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂಗವಿಕಲರು ಅರ್ಜಿ ಸಲ್ಲಿಸಲು ಬಸ್ ನಿಲ್ದಾಣವಿರುವ ನಗರ, ಪಟ್ಟಣಗಳಿಗೆ ಅಲೆದಾಡಲು ಹಣದ ಖರ್ಚಿನ ಜತೆಗೆ ಮಾನಸಿಕ ಹಿಂಸೆಯಾಗುತ್ತಿದೆ. ಆದ್ದರಿಂದ ನಿಯಮ ಸರಳೀಕರಣಗೊಳಿಸಿ ಅಂಗವಿಕಲರಿಗೆ ಕೂಡಲೇ ಬಸ್ ಪಾಸ್ ನೀಡಬೇಕು. ಪಾಸ್ ನೀಡುವ ಸಮಯ ಮಾರ್ಚ್ ತಿಂಗಳ ಕೊನೆ ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಹೇಶ ಜಾಯಿ, ಭಾಗಣ್ಣ ಧನಶೆಟ್ಟಿ, ಶರಬಣ್ಣ ಸನ್ನತಿ, ನಾಗಪ್ಪ ಅಳ್ಳೋಳ್ಳಿ, ಮಲ್ಲೇಶಿ ಹುಂಡೇಕಾರ, ಸಾಬಣ್ಣ ದೊಡ್ಮನಿ ಹಾಗೂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.