ಸಾಮಾಜಿಕ ನಾಟಕಗಳಿಂದ ಸಮಾಜ ಪರಿವರ್ತನೆ: ನರಿಬೋಳ
Team Udayavani, Apr 1, 2022, 9:58 AM IST
ಜೇವರ್ಗಿ: ನಾಟಕದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯ, ನಾಟಕಗಳಿಂದ ಮನುಷ್ಯನ ಮನಸ್ಸು, ಸಮಾಜ ಪರಿವರ್ತನೆ ಆಗುತ್ತದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಬಸವ ಜಯಂತಿ, ಬಸವಕೇಂದ್ರ ಮಹಿಳಾ ಘಟಕದ 2ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರದುರ್ಗದ ಜಮುರಾ ಕಲಾಲೋಕ ಕಲಾವಿದರಿಂದ ನಡೆದ ‘ಸೋರುತಿಹುದು ಸಂಬಂಧ’ ಎನ್ನುವ ಹಾಸ್ಯ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕೋತ್ಸವಗಳು, ನಾಟಕ ತಂಡಗಳನ್ನು ಪ್ರೋತ್ಸಾಹಿಸುವುದರ ಜತೆಗೆ ನೈಜ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು,. ಸಮಾಜದಲ್ಲಿನ ಸಮಸ್ಯೆಗಳನ್ನು ನಾಟಕಗಳ ಮೂಲಕ ಜಗತ್ತಿಗೆ ಪರಿಚಯಿಸುವಂತ ಕೆಲಸವಾಗಬೇಕು. ಮಾನವ ತನ್ನ ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಂಸ್ಕಾರ, ಸಂಸ್ಕೃತಿ ನಾಶವಾಗುತ್ತದೆ. ನಾಟಕ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಮನೆ ಮಕ್ಕಳು ಸಂಸ್ಕೃತಿ, ಸಂಸ್ಕಾರದ ಭಾಗವಾಗಬೇಕು. ಆಗ ದೇಶದಲ್ಲಿ ಅಪರಾಧಗಳು ಕಡಿಮೆಯಾಗುತ್ತವೆ. ಅಪರಾಧ ಮಾಡುವವರ ದೃಷ್ಟಿಯನ್ನು ಬದಲಾಯಿಸಲು ಶರಣ, ಸಂತರ ವಚನಸಾಹಿತ್ಯ, ತತ್ವ, ನಾಟಕಗಳು ಸಹಕಾರಿಯಾಗುತ್ತವೆ. ಸರಳತೆ, ಆದರ್ಶ, ತತ್ವ, ಜೀವನ ಮೌಲ್ಯಗಳನ್ನು ನಾಟಕಗಳು ನಮಗೆ ಕಲಿಸುತ್ತವೆ ಎಂದು ಹೇಳಿದರು.
ಬಸವಕೇಂದ್ರ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕಾಂಗ್ರೆಸ್ ಮುಖಂಡ ರಾಜಶೇಖರ ಸೀರಿ, ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬಸವಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಷಣ್ಮುಖಪ್ಪ ಹಿರೇಗೌಡ, ಶಿವನಗೌಡ ಪಾಟೀಲ ಹಂಗರಗಿ, ಬಾಪುಗೌಡ ಬಿರಾಳ, ಮಹಾಂತಸಾಹು ಹರವಾಳ, ನೀಲಕಂಠ ಅವಂಟಿ, ಸಿದ್ಧು ಯಂಕಂಚಿ, ದಯಾನಂದ ಡೂಗನಕರ್, ಸದಾನಂದ ಪಾಟೀಲ, ಸುರೇಶ ಸಾಸಾಬಾಳ, ಆನಂದ ಮಹೇಂದ್ರಕರ್, ಮಲ್ಕಣಗೌಡ ಹೆಗ್ಗಿನಾಳ, ನಿಂಗಣ್ಣ ಹಳಿಮನಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಡಾ| ವಿಶ್ವನಾಥ ಬಂಗಾರಿ, ಮಲ್ಲನಗೌಡ ಪಾಟೀಲ ಕನ್ಯಾಕೋಳೂರ, ಮಲ್ಲಿಕಾರ್ಜುನ ದಂಡೂಲಕರ್, ಸಿದ್ದು ಮದರಿ, ರಾಮಣ್ಣ ತೊನ್ಸಳ್ಳಿಕರ್, ಅಖಂಡೆಪ್ಪ ಕಲ್ಲಾ, ಬಸವರಾಜ ಕಲ್ಲಾ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.