ನೀರಿನ ಸಮಸ್ಯೆಗೆ ಇತಿಶ್ರೀ: ಮತ್ತಿಮಡು
Team Udayavani, May 1, 2022, 12:28 PM IST
ಶಹಾಬಾದ: ಕಳೆದ ಚುನಾವಣೆಯಲ್ಲಿ ತೊನಸನಹಳ್ಳಿ (ಎಸ್) ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದೆ. ಅದರಂತೆ ನಾಲ್ಕೈದು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದ್ದು, ಉದ್ಘಾಟನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದ ಶ್ರೀ ಸಂಗಮೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವ, ಶ್ರೀ ಗುರು ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ 15ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಕುಡಿಯುವ ನೀರಿನ ವ್ಯವಸ್ಥೆಗೆ 3 ಕೋಟಿ ರೂ. ಅನುದಾನದಲ್ಲಿ ಪೈಪಲೈನ್ ಕಾಮಗಾರಿ ಪೂರ್ಣವಾಗಿದೆ. ನಾಲ್ಕೈದು ದಿನಗಳಲ್ಲಿ ಸರಬರಾಜು ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಲ್ಲದೇ ತೊನಸನಹಳ್ಳಿ ಸಂಗಮೇಶ್ವರ ಸಂಸ್ಥಾನಮಠದ ಅಭಿವೃದ್ಧಿಗೆ 10 ಲಕ್ಷ ರೂ ಅನುದಾನ ಒದಗಿಸಲಾಗಿದೆ. ಗ್ರಾಮದಿಂದ ಮರತೂರ ಗ್ರಾಮದ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ, ತೊನಸನಹಳ್ಳಿ ದರ್ಗಾದಿಂದ ಕಡೆಹಳ್ಳಿ ಗ್ರಾಮದ ರಸ್ತೆ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ, ತೊನಸನಹಳ್ಳಿ ಗ್ರಾಮದಿಂದ ಶಹಾಬಾದನ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ವಾಡಿ ವೃತ್ತದ ಹತ್ತಿರದಿಂದ ರೈಲ್ವೆ ಸೇತುವೆ ಬಳಿಯ ರಸ್ತೆ ನಿರ್ಮಾಣಕ್ಕೆ 3ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೇ ಗ್ರಾಮಗಳಲ್ಲಿ ಸಿಸಿ ರಸ್ತೆಯೂ ನಿರ್ಮಾಣ ಮಾಡಲಾಗಿದೆ ಎಂದರು.
ಅಫಜಲಪುರ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ಮನುಷ್ಯನಲ್ಲಿರುವ ಕಲ್ಮಷ ಮತ್ತು ನ್ಯೂನತೆಗಳನ್ನು ಹೋಗಲಾಡಿಸಲು ಪುರಾಣ ಮತ್ತು ಪ್ರವಚನಗಳು ಸಹಕಾರಿಯಾಗಿವೆ. ಎರಡು ವರ್ಷದಿಂದ ಕೋವಿಡ್ ದಾಳಿಯಿಂದ ಜನರು ತತ್ತರಿಸಿ ಹೋಗಿದ್ದರು. ಈಗ ಪರಿಸ್ಥಿತಿ ತಿಳಿಯಾಗಿದೆ ಎಂದು ಹೇಳಿದರು.
ಸಂಗಮೇಶ್ವರ ಸಂಸ್ಥಾನಮಠದ ಶ್ರೀ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ನಿಲಗಲ್‌ನ ರೇಣುಕ ಶಾಂತಮಲ್ಲ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಕುಳೆಕುಮಟಗಿಯ ಗುರುಸ್ವಾಮಿ ಶರಣರು, ಯರಗಲ್‌ನ ಸಂಗಮನಾಥ ದೇವರು, ಬಿಜೆಪಿ ಶಹಾಬಾದ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜಯಶ್ರೀ ಮತ್ತಿಮಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗಿರಥಿ ಗುನ್ನಾಪುರ, ಉದ್ದಿಮೆದಾರರಾದ ಮಲ್ಲಿಕಾರ್ಜುನ ಎಸ್.ಗೊಳೇದ್, ಮಹಾದೇವ ಬಂದಳ್ಳಿ, ನಿಂಗಣ್ಣಗೌಡ ಮಾಲಿಪಾಟೀಲ, ವಿರೇಶ ರಾಮಶೆಟ್ಟಿ, ಬಸವರಾಜ ಮದ್ರಿಕಿ, ಬಸವರಾಜ ಶಾಸ್ತ್ರೀ ವೇದಿಕೆ ಮೇಲಿದ್ದರು.
ಇದೇ ವೇಳೆ ಶಾಸಕ ಬಸವರಾಜ ಮತ್ತಿಮಡು ಮತ್ತು ಅವರ ಧರ್ಮಪತ್ನಿ ಜಯಶ್ರೀ ಬಸವರಾಜ ಮತ್ತಿಮಡು ಅವರಿಗೆ ಸಂಗಮೇಶ್ವರ ಪ್ರಶಸ್ತಿ, ಭರತ ನಾಟ್ಯ ಕಲಾವಿದರಾದ ಕಲಬುರಗಿಯ ಕು.ಆಕಾಂಕ್ಷಾ ಹಾಗೂ ತೊನಸನಹಳ್ಳಿ ಗ್ರಾಮದ ಸಮೃದ್ಧಿ ಎಂ. ಗೊಳೇದ್ ಅವರಿಗೆ ಸಗರನಾಡಿನ ನಾಟ್ಯ ಮಯೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಭಿವೃದ್ಧಿಗೆ ಶಾಸಕ ಮತ್ತಿಮಡು ಸಾಕಷ್ಟು ಶ್ರಮಿಸುತ್ತಿದ್ದಾರೆ. ಅಲ್ಲದೇ ಅವರ ಧರ್ಮಪತ್ನಿಯೂ ಅವರ ಹೆಗಲಿಗೆ ಹೆಗಲು ಕೊಟ್ಟು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ನೋಡಿದರೇ ಈ ಮತಕ್ಷೇತ್ರಕ್ಕೆ ಶಾಸಕ ಬಸವರಾಜ ಮತ್ತಿಮಡು ಹಾಗೂ ಜಯಶ್ರೀ ಮತ್ತಿಮಡು ಇಬ್ಬರೂ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ. –ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾಜಿ ಶಾಸಕ, ಜೇವರ್ಗಿ
ವಿಶ್ವದಲ್ಲಿಯೇ ದೇಶದ ಪ್ರಧಾನಿ ನರೇಂದ್ರ ಮೋದಿ ನಂ.1 ನಾಯಕ ಎನ್ನುವ ಹೆಗ್ಗಳಿಕೆ ಪಡೆದಿದ್ದಾರೆ. ಆದರೆ ಅವರಿಗೆ ಇನ್ನೂ ತೃಪ್ತಿಯಾಗಿಲ್ಲ. ದೇಶ ನಂ.1ಗೆ ಬರಬೇಕು ಎನ್ನುವುದು ಅವರ ಅಭಿಲಾಷೆಯಾಗಿದೆ. –ಮಾಲಿಕಯ್ಯ ಗುತ್ತೇದಾರ ಮಾಜಿ ಶಾಸಕ, ಅಫಜಲಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.