ಗುರು-ಗೆಳೆತನ ಅಮೂಲ್ಯ ಆಸ್ತಿ: ತಾಹೇರ್
Team Udayavani, Feb 10, 2022, 12:27 PM IST
ವಾಡಿ: ಶಾಲೆಗೆ ಕಳುಹಿಸಿದ ಹೆತ್ತವರು, ಅಕ್ಷರ ಕಲಿಸಿದ ಗುರುಗಳು ಬದುಕಿನ ಭವಿಷ್ಯ ಬರೆದ ರತ್ನಗಳಾದರೆ, ಕೂಡಿ ಆಡಿದ ಬಾಲ್ಯದ ಗೆಳೆಯರು ಜೀವನದ ಅಮೂಲ್ಯ ಆಸ್ತಿಗಳಿದ್ದಂತೆ ಎಂದು ಸ್ಥಳೀಯ ಸರ್ಕಾರಿ ಎಂಪಿಎಸ್ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಂ.ಡಿ.ತಾಹೇರ್ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 1991-92ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳು, ಬಾಲ್ಯದ ಗೆಳೆಯರ ಬಳಗ ವೇದಿಕೆಯಡಿ ಅಕ್ಷರ ಕಲಿಸಿ ನಿವೃತ್ತಿ ಹೊಂದಿದ ಗುರುಗಳಿಗಾಗಿ ಏರ್ಪಡಿಸಲಾಗಿದ್ದ ಗುರುವಂಧನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕರು ಎಂದರೆ ರಾಷ್ಟ್ರದ ತಳಪಾಯವಿದ್ದಂತೆ. ವಿದ್ಯಾರ್ಥಿಗಳು, ಯುವಜನರು ಈ ದೇಶದ ಭವಿಷ್ಯ. ಈ ಯುವಶಕ್ತಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದ ಆಸ್ತಿಯಾಗಿ ನಿಲ್ಲಬೇಕು ಎಂದರು.
ನಿವೃತ್ತ ಶಿಕ್ಷಕ ವಸಂತ ಕಟ್ಟಿಮನಿ ಮಾತನಾಡಿ, ದಿಕ್ಕಿಗೊಬ್ಬರಂತೆ ಹಂಚಿ ಹೋದ ಶಿಕ್ಷಕರನ್ನು ಮತ್ತು ಸಹಪಾಟಿ ಗೆಳೆಯರನ್ನು ಕರೆದು ಒಂದೆಡೆ ಸೇರಿಸಿ ಸತ್ಕರಿಸುವ ಮೂಲಕ ಬಾಲ್ಯದ ದಿನಗಳನ್ನು ಮೆಲುಕು ಹಾಕುವ ಪರಿ ಮೆಚ್ಚುವಂತಹದ್ದು ಎಂದರು.
ಹಳೆಯ ವಿದ್ಯಾರ್ಥಿಗಳಿಂದ ಆತ್ಮೀಯ ಸನ್ಮಾನ ಸ್ವೀಕರಿಸಿದ ಗಣಿತ ಶಿಕ್ಷಕಿ ಲಕ್ಷ್ಮೀಬಾಯಿ ಕಟ್ಟಿಮನಿ, ವಿಜ್ಞಾನ ಶಿಕ್ಷಕಿ ಇಂದ್ರಾಬಾಯಿ ರಾಠೊಡ ಮಾತನಾಡಿ, ನಿವೃತ್ತಿಯಾದ ನಮ್ಮನ್ನು ಹುಡುಕಿ, ಮರಳಿ ಶಾಲೆಗೆ ಕರೆತರುವ ಮೂಲಕ ಭಾವನಾ ಲೋಕದಲ್ಲಿ ಮುಳುಗಿಸಿದ್ದೀರಿ ಎಂದರು.
ಕಲಬುರಗಿ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ವರ್ಗಾವಣೆಗೊಂಡ ಜೇವರ್ಗಿ ತಾಲೂಕಿನ ಬಿರಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಎಂ. ವೀರೇಶ ಅವರನ್ನು ಬಾಲ್ಯದ ಗೆಳೆಯರ ಬಳಗದಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಎಂಪಿಎಸ್ ಶಾಲೆಯ ಹಾಲಿ ಮುಖ್ಯಶಿಕ್ಷಕರಾದ ಭಗವಾನ ದಂಡಗುಲಕರ, ಗೀತಾ ಠಾಕೂರ, ಯಾಸ್ಮೀನ್, ಆಲಿಯಾಬೇಗಂ, ಶಮಶದಾ, ಬಾಲ್ಯದ ಗೆಳೆಯರ ಬಳಗದ ನಾಗರಾಜ ಗೌಡಪ್ಪನೋರ, ದೇವಿಂದ್ರ ದೊಡ್ಡಮನಿ, ಗುರುಮೂರ್ತಿ ಜ್ಯೋಶಿ, ಗುಂಡಪ್ಪ ಹೇರೂರ, ಮಹಾಂತೇಶ ಬಿರಾದಾರ, ಮಹ್ಮದ್ ವಸೀಲ್, ಪಾಂಡುರಂಗ ಕಾನಕುರ್ತೆ, ರಮೇಶ ಬಡಿಗೇರ, ಮರೆಪ್ಪ ಬುಕನಾಳ, ಲಕ್ಷ್ಮೀಕಾಂತ, ಚಂದ್ರು, ಇಲಿಯಾಸ್, ಮಲ್ಲಿಕಾರ್ಜುನ ಚಿಟೇಲಕರ, ರಾಕೇಶ, ನೆಹರು, ಮಲ್ಲಿಕಾರ್ಜುನ, ಮೋತಿಲಾಲ ಜಾಧವ, ಸುನೀಲ ರಾಠೊಡ, ವೀರಣ್ಣ ಯಾರಿ, ಪ್ರಕಾಶ ಚಂದನಕೇರಿ, ಕಾಶೀನಾಥ ಶೆಟಗಾರ, ಚಂದ್ರಕಾಂತ ಬೆಣ್ಣೂರ, ಆನಂದ ಇಂಗಳಗಿ, ಫ್ರಾನ್ಸಿಸ್, ಬಸವರಾಜ ನಾಟೀಕಾರ ಪಾಲ್ಗೊಂಡಿದ್ದರು. ಮಡಿವಾಳಪ್ಪ ಹೇರೂರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.