ವಿಶಾಲ ತಳಹದಿ ಶಿಕ್ಷಣ ಅವಶ್ಯ: ಡಾ| ತೇಜಸ್ವಿ
ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕನಸು ಈ ಶಿಕ್ಷಣ ನೀತಿ ಅವಲಂಬಿಸಿದೆ.
Team Udayavani, Mar 8, 2021, 7:05 PM IST
ಕಲಬುರಗಿ: ಪ್ರಸ್ತುತ ಸವಾಲಿನ ಸಂದರ್ಭದಲ್ಲಿ ವಿಶಾಲ ತಳಹದಿ ಶಿಕ್ಷಣ ಹೆಚ್ಚು ಪ್ರಸ್ತುತ ಎನಿಸುತ್ತಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಆದಿವಾಸಿ ಬುಡಕಟ್ಟು
ವಿಶ್ವವಿದ್ಯಾಲಯ ಕುಲಪತಿ ಪ್ರೊ| ತೇಜಸ್ವಿ ಕಟ್ಟಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾ ವಿದ್ಯಾಲಯದಲ್ಲಿ ರವಿವಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ವಿಷಯದ ಮೇಲೆ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಚಟುವಟಿಕೆ, ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು. ರಚನಾತ್ಮಕವಾಗಿ ಅಭಿವ್ಯಕ್ತಿಪಡಿಸುವುದನ್ನು ಕಲಿಯಬೇಕು. ಪ್ರಾಯೋಗಿಕ ಅರಿವಿಗೆ ವಿದ್ಯಾರ್ಥಿಗಳು ಒಡ್ಡಿಕೊಳ್ಳುವುದರಿಂದ ಅವರ ಕುತೂಹಲ ಹೆಚ್ಚಾಗುತ್ತದೆ. ಅವರ ಜ್ಞಾನವು ಹೆಚ್ಚುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ಸು ಕಾಣಬೇಕಾದರೆ ಮೊದಲು ಶಿಕ್ಷಕರು ಬದಲಾಗಬೇಕು. ಅವರಲ್ಲಿ ಹೊಸ ಕಲಿಕೆ, ಕ್ರಿಯಾಶೀಲತೆ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಯಶಸ್ವಿ ಉದ್ದಿಮೆದಾರರ ಉದಾಹರಣೆಗಳನ್ನು ನೀಡಿದ ಅವರು, ಅದರಲ್ಲಿ ಈ ಭಾಗದ ಗಳಂಗಳಪ್ಪ ಪಾಟೀಲರು ಉದ್ಯಮದಲ್ಲಿ ಸಾಧಿ ಸಿದ ಸಾಧನೆ, ಶಿಕ್ಷಣದಲ್ಲಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಸಾಧಿಸಿದ ಸಾಧನೆ, ಡಾ| ವಿಜಯಸಂಕೇಶ್ವರ ಸಾಧಿಸಿದ ಸಾಧನೆ ಹೀಗೆ ಹಲವಾರು ಜನರು ಹೆಚ್ಚು ಓದಿಯೇ ದೊಡ್ಡ
ಉದ್ದಿಮೆದಾರರಾಗಿಲ್ಲ. ಅವರೆಲ್ಲ ಹಗಲು-ರಾತ್ರಿ ದುಡಿದು, ಕ್ರಿಯಾಶೀಲತೆಯಿಂದ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ತಿಳಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ನಿರಂಜನ್ ನಿಷ್ಠಿ ವಿಚಾರ ಸಂಕಿರಣ ಉದ್ಘಾಟಿಸಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಮೃದ್ಧರಾಗಬೇಕಾದರೆ ಉತ್ತಮ ಶಿಕ್ಷಣದ ಬುನಾದಿ ಮುಖ್ಯವಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿರುವುದು ಶ್ಲಾಘನೀಯವಾಗಿದೆ. ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕನಸು ಈ ಶಿಕ್ಷಣ ನೀತಿ ಅವಲಂಬಿಸಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಹೊಸ ಶಿಕ್ಷಣ ನೀತಿಯನ್ನು ಮೊದಲಿನಿಂದಲೂ ಅಳವಡಿಸಿಕೊಂಡು ಬರುತ್ತಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕ ಡಾ| ಇಂದಿರಾ ಶೆಟಕಾರ ಸ್ವಾಗತಿಸಿದರು, ಡಾ| ಸಿದ್ದಮ್ಮ ಗುಡೇದ್ ಅತಿಥಿಗಳ ಪರಿಚಯ ಮಾಡಿದರು, ಪದ್ಮಜಾ ವೀರಶೆಟ್ಟಿ ವಂದಿಸಿದರು. ಡಾ| ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಸಂಗೀತ ವಿಭಾಗದ ಮುಖ್ಯಸ್ಥೆ ಡಾ| ಸೀಮಾ ಪಾಟೀಲ, ವೀರಭದ್ರ ಸ್ಥಾವರಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ| ಬಸವರಾಜ ಡೋಣುರ, ಶರಣಬಸವ ವಿವಿ ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಜಾನಕಿ
ಹೊಸುರ, ಡಾ| ಎಸ್.ಜಿ.ಡೊಳ್ಳೆಗೌಡರ್, ಡಾ|ಎಂ.ಆರ್. ಹುಗ್ಗಿ, ಡಾ| ಸಾರಿಕಾದೇವಿ ಕಾಳಗಿ, ಡಾ| ಸುಮಂಗಲಾರೆಡ್ಡಿ, ಡಾ| ನಾರಾಯಣರಾವ್ ರೋಲೆಕರ್, ಡಾ| ಎಸ್. ಎಸ್.ಪಾಟೀಲ, ಡಾ| ಎನ್.ಎಸ್.ಹೂಗಾರ ಹಾಗೂ ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.