ಉಪಯೋಗಕ್ಕೆ ಬಾರದ ಶೌಚಾಲಯ
Team Udayavani, Jun 9, 2022, 2:19 PM IST
ಶಹಾಬಾದ: ನಗರದ ವಾರ್ಡ್ ನಂ. 16ರ ಅಶೋಕ ನಗರದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ ಜಾಲಿ ಕಂಟಿ ಗಿಡಗಳು ಬೆಳೆದು ಶೌಚಾಲಯ ಕಾಣದಂತಾಗಿದೆ. ಇದರಿಂದ ಇಲ್ಲಿನ ಜನರ ಉಪಯೋಗಕ್ಕೆ ಬಾರದಂತಾಗಿದೆ.
ನಗರಸಭೆಯ ಎಸ್‌ಎಫ್‌ಸಿ ಅನುದಾನ (ಮುಕ್ತನಿಧಿ) 2007-08ರಲ್ಲಿ ನಿರ್ಮಾಣ ಮಾಡಿದ ಸಾರ್ವಜನಿಕ ಶೌಚಾಲಯದ ಸುತ್ತಲೂ ಕಟ್ಟಡದೆತ್ತರಕ್ಕೆ ಜಾಲಿಗಿಡಗಳು ಬೆಳೆದಿದೆ. ಇದರಿಂದ ಶೌಚಾಲಯದ ಒಳಗಡೆ ಹೋಗಲಾರದ ಪರಿಸ್ಥಿತಿ ಮೂಡಿದೆ. ಶೌಚಾಲಯದ ಗೋಡೆಗಳು ಬಿರುಕು ಬಿಟ್ಟಿವೆ. ಹಲವು ವರ್ಷಗಳಿಂದ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂಬುವುದು ಸ್ಥಳೀಯ ಜನರಗೋಳಾಗಿದೆ.
ಶೌಚಾಲಯ ಸಂಪೂರ್ಣ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಹಂದಿಗಳ ವಾಸಸ್ಥಾನವಾಗಿದೆ. ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಇಲ್ಲಿನ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅಲ್ಲದೇ ಸಾರ್ವಜನಿಕ ಶೌಚಾಲಯ ನಿರ್ಮಿಸಿ ನೀರಿನ ವ್ಯವಸ್ಥೆಯನ್ನು ಮಾಡಿಲ್ಲ. ಕೂಡಲೇ ಅಧಿಕಾರಿಗಳು ಶೌಚಾಲಯ ಸ್ವಚ್ಚಗೊಳಿಸಬೇಕು. ನೀರಿನ ವ್ಯವಸ್ಥೆ ಮಾಡಬೇಕು. ಬಿರುಕು ಬಿಟ್ಟಿರುವ ಗೋಡೆಗಳನ್ನು ಸರಿಪಡಿಸಬೇಕು. ಅಲ್ಲದೇ ಸಂಪೂರ್ಣ ನವೀಕರಣಗೊಳಿಸಿ ಇಲ್ಲಿನ ಜನರಿಗೆ ಉಪಯೋಗವಾಗುವಂತೆ ಅನುಕೂಲ ಮಾಡಿಕೊಡಬೇಕೆಂದು ನಗರಸಭೆ ಸದಸ್ಯ ಅವಿನಾಶ ಕಂಬಾನೂರ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.