![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 9, 2021, 6:51 PM IST
ಸೇಡಂ: ಆಡಕಿ ಜಿಪಂ ಕ್ಷೇತ್ರ ಪುನರವಿಂಗಡಣೆ ವಿರೋಧಿಸಿ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು, ವಿಷ ಸೇವಿಸಲು ಯತ್ನಿಸಿದ ಘಟನೆ ತಾಲೂಕಿನ ಆಡಕಿ ಬಳಿಯ ವಾಗ್ಧಾರಿ ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯಲ್ಲಿ ಜರುಗಿದೆ. ಇತ್ತೀಚೆಗೆ ಸರ್ಕಾರ ಆಡಕಿ ಜಿಪಂ ಕ್ಷೇತ್ರವನ್ನು ಕೈಬಿಟ್ಟು, ಕುರಕುಂಟಾ ಗ್ರಾಮವನ್ನು ಜಿಪಂ ಕ್ಷೇತ್ರವನ್ನಾಗಿ ಘೋಷಿಸಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಆಡಕಿ ಜಿಪಂ ಕ್ಷೇತ್ರವನ್ನಾಗಿ ಮುಂದುವರೆಸಲು ಒತ್ತಾಯಿಸಿದ್ದರು.
ಸೋಮವಾರ ರಸ್ತೆಗಿಳಿದ ಗ್ರಾಮಸ್ಥರು, ಎರಡೂ¾ರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಅಲ್ಲದೆ ಪ್ರತಿಭಟನಾನಿರತ ಕೆಲವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಆಡಕಿ ಗ್ರಾಮವು ರಾಜ್ಯ ಹೆದ್ದಾರಿ 10ರ ಮುಖ್ಯರಸ್ತೆಯಲ್ಲಿದ್ದು, ಸುತ್ತ ಮುತ್ತಲಿನ 40 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ವ್ಯಾಪಾರ, ವಾಣಿಜ್ಯ, ರಾಜಕೀಯ ಚಟುವಟಿಕೆಯ ಪ್ರಮುಖ ತಾಣವಾಗಿದೆ. ಆಡಕಿ ಜಿಪಂ ಅಸ್ತಿತ್ವದಲ್ಲಿರುವುದು ಈ ಭಾಗದ ಎಲ್ಲಾ ಸಾರ್ವಜನಿಕರ ಒಕ್ಕೊರಲಿನ ಅಭಿಪ್ರಾಯವಾಗಿತ್ತು. ಆಡಕಿ ಜಿಪಂ ಎಲ್ಲಾ ಅಗತ್ಯ ಮೂಲ ಸೌಕರ್ಯಗಳಿಂದ ಕೂಡಿದೆ. ಉಪ ತಹಶೀಲ್ದಾರರ ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಸಂಘ ಸೇರಿದಂತೆ ಆಡಕಿ ಗ್ರಾಮವು ರಾಜ್ಯ ಹೆದ್ದಾರಿಯಲ್ಲಿರುತ್ತದೆ. ಹಾಲಿ ಚಾಲ್ತಿಯಲ್ಲಿರುವ ಆಡಕಿ ಜಿಪಂಅನ್ನು ಮುಂದುವರೆಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ನಂತರ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಅವರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮನ್ನೆ, ಗೋವಿಂದ ಮುಡುಗುಲ್, ಶರಣಯ್ಯ ಕಲಾಲ್, ಸಾಯಿರೆಡ್ಡಿ ಮನ್ನೆ, ರಘುಪತಿರೆಡ್ಡಿ ಮನ್ನೆ, ವೆಂಕಟಪ್ಪ ನೀರೆಟಿ, ಶಾಮಪ್ಪ ಮಿಂದ, ಬಾಲರೆಡ್ಡಿ
ಗೊಲ್ಲಾ, ತಿರುಪತಿರೆಡ್ಡಿ ಯಲಗುಪಲ್ಲಿ, ಶ್ರೀನಿವಾಸ ಯಾದವ, ಭೀಮಯ್ಯ ಕಲಾಲ್, ಪ್ರಕಾಶ ಹೊಟ್ಟೆ, ಮೌನೇಶ ಬಡಿಗೇರ, ನರೇಂದ್ರರೆಡ್ಡಿ, ಪ್ರವೀಣ ದೇಶಪಾಂಡೆ, ಮಹಾದೇವಪ್ಪ ಕೋನಾಪುರ್, ನಾಗಪ್ಪ ಹುಂಡೇಕಾರ್, ವೆಂಕಟಪ್ಪ ಕೊತ್ತಾಪಲ್ಲಿ, ಚಂದ್ರಕಾಂತ ಪಾಟೀಲ, ಶ್ರೀಶೈಲರೆಡ್ಡಿ, ರಾಜೀವನ್ ರೆಡ್ಡಿ, ವೆಂಕಟೇಶ ಮುಡುಗುಲ್, ನವೀನರೆಡ್ಡಿ, ವಿಜಯಕುಮಾರ ಪಾಟೀಲ, ನವೀನಕುಮಾರ ರಾಜೋಳ್ಳ, ತಾಯಪ್ಪ ಭೋವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.