![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Dec 12, 2021, 11:11 AM IST
ಸೇಡಂ: ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ನಾಟ್ಯ ಸಂಘದ ವತಿಯಿಂದ ಶ್ರೀ ಗುರು ಮಲ್ಲಾರಾಧ್ಯ ರಂಗಮಂಟಪದಲ್ಲಿ “ಮಗ ಹೋದರೂ ಮಾಂಗಲ್ಯ ಬೇಕು’ ಎನ್ನುವ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು. ಬಹುತೇಕ ಗ್ರಾಮೀಣ ಪ್ರತಿಭೆಗಳನ್ನು ಒಳಗೊಂಡ ನಾಟಕ ಅತ್ಯದ್ಭುತವಾಗಿ ಮೂಡಿಬಂತು.
ಯಲ್ಲಪ್ಪ ಯಾಳಗಿ ರಚಿತ ರಾಚಪ್ಪ ಮಾಸ್ತರ ಕಮರಡಗಿ ನಿರ್ದೇಶನದಲ್ಲಿ ನಡೆದ ನಾಟಕ ಹಲವಾರು ಸಾಮಾಜಿಕ ಹಾಗೂ ಕೌಟುಂಬಿಕ ಸನ್ನಿವೇಶ ಗಳನ್ನು ಒಳಗೊಂಡಿದ್ದವು. ರಂಗಭೂಮಿ ಕಲಾವಿದರು ಇಡೀ ನಾಟಕವನ್ನು ಅಚ್ಚುಕಟ್ಟಾಗಿ ಮೂಡುವಂತೆ ಮಾಡಿದರು.
ನಾಟಕ ಪ್ರದರ್ಶನವನ್ನು ಹಾಪಕಾಮ್ಸ್ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ. ತಾಂತ್ರಿಕ ಯುಗದಲ್ಲಿ ನಮ್ಮ ಭಾಗದ ಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಾಗಿದೆ. ಸಿನಿಮಾಗಳಿಗಿಂತಲೂ ರಂಗಕಲೆಗೆ ಹೆಚ್ಚಿನ ಶಕ್ತಿ ಇದೆ ಎಂದರು.
ಜಾಕನಪಲ್ಲಿ ಶಿವಯೋಗಿ ಮಠದ ಅಭಿನವ ಗವಿಸಿದ್ಧಲಿಂಗೇಶ್ವರ ಸ್ವಾಮೀಜಿ, ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿದರು. ಮಾಜಿ ಜಿಪಂ ಸದಸ್ಯ ವೀರಾರೆಡ್ಡಿ ಹೂವಿನಬಾವಿ, ಜೆಡಿಎಸ್ ಕಾರ್ಯಾಧ್ಯಕ್ಷ ಶಿವರಾಮರೆಡ್ಡಿ, ಕಾಂಗ್ರೆಸ್ ಮುಖಂಡ ಸತೀಶರೆಡ್ಡಿ ಪಾಟೀಲ ರಂಜೋಳ, ಪತ್ರಕರ್ತರ ಸಂಘದ ಅಧRಕ್ಷ ಶಿವಕುಮಾರ ನಿಡಗುಂದಾ, ಪತ್ರಕರ್ತ ಶರಣಪ್ಪ ಎಳ್ಳಿ, ಅಶೋಕ ಕುಂಬಾರ, ಪ್ರಕಾಶ ಹಾಗೂ ಇನ್ನಿತರರು ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.