ಸಾಧನೆಗೆ ಅಸಾಧ್ಯವಾಗದ್ದುಯಾವುದೂ ಇಲ್ಲ
Team Udayavani, Jan 25, 2022, 12:13 PM IST
ಶಹಾಬಾದ: ಸಾಧನೆಗೆ ಅಸಾಧ್ಯವಾಗದ್ದು ಯಾವುದು ಇಲ್ಲ.ಆದರೆ ಸಾ ಸುವ ಛಲ ಇದ್ದರೇ ಜೀವನದಲ್ಲಿ ಏನಾದರೂ ಆಗಬಹುದು ಎಂಬುದಕ್ಕೆ ಸುಧಾರಾಣಿ ನಾಟೇಕಾರ ಅವರ ಪರಿಶ್ರಮವೇ ಸಾಕ್ಷಿ ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಹೇಳಿದರು.
ನಗರದ ಜಿಇ ಕಾಲೋನಿಯ ನಿವಾಸಿ ಸುಧಾರಾಣಿ ನಾಟೇಕಾರ ಅವರು ಪಿಎಸ್‌ಐ ಆಗಿ ಆಯ್ಕೆಯಾಗಿರುವುದಕ್ಕೆ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೇ ಮಾತ್ರ ನೌಕರಿಯನ್ನು ಗಿಟ್ಟಿಸಿಕೊಳ್ಳಬಹುದು ಎಂಬುದಕ್ಕೆ ಅಪವಾದ ಎಂಬಂತೆ ಅಪ್ಪಟ ಕನ್ನಡ ಮಾಧ್ಯಮದಲ್ಲಿ ಓದಿದಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಪಿಎಸ್‌ಐ ಆಗಿ ನೇಮಕವಾಗಿದ್ದಾರೆ. ಅವರ ಸತತ ಪರಿಶ್ರಮ, ಅಭ್ಯಾಸ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಅವರ ಅಭ್ಯಾಸ ನಿರಂತರವಾಗಿರಲಿ. ಇನ್ನೂ ಹೆಚ್ಚಿನ ಹುದ್ದೆಯನ್ನು ಪಡೆದುಕೊಳ್ಳುವಂತಾಗಲಿ ಎಂದು ಶುಭಕೋರಿದರು.
ಕಲಬುರಗಿ ದಕ್ಷಿಣ ವಿಧಾನಸಭಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿ, ವಿದ್ಯೆ ಗುಡಿಸಲಿನಲ್ಲಿ ಹುಟ್ಟಿದರೂ ಅರಮನೆಯಲ್ಲಿ ಅರಳುವ ಶಕ್ತಿ ಅದಕ್ಕಿದೆ. ಸಮಯದ ಪರಿಪಾಲನೆ, ಸತತ ಅಧ್ಯಯನ ಹಾಗೂ ಪರಿಶ್ರಮದ ಮೂಲಕವೇ ಏನಾದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ ಸುಧಾರಾಣಿ ನಾಟೇಕಾರ ಅವರು ಪಿಎಸ್‌ಐ ಆಗಿ ನೇಮಕವಾಗಿರುವುದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಸುಧಾರಾಣಿ ನಾಟೇಕಾರ, ಸ್ಪಷ್ಟ ಗುರಿ, ಸಾಧಿ ಸುವ ಛಲ ಇದ್ದಾಗಲೂ ಸೋಲು ಕಾಣುತ್ತೆವೆ. ಎಡವಿದಾಗ ಕೈಚೆಲ್ಲದೇ ಮರಳಿ ಯತ್ನ ಮಾಡಬೇಕು. ಹಿಂದೆ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ತಿದ್ದುಕೊಳ್ಳಬೇಕು ಅಲ್ಲದೇ ಕಾಟಾಚಾರಕ್ಕೆ ಪರೀಕೆಗಳನ್ನು ಬರೆಯದೇ ಜೀವನದಲ್ಲಿ ಏನಾದರೂ ಸಾ ಧಿಸಬೇಕೆಂಬ ಅದಮ್ಯ ಬಯಕೆಯೊಂದಿಗೆ ಪರೀಕ್ಷೆಗೆ ಸಿದ್ಧರಾದರೇ ಸಾಧನೆ ತಾನಾಗಿ ಒಲಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸಾಜ್ಜಿದ್ ಗುತ್ತೆದಾರ, ಕಿರಣಬಾಬು ಕೋರೆ, ಬಾಬು, ಡಾ| ಆಂಜನೇಯ, ನಾಗೇಂದ್ರ ನಾಟೇಕಾರ, ವೆಂಕಟೇಶ (ಲೇಖು), ಸಂತೋಷ ಉಳ್ಳಾಗಡ್ಡಿ, ಶಿವರಾಜ ನಾಟೇಕಾರ, ರವಿ, ಸಂತೋಷ ಉಳ್ಳಾಗಡ್ಡಿ, ವಿದ್ಯಾಸಾಗರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.