ಯುನೈಟೆಡ್ ಆಸ್ಪತ್ರೆ ದಶಮಾನೋತ್ಸವ-ಆರೋಗ್ಯ ಶಿಬಿರ
Team Udayavani, Feb 20, 2022, 10:31 AM IST
ಕಲಬುರಗಿ: ನಗರದ ಯುನೈಟೆಡ್ ಆಸ್ಪತ್ರೆಯ ದಶಮಾನೋತ್ಸವ ನಿಮಿತ್ತ ಶನಿವಾರ ಹೊಸ ಕಟ್ಟಡದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.
ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಪ್ರದೇಶದ ಅಂದಾಜು 2,200 ಜನ ಶಿಬಿರದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಿದರು. ದಿನವಿಡಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 700 ಜನ ರೋಗಿಗಳು ಲ್ಯಾಬ್ ಪರೀಕ್ಷೆ ಮಾಡಿಕೊಂಡರು. 100ಕ್ಕೂ ಅಧಿಕ ಮಂದಿ ರೋಗಿಗಳನ್ನು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಯಿತು. 260 ರೋಗಿಗಳು ಅಲ್ಟ್ರಸೌಂಡ್ ತಪಾಸಣೆ ಹಾಗೂ 12 ರೋಗಿಗಳಿಗೆ ಎಂಆರ್‌ಐ ಸ್ಕ್ಯಾನ್ ಮತ್ತು 250ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ಸೇರಿದಂತೆ ವಿವಿಧ ವೈದ್ಯಕೀಯ ತಪಾಸಣೆ ಕೈಗೊಳ್ಳಲಾಯಿತು.
ಡಿಸಿ ಯಶವಂತ ಗುರುಕರ್ ಉದ್ಘಾಟಿಸಿದರು. ಆಸ್ಪತ್ರೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ ಸಿದ್ಧಾರೆಡ್ಡಿ ಮಾತನಾಡಿದರು. ಶ್ರೀನಿವಾಸ ಸರಡಗಿ ಶಕ್ತಿ ಪೀಠದ ಡಾ| ಅಪ್ಪಾರಾವ ದೇವಿಮುತ್ಯಾ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯ ನಿರ್ದೇಶಕಿ ಡಾ| ವೀಣಾ ಸಿದ್ಧಾರೆಡ್ಡಿ ರೋಗಿಗಳು ತಪಾಸಣೆಯಲ್ಲಿ ತೊಡಗಿದ್ದರು.
ಡಾ| ವಿನಯಸಾಗರ ಶರ್ಮಾ, ಡಾ| ಅನಿಲ ಪಾಟೀಲ, ಡಾ| ಕೈಲಾಶ್ ಬಾನಾಲೆ, ಡಾ| ಬಸವಪ್ರಭು ಅಮರಖೇಡ್, ಡಾ| ಮೊಹಮ್ಮದ್ ಅಬ್ದುಲ್ ಬಸೀರ್, ಡಾ| ರಾಜು ಕುಲಕರ್ಣಿ, ಡಾ| ನಿಶಾಂತ್, ಡಾ| ಉಡುಪಿ ಕೃಷ್ಣ ಜೋಶಿ, ಡಾ| ವೀರೇಶ ಸಲಗರ, ಡಾ| ದಯಾನಂದ ರೆಡ್ಡಿ ಮತ್ತು ಡಾ| ಶಿವರಾಜ ಹಂಚಿನಾಳ, ಡಾ| ವಿವೇಕ ಪಾಟೀಲ, ಡಾ| ಶಿವಾನಂದ ಪಾಟೀಲ, ಡಾ| ಮಮತಾ ಪಾಟೀಲ, ಡಾ| ಪ್ರಶಾಂತ ಕುಲಕರ್ಣಿ, ಡಾ| ಕೇದಾರನಾಥ ರಟಕಲ್ ತಪಾಸಣೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.