ಕ್ರೀಡಾಂಗಣ-ಉದ್ಯಾನವನಕ್ಕೆ ಒತ್ತಾಯ ವಸ್ತು ಪ್ರದರ್ಶನದಿಂದ ಪ್ರತಿಭೆ ಅನಾವರಣ
Team Udayavani, Mar 17, 2022, 12:58 PM IST
ವಾಡಿ: ಪಟ್ಟಣದ ಜನತೆಗಾಗಿ ಸಾರ್ವಜನಿಕ ಉದ್ಯಾನವನ ಮತ್ತು ಯುವಕರಿಗಾಗಿ ಕ್ರೀಡಾಂಗಣ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬೆಳಗಿನ ಬಳಗದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿ ಐವತ್ತು ಸಾವಿರ ಜನಸಂಖ್ಯೆಯಿದೆ. ವಿಶ್ವವಿಖ್ಯಾತ ಸಿಮೆಂಟ್ ಕಾರ್ಖಾನೆ ಹಾಗೂ ಜಂಕ್ಷನ್ ರೈಲು ನಿಲ್ದಾಣವಿದೆ. ಹದಿನೈದು ಪ್ರಾಥಮಿಕ, ಹನ್ನೊಂದು ಪ್ರೌಢ ಶಾಲೆಗಳಿದ್ದು ಸಾವಿರಾರು ಸಂಖ್ಯೆಯಲ್ಲಿ ಯುವಜನರಿದ್ದಾರೆ. ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿರುವ ನಗರದಲ್ಲಿ ಕ್ರೀಡಾ ಸ್ಫೂರ್ತಿಗಾಗಿ ಸೌಲಭ್ಯಗಳು ಮರೀಚಿಕೆಯಾಗಿವೆ.
ವಿದ್ಯಾರ್ಥಿಗಳು, ಯುವಜನರು ಆಟದ ಮೈದಾನದ ಕೊರತೆ ಎದುರಿಸುತ್ತಿದ್ದಾರೆ. ಪುರಸಭೆ ಆಡಳಿತ ಕೇಂದ್ರಸ್ಥಾನದಲ್ಲಿ ವಯಸ್ಕರಿಗಾಗಿ, ಮಕ್ಕಳಿಗಾಗಿ ಸಾರ್ವಜನಿಕ ಉದ್ಯಾನವನ ಸೌಲಭ್ಯ ಒದಗಿಸದಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ದೂರಿದ್ದಾರೆ.ನಗರದ ವಿವಿಧ ಬಡಾವಣೆಗಳ ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಿನ ಬಳಗದ ಸದಸ್ಯರಾದ ಕಾಶೀನಾಥ ಶೆಟಗಾರ, ಪ್ರಕಾಶ ಚಂದನಕೇರಿ, ರಾಜು ಒಡೆಯರಾಜ, ನಾಗರಾಜ ಗೌಡಪ್ಪನೋರ, ಸತೀಶ ಸಾವಳಗಿ, ರವಿ ರದ್ದೇವಾಡಗಿ, ವೀರಣ್ಣ ಯಾರಿ, ಹಿರಿಯರಾದ ವಿ.ಕೆ. ಕೇದಿಲಾಯ, ಭೀಮರಾವ ದೊರೆ, ಸಾಂತಪ್ಪ ಸಾಹು ಅಳ್ಳೊಳ್ಳಿ, ಜಯದೇವಸ್ವಾಮಿ ಜೋಗಿಕಲ್ಮಠ, ಮಲ್ಲಿಕಾರ್ಜುನ ಕರಗರ, ಲಕ್ಷ್ಮೀಕಾಂತ ಬಿರಾದಾರ, ಅಶೋಕ ಖಾನಕುರ್ತೆ ನಿಯೋಗದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.