ಬಸವ ನಾಡಿಗೂ ವಕ್ಕರಿಸಿದ ಹೆಮ್ಮಾರಿ
ಒಂದೇ ದಿನದಲ್ಲಿ ಆರು ಜನರಲ್ಲಿ ಸೋಂಕು ದೃಢ ಸರ್ಕಾರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ
Team Udayavani, Apr 13, 2020, 12:35 PM IST
ವಿಜಯಪುರ: ನಗರದಲ್ಲಿ ಕೋವಿಡ್-19 ಸೋಂಕಿತೆ ವಾಸವಿದ್ದ ಪ್ರದೇಶವನ್ನು ಸೀಲ್‌ಡೌನ್ ಮಾಡಿರುವುದು.
ವಿಜಯಪುರ: ವಿಶ್ವವನ್ನೇ ನಡುಗಿಸಿರುವ ಹೆಮ್ಮಾರಿ ಕೋವಿಡ್-19 ಸೋಂಕು ಕೊನೆಗೂ ವಿಜಯಪುರ ಜಿಲ್ಲೆಗೆ ಕಾಲಿಟ್ಟಿದ್ದು, ಪ್ರವಾಸಿ ಹಿನ್ನೆಲೆಯೇ ಇಲ್ಲದ ನಗರದ 6 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಬಸವನಾಡಿನ ಜನರನ್ನು ಜನರ ನಿದ್ದೆಗೆಡಿಸಿದೆ.
ರವಿವಾರ ಸೂರ್ಯನೊಂದಿಗೆ ಕೋವಿಡ್-19 ಕೊರೊನಾ ಕೂಡ ಜಿಲ್ಲೆಯನ್ನು ಪ್ರವೇಶಿಸಿ ಸಾಕ್ಷಿ ನೀಡಿತ್ತು. ಗೋಲಗುಮ್ಮಟ ಪ್ರದೇಶದ ಚಪ್ಪರಬಂದ್ ಗಲ್ಲಿಯ ನಿವಾಸಿ 60 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟ ಕೆಲವೇ ಗಂಟೆಗಳಲ್ಲಿ ಇದೇ ವೃದ್ಧೆಯ ಪಕ್ಕದ ಮನೆಯ ಐವರಲ್ಲಿ ಸೋಂಕು ಇರುವುದು ಅಧಿಕೃತವಾಗಿ ದೃಢಪಟ್ಟಿದೆ. ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯ ಗಡಿ ಭಾಗದಲ್ಲಿರುವ ಕಲಬುರ್ಗಿ, ಬಾಗಲಕೋಟೆ ಸೋಲ್ಲಾಪುರ, ಸಾಂಗ್ಲಿ ಜಿಲ್ಲೆಗಳಲ್ಲೂ ಸೋಂಕಿತರು ಪತ್ತೆಯಾಗಿದ್ದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ ಅವರ ತಂಡ ಯಶಸ್ವಿಯಾಗಿತ್ತು. ಮಾತ್ರವಲ್ಲದೇ ರಾಜ್ಯಕ್ಕೆ ಜಿಲ್ಲಾಡಳಿತ ಹಲವು ನಿರ್ಧಾರಗಳು ದೇಶಕ್ಕೂ ಮಾರಿಯಾಗಿದ್ದವು. ಆದರೆ, ಒಂದೇ ದಿನ 6 ಜನರಲ್ಲಿ ಸೋಂಕು ದೃಢಪಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಅತ್ಯಂತ ಜಾಣ್ಮೆ ನಡೆ ತೋರಿದ್ದ ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಅವರ ತಂಡಕ್ಕೆ ಬೇಸರ ಜತೆಗೆ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೆಚ್ಚಿದಂತಾಗಿದೆ.
ಜಿಲ್ಲೆಯಲ್ಲಿ ಈವರೆಗೆ 110 ಜನರ ಗಂಟಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದು, 81 ವರದಿ ಬಂದಿದ್ದು, 80 ಜನರ ವರದಿ ನೆಗೆಟಿವ್ ಬಂದಿದ್ದು, ಸೋಂಕು ದೃಢಪಟ್ಟಿರುವ ವೃದ್ಧೆ ಪಿ-221 ರೋಗಿಯು ಸುಮಾರು 25 ಜನರ ಅವಿಭಕ್ತ ಕುಟುಂಬದಲ್ಲಿ ವಾಸವಿದ್ದರು ಎಂಬುದು ಪರಿಸ್ಥಿತಿಯನ್ನು ಇನ್ನೂ ಗಂಭೀರ ಸ್ಥಿತಿಗೆ ಕೊಂಡೊಯ್ದು ಭೀತಿ ಸೃಷ್ಟಿಸಿತ್ತು. ಸಂಜೆ ವೇಳೆಗೆ ವೃದ್ಧೆಯ ಪಕ್ಕದ ಮನೆಯಲ್ಲಿದ್ದ ಐದು ಕುಟುಂಬಗಳ ಮೂವರು ಮಕ್ಕಳು, ಇಬ್ಬರು ವಯಸ್ಕರಲ್ಲಿ ಸೋಂಕು ದೃಢವಾಗುವ ಮೂಲಕ ಈ ಭೀತಿ ಹೆಚ್ಚುವಂತೆ ಮಾಡಿತ್ತು.
ಐದಾರು ಆಸ್ಪತ್ರೆ ಭೇಟಿ ನೀಡಿದ್ದ ಸೋಂಕಿತೆ: ಪಿ-221 ಸೋಂಕಿತೆ ಸೋಂಕು ದೃಢಪಡುವ ಮುನ್ನ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಎಂದು ನಗರದಲ್ಲಿ ಐದಾರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ನಂತರ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ದಾಖಲಾಗಿದ್ದಳು. ಶನಿವಾರ ವೃದ್ಧೆಯ ಆರೋಗ್ಯದಲ್ಲಿ ತೀವ್ರ ಉಸಿರಾಟ ಸಮಸ್ಯೆ ಕಂಡುಬಂದು ಪರಿಸ್ಥಿತಿ ಕೈಮೀರುವ ಹಂತದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಪರೀಕ್ಷೆಯ ಬಳಿಕ ವೃದ್ಧೆಯಲ್ಲಿ ಸೋಂಕಿನ ಶಂಕೆ ಇರುವ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾಗಿ ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿ ಇದೆ. ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸೆ ಆಸ್ಪತ್ರೆಯಾಗಿ ಪರಿವರ್ತಿಸಿದ್ದು, ಸೋಂಕಿತೆ ಹಾಗೂ ಆಕೆಯ ಪತಿಯನ್ನು ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಿದ್ದು, ಕುಟುಂಬದ ಇತರೆ 23 ಸದಸ್ಯರನ್ನು ನಗರದ ಠಕ್ಕೆ ಪ್ರದೇಶದಲ್ಲಿ ಕ್ವಾರಂಟೈನ್ ಘಟಕವಾಗಿ ಪರಿವರ್ತಿಸಿರುವ ಮನೆಯೊಂದರಲ್ಲಿ ಇರಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಜ್ಯೂಸ್ ಅಂಗಡಿ ನಡೆಸುತ್ತಿದ್ದ ಪತಿ: ಪ್ರಾಥಮಿಕ ಮಾಹಿತಿ ಪ್ರಕಾರ ಸೋಂಕಿತೆ ಪತಿ ನಿವೃತ್ತ ಸರ್ಕಾರಿ ನೌಕರನಾಗಿದ್ದು, ಗೋಲಗುಮ್ಮಟ ಬಳಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ. ಅಲ್ಲದೇ ಪತಿ, ಪತಿಯ ತಮ್ಮ-ತಮ್ಮನ ಪತ್ನಿ ಹಾಗೂ ಮಕ್ಕಳು, ಮೊಮ್ಮಕ್ಕಳು ಎಂದೆಲ್ಲ ಕುಟುಂಬದಲ್ಲಿ ಸುಮಾರು 25 ಜನರಿದ್ದರು.
ಇಚಲಕರಂಜಿ ಪ್ರವಾಸ: ಸೋಂಕಿತೆ ವಾರದ ಹಿಂದೆ ಇಚಲಕರಂಜಿಯಲ್ಲಿ ಸಂಬಂ ಧಿಕರೊಬ್ಬರ ಶವ ಸಂಸ್ಕಾರಕ್ಕೆ ಹೋಗಿ ಬಂದಿದ್ದಳು ಎನ್ನಲಾಗಿದೆ. ನಂತರವೇ ಈ ವೃದ್ಧೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆ ಅಲೆದಿದ್ದಾಳೆ. ಈ ಅಂಶಗಳನ್ನೇ ಆಧರಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಹಾರಾಷ್ಟ್ರದ ಪ್ರವಾಸದ ಹಿನ್ನೆಲೆ ಇರುವ ಅನುಮಾನವಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಸೀಲ್‌ಡೌನ್: ಈ ಮಧ್ಯೆ ಸೋಂಕಿತೆಯ ಕುರಿತು ಶನಿವಾರ ಅನುಮಾನ ಮೂಡುತ್ತಲೇ ರಾತ್ರೋರಾತ್ರಿ ಆಕೆ ವಾಸವಿದ್ದ ಚಪ್ಪರಬಂದ ಪ್ರದೇಶದ ಗೋಲಗುಮ್ಮಟ-ಬಡಿಕಮಾನ್ ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡಿ, ಗಲ್ಲಿಗಲ್ಲಿಗಳನ್ನೂ ಕಲ್ಲು-ಮುಳ್ಳು ಬೇಲಿ ಹಾಕಿ ನಿರ್ಬಂಧಿ ಸಲಾಗಿದೆ. ರವಿವಾರ ಬೆಳಗ್ಗೆ ಮನೆಯಿಂದ ಯಾರೂ ಹೊರ ಬರದಂತೆ ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ.
ಪ್ರತಿ ಮನೆಯ ಸಮೀಕ್ಷೆ: ಈ ಮಧ್ಯೆ ಸೀಲ್ ಡೌನ್ ಮಾಡಿರುವ ಪ್ರದೇಶದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಪೊಲೀಸರ ರಕ್ಷಣೆಯಲ್ಲಿ ಆರೋಗ್ಯ-ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಆರಂಭಿಸಿದ್ದಾರೆ. ರವಿವಾರ ಸುಮಾರು 500 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಡ್ರೋಣ್ ಕಣ್ಗಾವಲು: ಇದಲ್ಲದೇ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಭಾಯಿಸಲು ಸ್ವಯಂ ಎಸ್ಪಿ ಅನುಪಮ್ ಅಗರವಾಲ್ ಹೆಚ್ಚಿನ ಪೊಲೀಸ್ ಬಲದೊಂದಿಗೆ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಅಲ್ಲದೇ ಮನೆಯಿಂದ ಯಾರೂ ಹೊರಬರದಂತೆ ತೀವ್ರ ಕಟ್ಟೆಚ್ಚರದ ಕಣ್ಗಾವಲಿಗೆ ಡ್ರೋಣ್ ಹಾರಾಟ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.