ಲಾಕ್‌ಡೌನ್‌: ಹಾಪ್‌ಕಾಮ್ಸ್‌ ಆದಾಯ ತ್ರಿಗುಣ

10 ಅಂಗಡಿಯಲ್ಲಿ 10 ಶಾಶ್ವತ ಸಿಬ್ಬಂದಿ-ಈಗ 20 ಸಿಬ್ಬಂದಿಗೆ ಕೆಲಸನಿತ್ಯ ಲಕ್ಷ ರೂ. ಆದಾಯ

Team Udayavani, Apr 22, 2020, 12:06 PM IST

22-April-07

ವಿಜಯಪುರ: ಲಾಕ್‌ಡೌನ್‌ ಮಧ್ಯೆಯೂ ರೈತರಿಂದ ಹಣ್ಣು-ತರಕಾರಿ ಖರೀದಿಸಿ ಗ್ರಾಹಕರ ಮನೆಗೆ ಸಂಚಾರಿ ಸೇವೆ ನೀಡುತ್ತಿರುವ ವಿಜಯಪುರ ಹಾಪ್‌ಕಾಮ್ಸ್‌.

ವಿಜಯಪುರ: ಕೋವಿಡ್‌-19 ಕೊರೊನಾ ಲಾಕ್‌ಡೌನ್‌ ಪರಿಣಾಮ ಉದ್ಯಮ ನಷ್ಟ ಹಾಗೂ ಉದ್ಯೋಗ ಕಳೆದುಕೊಳ್ಳುವ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ತೋಟಗಾರಿಕೆ ಬೆಳೆಗಾರರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಂಸ್ಥೆಗೆ (ಹಾಪ್‌ ಕಾಮ್ಸ್‌) ಮಾತ್ರ ಅನುಕೂಲವಾಗಿದೆ.

ಲಾಕ್‌ಡೌನ್‌ ಬಳಿಕ ವಿಜಯಪುರ ಜಿಲ್ಲಾ ಹಾಪ್‌ಕಾಮ್ಸ್‌ನ ಮಾಸಿಕ ಆದಾಯದಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದರೆ, ಇರುವ ಉದ್ಯೋಗಗಿಳಲ್ಲದೇ ಹೆಚ್ಚುವರಿಯಾಗಿ 10 ಮಂದಿಗೆ ಉದ್ಯೋಗ ಕಲ್ಪಿಸಿದೆ. ಲಾಕ್‌ಡೌನ್‌ ಬಳಿಕ ಜಿಲ್ಲೆಯಲ್ಲಿ ಎಲ್ಲ ವಹಿವಾಟು ಬಹುತೇಕ ಮುಗ್ಗರಿಸಿದ್ದು, ನಷ್ಟದ ಮಾತೇ ಕೇಳಿ ಬರುತ್ತಿವೆ. ಈ ಹಂತದಲ್ಲಿ ಕೊಯ್ಲು ಹಂತದಲ್ಲಿದ್ದ ವಿವಿಧ ಹಣ್ಣಿನ ಬೆಳೆಗೆ, ತರಕಾರಿ ಸೇರಿ ತೋಟಗಾರಿಕೆ ಉತ್ಪನ್ನಗಳಿಗೆ ಇದ್ದಕ್ಕಿಂದ್ದಂತೆ ಮಾರುಕಟ್ಟೆ ಬಾಗಿಲು ಹಾಕಿದ್ದರಿಂದ ರೈತರು ಕಂಗಾಲಾಗಿದ್ದರು. ಮತ್ತೂಂದೆಡೆ ಹಣ್ಣು-ತರಕಾರಿ ದೊರೆಯದೇ ಗ್ರಾಹಕರು ಚಡಪಡಿಕೆ ಆರಂಭಿಸಿದ್ದರು. ಈ ಉಭಯ ಸಂಕಟ ಅರಿತ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕೂಡಲೇ ತೋಟಗಾರಿಕೆ ಅಧಿಕಾರಿಗಳನ್ನು ಕರೆಸಿ ಹಾಪ್‌ಕಾಮ್ಸ್‌ ಮೂಲಕ ತೋಟಗಾರಿಕೆ ಬೆಳೆ ಖರೀದಿ ಹಾಗೂ ಸಂಚಾರಿ ವಾಹನಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲು ಸೂಚಿಸಿದರು.

ಪರಿಣಾಮ ಹಾಪ್‌ಕಾಮ್ಸ್‌ನ ನೋಂದಾಯಿತ 50 ರೈತರಲ್ಲದೇ ಹೊಸದಾಗಿ ಮತ್ತೆ ಸುಮಾರು 100 ರೈತರು ಸೇರಿ ಸುಮಾರು 150 ರೈತರಿಂದ ಹಣ್ಣು-ತರಕಾರಿ ಖರೀದಿಗೆ ಮುಂದಾಯಿತು. ಇದಲ್ಲದೇ ನಗರದಲ್ಲಿರುವ ಹಾಪ್‌ಕಾಮ್ಸ್‌ನ 10 ಮಳಿಗೆಗಳು ಮಾತ್ರವಲ್ಲದೇ ಮಾ. 23ರಿಂದ 7 ವಾಹನಗಳಲ್ಲಿ ಸಂಚಾರಿ ಮಾರುಕಟ್ಟೆಯನ್ನೂ ಆರಂಭಿಸಿತು.

ಲಾಕ್‌ಡೌನ್‌ ಬಳಿಕ ಹಾಸ್ಟೆಲ್‌ಗ‌ಳು ಮುಚ್ಚಿದ್ದರಿಂದ ವಿಜಯಪುರ ತಾಲೂಕಿನ 30 ಹಾಸ್ಟೆಲ್‌ಗ‌ಳಿಂದ ಹಾಪ್‌ಕಾಮ್ಸ್ ಗೆ ಬರುತ್ತಿದ್ದ ಮಾಸಿಕ 1 ಲಕ್ಷ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿತ್ತು. ಆದರೆ ಜಿಲ್ಲಾಧಿಕಾರಿ ಸಮಯೋಚಿತ ನಿರ್ಧಾರದಿಂದ ಹಾಪ್‌ಕಾಮ್ಸ್‌ಗೆ ಹಲವು ಬಗೆಯಲ್ಲಿ ಲಾಭವಾಯಿತು. ಹಾಪ್‌ಕಾಮ್ಸ್‌ ಜೊತೆಗೆ ಹೆಚ್ಚಿನ ರೈತರ ಸಂಪರ್ಕ ಸಾಧ್ಯವಾಯಿತು. ಹೆಚ್ಚಿನ ರೈತರಿಂದ ಖರೀದಿಗೆ ಮಾತ್ರವಲ್ಲ ನಿತ್ಯವೂ ಬರುತ್ತಿದ್ದ ಸರಾಸರಿ 20-30 ಸಾವಿರ ಆದಾಯಕ್ಕೆ ಬದಲಾಗಿ
ನಿತ್ಯವೂ ಲಕ್ಷಾಂತರ ರೂ. ಆದಾಯ ಬರತೊಡಗಿದೆ.

ಹಾಪ್‌ಕಾಮ್ಸ್‌ ತನ್ನ 10 ಮಳಿಗೆಗಳಲ್ಲಿ 10 ಜನರಿಗೆ ಉದ್ಯೋಗ ಕಲ್ಪಿಸಿದ್ದು ಹೊರತುಪಡಿಸಿ, ಲಾಕ್‌ಡೌನ್‌ ಹಂತದಲ್ಲೇ ತನ್ನ ಸಂಚಾರಿ ಸೇವೆಗಾಗಿ 7 ಬಾಡಿಗೆ ವಾಹನಗಳ ಮಾಲೀಕರಿಗೆ ಉದ್ಯೋಗ ಕಲ್ಪಿಸಿದೆ. ಸಂಚಾರಿ ವಹಿವಾಟಿಗೆ ತಾತ್ಕಾಲಿಕ 20 ಉದ್ಯೋಗಿಗಳನ್ನೂ ನೇಮಿಸಿದೆ. ರಾಜ್ಯದಲ್ಲೇ ವಿಜಯಪುರ
ಜಿಲ್ಲಾಡಳಿತದ ಸೂಚನೆ ಮೇರೆಗೆ ಲಾಕ್‌ ಡೌನ್‌ ಹಂತದಲ್ಲಿ ಮೊಟ್ಟ ಮೊದಲು ಸಂಚಾರಿ ಸೇವೆ ಆರಂಭಿಸಿದ ಜಿಲ್ಲೆಯ ಹಾಪ್‌ಕಾಮ್ಸ್‌ ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರೇರಣೆಯಾಗಿದೆ. ಮುಕ್ತ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಯಲ್ಲಿ ರೈತರಿಂದ ಹಣ್ಣು-ತರಕಾರಿ ಖರೀದಿಸಿ, ಗ್ರಾಹಕರಿಗೂ ಹೊರೆ ಆಗದ ಬೆಲೆಯಲ್ಲಿ ತರಕಾರಿ-ಹಣ್ಣು ತಲುಪಿಸುವಲ್ಲಿ ಹಾಪ್‌ ಕಾಮ್ಸ್‌ ಯಶಸ್ವಿಯಾಗಿದೆ.

ರಾಜ್ಯದಲ್ಲೇ ಲಾಕ್‌ಡೌನ್‌ ಬಳಿಕ ತರಕಾರಿ-ಹಣ್ಣು ಬೆಳೆಗಾರರ ನೆರವಿಗೆ ಧಾವಿಸಿದ್ದೇ ವಿಜಯಪುರ ಜಿಲ್ಲೆ ಮೊದಲು. ಜಿಲ್ಲಾಧಿಕಾರಿ ವೈ. ಎಸ್‌.ಪಾಟೀಲ ಮಾರ್ಗದರ್ಶನದಲ್ಲಿ ಹಾಪ್‌ಕಾಮ್ಸ್‌ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರೈತರಿಂದ ತೋಟಗಾರಿಕೆ ಉತ್ಪನ್ನ ಖರೀದಿಸಿ ನೇರವಾಗಿ ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.
ಸಂತೋಷ ಇನಾಮದಾರ
ಉಪ ನಿರ್ದೇಶಕರು, ತೋಟಗಾರಿಕೆ
ಇಲಾಖೆ, ವಿಜಯಪುರ

ಲಾಕ್‌ಡೌನ್‌ನಿಂದ ಹಾಸ್ಟೆಲ್‌ ಗಳು ಬಂದಾಗಿ ಮಾಸಿಕ ಬರುತ್ತಿದ್ದ 10 ಲಕ್ಷ ರೂ. ಆದಾಯಕ್ಕೆ ಖೋತಾ ಆಗಿತ್ತು. ಇದೀಗ ನಮ್ಮ ಸಂಸ್ಥೆಯ 10 ಅಂಗಡಿ ಜೊತೆ 7
ವಾಹನಗಳಲ್ಲೂ ತರಕಾರಿ-ಹಣ್ಣುಗಳನ್ನು ಓಣಿಗಳಲ್ಲಿ ಸಂಚರಿಸಿ ಮನೆ ಮನೆಗೆ ತಲುಪಿಸುತ್ತಿದ್ದೇವೆ. ಇದರಿಂದ ನಿತ್ಯವೂ 1 ಲಕ್ಷ ರೂ. ವಹಿವಾಟು ನಡೆಯುತ್ತಿದ್ದು ಆದಾಯದಲ್ಲಿ ಭಾರಿ ಹೆಚ್ಚಳವಾಗಿದೆ.
ರಾಜು ಹಪ್ಪರಗಿ, ಕಾರ್ಯದರ್ಶಿ
ಹಾಪ್‌ಕಾಮ್ಸ್‌, ವಿಜಯಪುರ 

ಹಾಪ್‌ಕಾಮ್ಸ್‌ ಸಹಾಯವಾಣಿ
ರಾಜು ಹಿಪ್ಪರಗಿ 9448037007, ದೋಂಡಿರಾಮ ಗಾಯಕವಾಡ 9972894628, ಬೀರಪ್ಪ ದರ್ಗಾ 9632367661, ರವಿ ಶೆಟ್ಟಿ 9731581229, ಲಕ್ಷ್ಮೀ ರೇಬಿನಾಳ 9611361474, ಕಲ್ಲಪ್ಪ ರೇಬಿನಾಳ 9620972210, ಭೀಮು ನಾಗಠಾಣ 9880048593, ಮೀನಾಕ್ಷಿ ತೊದಲಬಾಗಿ 8880327030, ಭಾರತಿ ತೊದಲಬಾಗಿ 8904199290, ಗಿರೀಶ ತೊದಲಬಾಗಿ 9972699290, ಮಂಜುನಾಥ ಹೊಸಕೋಟೆ 7676423370, ಅನಿಲ ಸೂರ್ಯವಂಶಿ 9972058644, ದರ್ಶನ ಸೂರ್ಯವಂಶಿ : 9986366275.

ಜಿ.ಎಸ್‌. ಕಮತರ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.