Wadi: ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ
ದ್ವೇಷ ಹೊಂದಿದ ಕುಟುಂಬಸ್ಥರಿಂದ ಈ ಕೃತ್ಯ
Team Udayavani, Nov 6, 2024, 12:30 PM IST
ವಾಡಿ: ಎದೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನ.6ರ ಬುಧವಾರ ಸಂಭವಿಸಿದೆ.
ಮರಲಿಂಗಪ್ಪ ತೆಳಗೇರಿ (67) ಕೊಲೆಯಾದ ದುರ್ದೈವಿ.
ನ.5ರ ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ಪುತ್ರ ಮರೆಪ್ಪ ತೆಳಗೇರಿ ಅವರ ಜೊತೆ ಮೃತ ಮರಲಿಂಗಪ್ಪ ವಾಡಿಯಿಂದ ಚಾಮನೂರು ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಮರಲಿಂಗಪ್ಪ ಅವರ ಸೊಸೆಯ ಕುಟುಂಬ ಸಂಬಂಧಿಕರು ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ.
ತಂದೆ-ಮಗ ಇಬ್ಬರೂ ಬೈಕ್ ನಿಂದ ರಸ್ತೆಗೆ ಬೀಳುತ್ತಿದ್ದಂತೆ ಕಾರಿನಿಂದ ಇಳಿದ ಹಂತಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ಬೆಚ್ಚಿ ಮರೆಪ್ಪ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ.
ಇತ್ತ ಕೈಗೆ ಸಿಕ್ಕ ಮರಲಿಂಗಪ್ಪನ ಎದೆಯ ಮೇಲೆ ಕಲ್ಲು ಬಂಡೆ ಎತ್ತಿ ಹಾಕಿ ಹಂತಕರು ಕೊಲೆ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಮರಲಿಂಗಪ್ಪನ ಸೊಸೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದ್ದು, ನಮ್ಮ ಮಗಳು ಇವರ ಕಿರುಕುಳಕ್ಕೆ ಬೇಸತ್ತು ಮೃತಪಟ್ಟಿದ್ದಾಳೆ ಎಂಬ ದ್ವೇಷ ಹೊತ್ತ ಕುಟುಂಬಸ್ಥರು ಈ ಕೃತ್ಯ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮರೆಪ್ಪ ಅವರನ್ನು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಶಹಬಾಲ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಕೆ.ತಿರುಮಲೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಡಿ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಸೇರಿಸಿ ಶವ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ರಾಜೀನಾಮೆ ಕೊಟ್ಟು ವಜ್ರವೆಂದು ಸಾಬೀತುಪಡಿಸಲಿ: ಈಶ್ವರಪ್ಪ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ
US Result: ಡೊನಾಲ್ಡ್ Trumpಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.