ಬಿಸಿಲು ರಣರಣ..ಬಣ್ಣದ ಹಬ್ಬ ಭಣಭಣ..
ಬೈಕ್ ಮೇಲೆ ಓಡಾಡುತ್ತಿದ್ದ ಹುಡುಗರು ಬಿಟ್ಟರೆ ಬಣ್ಣದಾಟದಲ್ಲಿ ನಿರತರಾದವರ ಸಂಖ್ಯೆ ಬಲು ವಿರಳವಾಗಿತ್ತು
Team Udayavani, Mar 30, 2021, 6:42 PM IST
ವಾಡಿ: ಒಂದೆಡೆ ಸಾಂಕ್ರಾಮಿಕ ರೋಗ ಕೋವಿಡ್ಹರಡುವ ಆತಂಕ. ಇನ್ನೊಂದೆಡೆ ಮೈ ಬೆವರಳಿಸುವ ಖಡಕ್ ಬಿಸಿಲು. ಇವುಗಳ ನಡುವೆ ಸೋಂಕು
ತಡೆಗಟ್ಟುವ ಕಾನೂನು ಕಟ್ಟಪ್ಪಣೆ ಬೇರೆ. ಇಂತಹ ಸಂಕಷ್ಟದ ಗಳಿಗೆಯಲ್ಲಿ ಸಿಕ್ಕು ಬಣ್ಣದಾಟ ಅಕ್ಷರಶಃ ಕಳೆಗುಂದಿತ್ತು.
ಪೊಲೀಸರ ಕಟ್ಟೆಚ್ಚರದ ಆದೇಶಗಳ ಪಾಲನೆಯೊಂದಿಗೆ ಸೋಮವಾರ ಬಣ್ಣದೋಕುಳಿಯಲ್ಲಿ ತೊಡಗಿದ್ದ ಪಟ್ಟಣದ ಜನರು, ಪ್ರಮುಖ ಬೀದಿಗಳಿಗೆ ಬಂದು
ಸಾರ್ವಜನಿಕರಿಗೆ ಬಣ್ಣ ಎರಚುವುದನ್ನು ಬಿಟ್ಟು ಗಲ್ಲಿ ರಸ್ತೆಯ ಮನೆಯಂಗಳದಲ್ಲಿಯೇ ರಂಗಿನಾಟಕ್ಕೆ ಚಾಲನೆ ನೀಡಿದ್ದು ಎಲ್ಲೆಡೆ ಕಂಡುಬಂದಿತು.
ಬೆಳ್ಳಂಬೆಳಗ್ಗೆ ಒಂದು ತಾಸು ಅಲ್ಲಲ್ಲಿ ಜನರು ಬಣ್ಣದಲ್ಲಿ ಮಿಂದು ಸಂಭ್ರಮಿಸಿದ್ದು ಗೋಚರಿಸಿತು. ಹೊತ್ತು ನೆತ್ತಿಗೇರುವ ಮೊದಲೇ ರಂಗಿನಾಟ ಕೈಬಿಟ್ಟ
ಸಾರ್ವಜನಿಕರು ಸ್ನಾನಕ್ಕೆ ಮುಂದಾದರೆ, ಯುವಕರು ಬಣ್ಣ ತೊಳೆದುಕೊಳ್ಳಲು ಕಾಗಿಣಾ ಮತ್ತು ಭೀಮಾ ನದಿಗಳತ್ತ ಮುಖಮಾಡಿದರು. ಯುವಕರ ತಂಡದ ಬಣ್ಣದಾಟ ಕಡಿಮೆ ಸಮಯದಲ್ಲಿ ಕೊನೆಗೊಳ್ಳಲು ಬೆಳಗ್ಗೆ 8 ಗಂಟೆ ವೇಳೆಯೇ ಮೈಸುಡುವಂತಿದ್ದ ರಣಬಿಸಿಲು ಪ್ರಮುಖ ಕಾರಣ. ಬೈಕ್ ಮೇಲೆ ಓಡಾಡುತ್ತಿದ್ದ ಹುಡುಗರು ಬಿಟ್ಟರೆ ಬಣ್ಣದಾಟದಲ್ಲಿ ನಿರತರಾದವರ ಸಂಖ್ಯೆ ಬಲು ವಿರಳವಾಗಿತ್ತು. ದೊಡ್ಡವರಿಗಿಂತ ಮಕ್ಕಳಾಟವೇ ಜೋರಾಗಿತ್ತು. ನಂತರ ನಗರದ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಭಣಗುಡುತ್ತಿದ್ದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವೂ ಇಲ್ಲವಾಗಿತ್ತು.
ಭಾರಿ ಪ್ರಾಮಾಣದ ಬಿಸಿಲು ಸಹಿಸಲಾಗದೇ ಜನರು ಬಹುಬೇಗ ಮನೆ ಸೇರಿಕೊಂಡಿದ್ದರು. ಪೊಲೀಸರು ಗಸ್ತು ತಿರುಗುತ್ತಲೇ ಪರಸ್ಪರ ಬಣ್ಣ ಎರಚಿ ಹಬ್ಬದ ಸಂತಷ ಹಂಚಿಕೊಂಡರು. ಅಂಗಡಿಗಳು ಬಂದ್ ಆಗಿದ್ದರಿಂದ ಬೀದಿಗಳು ಬಯಲು ಬಯಲಾಗಿದ್ದವು. ಕೋವಿಡ್ ಸೋಂಕಿನ ಆತಂಕಕ್ಕಿಂತ ರಣಬಿಸಿಲು ಹೋಳಿ ಹಬ್ಬದ ಸಂಭ್ರಮ ಕಸಿದುಕೊಂಡಿತು ಎನ್ನಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.