ಮಾಶಾಳದಿಂದ ಜಲಶಕ್ತಿ ಅಭಿಯಾನ
ಈಗ ಕೆರೆ ತುಂಬುವ ಯೋಜನೆ ಕೈಗೊಂಡಿದ್ದು ಖುಷಿ ತಂದಿದೆ.
Team Udayavani, Apr 10, 2021, 6:21 PM IST
ಅಫಜಲಪುರ: ರೈತರು ಹಾಗೂ ಜನಸಾಮಾನ್ಯರು ಸ್ವಾವಲಂಬಿ ಜೀವನಕ್ಕೆ ತಾಲೂಕಿನಾದ್ಯಂತ ಹೆಚ್ಚು ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದ್ದು,
ತಾಲೂಕಿನಲ್ಲಿ 58 ಕೋಟಿ ರೂ. ವೆಚ್ಚದಲ್ಲಿ ಏಳು ಕೆರೆಗಳನ್ನು ತುಂಬುವ ಮೂಲಕ ರೈತರ ಬಹುದಿನದ ಬೇಡಿಕೆ ಇಡೆರಿಸಿದಂತಾಗಿದೆ ಎಂದು ಶಾಸಕ ಎಂ.ವೈ.
ಪಾಟೀಲ ಹೇಳಿದರು. ತಾಲೂಕಿನ ಮಾಶಾಳ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಡಿಯಲ್ಲಿ 58 ಕೋಟಿ ರೂ. ಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ದೇಶದ ಬಹುಮುಖ್ಯ ಕಸಬಾಗಿದ್ದು ಕೃಷಿ ಚಟುವಟಿಕೆಗಳು ಬಲವರ್ಧನೆಗೊಳ್ಳಲು ನೀರಾವರಿ ಯೋಜನೆ ಯಶಸ್ವಿಯಾಗಬೇಕು. ಇನ್ನು ಕೃಷಿಯತ್ತ
ಯುವಕರು ಸೇರಿದಂತೆ ವಿದ್ಯಾವಂತರು ಒಲವು ತೋರಿಸಿದರೆ ಕೃಷಿ ಮತ್ತಷ್ಟು ಲಾಭದತ್ತ ಹೆಜ್ಜೆ ಹಾಕಲು ಸಾಧ್ಯ ಎಂದರು.
ಕೆರೆ ತುಂಬುವ ಯೋಜನೆಯಿಂದ ತಾಲೂಕಿನಾದ್ಯಂತ ಅಂತರ್ಜಲಮಟ್ಟ ಹೆಚ್ಚಳವಾಗಲಿದೆ. ನೀರಾವರಿ ಲಾಭ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಶಾಲೆ, ಆಸ್ಪತ್ರೆ, ಶೌಚಾಲಯ, ರಸ್ತೆ, ಚರಂಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ನೀಡಲಾಗಿದ್ದು ತಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸ ಚುರುಕಾಗಿ ನಡೆಯುತ್ತಿವೆ. ಮಾಶಾಳ ಗ್ರಾಮದಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿದ್ದು, ಸರ್ಕಾರದ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಮಣೂರು ಮತ್ತು ಮಾಶಾಳ ಗ್ರಾ.ಪಂ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜಗೇರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಜಿಪಂ ಸದಸ್ಯ ಅರುಣಕುಮಾರ ಪಾಟೀಲ ಮಾತನಾಡಿ, ತಮ್ಮ ತಂದೆ ಶಾಸಕರಾಗಿ ಆಯ್ಕೆಯಾದ ಬಳಿಕ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಬಹುದಿನದ ಕನಸು ಈಡೇರಿದಂತಾಗಿದೆ ಎಂದರು. ಮುಖಂಡ ಜೆ.ಎಂ. ಕೊರಬು ಅನುಭವ ಉಳ್ಳವರು. ಅಭಿವೃದ್ಧಿ ಕುರಿತು ಅವರ ಸಲಹೆ, ಮಾರ್ಗದರ್ಶನ ಅವಶ್ಯಕವಾಗಿದೆ. ನನ್ನನ್ನು ರಾಜಕೀಯವಾಗಿ ಬೆಳೆಸಿದ ಮಾಶಾಳ ವಲಯದ ಜನತೆ ಋಣ ಮರೆಯುವದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಜೇಂದ್ರ ಪಾಟೀಲ ರೇವೂರ ಮಾತನಾಡಿದ ಅವರು, ಕೆಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಹಿತ ಮರೆತು ಉದ್ದೀಮೆದಾರರ ಕೈಗೊಂಬೆಯಾಗಿ ವರ್ತಿಸುತ್ತಿವೆ. ಜನ ತಕ್ಕ ಪಾಠ ಕಲಿಸಲು ಸಜ್ಜಾಗಬೇಕಿದೆ. ಈಗ ಕೆರೆ ತುಂಬುವ ಯೋಜನೆ ಕೈಗೊಂಡಿದ್ದು ಖುಷಿ ತಂದಿದೆ. ರೇವೂರ ಗ್ರಾಮದಲ್ಲಿಯೂ ಈ ಯೋಜನೆ ಕೈಗೊಳ್ಳಿ ಎಂದು ಮನವಿ ಮಾಡಿದರು. ಜ್ಞಾನೇಶ್ವರಿ ಪಾಟೀಲ, ಗುರುಪಾದ ಪತಾಟೆ, ತುಕಾರಾಮಗೌಡ ಪಾಟೀಲ ಮಾತನಾಡಿದರು.
ಕೆಎನ್‌ಎಲ್‌ಎಲ್ ಇಇ ಮಲ್ಲಿಕಾರ್ಜುನ ಜಾಕಾ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡ ಜೆ.ಎಂ.ಕೊರಬು ಮಾತನಾಡಿ, ನಾನು ಯಾವತ್ತಿಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಸೇವೆ ಮಾಡುತ್ತೇನೆ. ಶಾಸಕ ಎಂ.ವೈ. ಪಾಟೀಲ ಜನಪರ ಕೆಲಸಗಳಿಗೆ ಸದಾ ಬೆಂಬಲ ಇದೆ ಎಂದರು.
ಗ್ರಾ ಪಂ ಅಧ್ಯಕ್ಷ ಸುಗಲಾಬಾಯಿ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಸದಸ್ಯ ರಾಜಕುಮಾರ ಬಬಲಾದ, ಜಿಪಂ ಸದಸ್ಯೆ ಬೌರಮ್ಮ ಕರೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೆಶ ಪಾಟೀಲ, ಮುಖಂಡರಾದ ಪಪ್ಪು ಪಟೇಲ್, ರಮೇಶ ಪೂಜಾರಿ ಉಡಚಾಣ ಮಹಾದೇವಗೌಡ ಕರೂಟಿ, ಬಾಬಾಸಾಹೇಬಗೌಡ ಪಾಟೀಲ, ಶಿವಪುತ್ರಪ್ಪ ಜಿಡ್ಡಗಿ, ಸಿದ್ದಾರ್ಥ ಬಸರಿಗಿಡ, ರಾಜಶೇಖರ ಪಾಟೀಲ, ಸಂತೋಷ ರಾಠೊಡ, ಶಿವಾನಂದ ಗಾಡಿಸಾಹುಕಾರ, ಬಿಲ್ಲಮರಾಜ್ ಮ್ಯಾಳೆಸಿ, ಶಿವರುದ್ರಪ್ಪ ಅವಟಗಿ, ರೇವಪ್ಪ ನಾಮಗೊಂಡ, ಚಂದು ದೇಸಾಯಿ, ವಿಠೊಬ ಪೂಜಾರಿ, ನಾನಾ ಸಾಹೇಬಗೌಡ ಪಾಟೀಲ, ಶರಣು ಕುಂಬಾರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.