ಯಾದಗಿರಿ: 61 ಮಂದಿಗೆ ಸೋಂಕು
ಒಂದೇ ಗ್ರಾಮದ 20 ಜನರಿಗೆ ವಕ್ಕರಿಸಿದ ಕೋವಿಡ್ ಮಹಾರಾಷ್ಟ್ರದ ಜತೆಗೆ ಗುಜರಾತ್ ನಂಟು
Team Udayavani, Jun 10, 2020, 12:15 PM IST
ಯಾದಗಿರಿ: ಮಂಗಳವಾರವೂ ಯಾದಗಿರಿಯಲ್ಲಿ ಕೋವಿಡ್ ಅಟ್ಟಹಾಸ ಮೆರೆದಿದ್ದು, ಮಹಾರಾಷ್ಟ್ರದ ಜತೆಗೆ ಇದೀಗ ಗುಜರಾತ್ ನಂಟೂ ಅಂಟಿದೆ. ಅಲ್ಲದೇ ಗುರುಮಠಕಲ್ ತಾಲೂಕಿನ ಕೇಶ್ವಾರ ಗ್ರಾಮದ 4 ವರ್ಷದ ಬಾಲಕಿ (ಪಿ-5864) ಸೇರಿದಂತೆ ಅದೇ ಗ್ರಾಮದ 20 ಜನರಲ್ಲಿ ಮಹಾಮಾರಿ ಕೋವಿಡ್ ವಕ್ಕರಿಸಿದ್ದು ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ.
ಸೋಮವಾರವಷ್ಟೇ ಹಸುಗೂಸನ್ನು ಲೆಕ್ಕಿಸದೆ ಬರೋಬ್ಬರಿ 66 ಜನರಲ್ಲಿ ವಕ್ಕರಿಸಿ, 581 ಇದ್ದ ಸೋಂಕಿತರ ಸಂಖ್ಯೆ ಮಂಗಳವಾರ 61 ಜನ ಸೇರಿ 642 ಜನರಿಗೆ ಸೋಂಕು ದೃಢವಾಗಿದೆ. ಚಿಕ್ಕ ಮಕ್ಕಳು ಸೇರಿದಂತೆ 35 ಪುರುಷರು, 26 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುರುಮಠಕಲ್ ತಾಲೂಕಿನ ಚಿಂತನಳ್ಳಿ ಗ್ರಾಮದ 2 ವರ್ಷದ ಹೆಣ್ಣುಮಗು (ಪಿ-5854), 4 ವರ್ಷದ ಹೆಣ್ಣುಮಗು (ಪಿ-5853) ಹಾಗೂ 8 ವರ್ಷದ ಬಾಲಕಿ (ಪಿ-5855) ಸೇರಿ 6 ಜನರಲ್ಲಿ ಸೋಂಕು ಕಾಣಿಸಿದೆ.
ಅಜಲಾಪುರ ಗ್ರಾಮದ 4 ವರ್ಷದ ಬಾಲಕ (ಪಿ- 5892), ಜೈಗ್ರಾಮ್, ಮಾಧ್ವಾರ, ಮಗದಂಪುರ ತಾಂಡಾ, ಯಲ್ಹೇರಿ, ಚಿನ್ನಾಕಾರ್, ಚಪೆಟ್ಲಾದಲ್ಲಿಯೂ ಸೋಂಕು ಪತ್ತೆಯಾಗಿದ್ದು ಎಲ್ಲರೂ ಮಹಾರಾಷ್ಟ್ರದ ನಂಟು ಹೊಂದಿದ್ದಾರೆ. ಅಲ್ಲದೇ ಗುಜರಾತನ ಅಹಮದಾಬಾದ್‌ನಿಂದ ಆಗಮಿಸಿರುವ ಸುರಪುರ ಮೂಲದ 28 ಮತ್ತು 52 ವರ್ಷದ ಪುರುಷ (ಪಿ-5840, ಪಿ-5842) ಹಾಗೂ 20 ವರ್ಷದ ಮಹಿಳೆ (ಪಿ-5841)ಗೆ ಸೋಂಕು ದೃಢಪಟ್ಟಿದೆ.
431 ಮಾದರಿ ಸಂಗ್ರಹ: ಕೊರೊನಾ ವೈರಸ್ ಪರೀಕ್ಷೆಗಾಗಿ ಮಂಗಳವಾರ ಜಿಲ್ಲೆಯಲ್ಲಿ 431 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇಂದು 661 ನೆಗೆಟಿವ್ ವರದಿ ಸೇರಿ ಈವರೆಗೆ 16,977 ಜನರ ವರದಿ ನೆಗೆಟಿವ್ ಬಂದಿವೆ. ಇನ್ನೂ 1,437 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್19 ಖಚಿತಪಟ್ಟ 642 ವ್ಯಕ್ತಿಗಳ ಪೈಕಿ 113 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,059 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,426 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.
ಜಿಲ್ಲೆಯಲ್ಲಿ 29 ಕಂಟೇನ್‌ಮೆಂಟ್ ಝೋನ್‌ಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 123 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಕೊರೊನಾ ಕೇರ್ ಸೆಂಟರ್‌ನಲ್ಲಿ 71 ಜನರನ್ನು, ಸುರಪುರ ಕೊರೊನಾ ಕೇರ್ ಸೆಂಟರ್‌ನಲ್ಲಿ 80 ಮತ್ತು ಏಕಲವ್ಯ ಕೊರೊನಾ ಕೇರ್ ಸೆಂಟರ್‌ನಲ್ಲಿ 179 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 31 ಸಾಂಸ್ಥಿಕ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಒಟ್ಟು 1,350 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.