ಗುಡುಗು ಸಹಿತ ಮಳೆ: ನೆಲಕಚ್ಚಿದ ಭತ್ತದ ಬೆಳೆ
600 ಎಕರೆ ಭತ್ತ ಹಾನಿ: ಸರಕಾರದ ನೆರವಿಗೆ ಆಗ್ರಹ
Team Udayavani, Apr 9, 2020, 10:38 AM IST
ಯಡ್ರಾಮಿ: ತಾಲೂಕಿನ ಕುರುಳಗೇರಾ ಗ್ರಾಮದ ಸರ್ವೇ ನಂ.17ರ ಜಮೀನಿನಲ್ಲಿ ಮಳೆ-ಬಿರುಗಾಳಿಗೆ ನೆಲಕ್ಕೆ ಬಿದ್ದ ಭತ್ತ.
ಯಡ್ರಾಮಿ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದ್ದು, ಲಾಕ್‌ಡೌನ್ ಜತೆಯಲ್ಲಿ ಮತ್ತೂಂದು ಬರೆ ಎಳೆದಂತಾಗಿದೆ. ಕೊರೊನಾ ಲಾಕ್‌ಡೌನ್‌ನಿಂದ ಕಲ್ಲಂಗಡಿ, ಟೊಮ್ಯಾಟೋ, ಮೆಣಸಿನಕಾಯಿ ಬೆಳೆದ ರೈತರು ಅವುಗಳನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ಸಾಗಿಸಲಾಗದೇ ಅಸಹಾಯಕರಾಗಿ ದನಕರುಗಳಿಗೆ ತಿನ್ನಲು ಹಾಕುತ್ತಿರುವುದು ಒಂದೆಡೆಯಾದರೆ, ಇತ್ತ ಭತ್ತ ನಾಟಿ ಮಾಡಿದ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ.
ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ತಮ್ಮ ಗದ್ದೆಗಳಲ್ಲಿ ಹುಲುಸಾಗಿ ಬೆಳೆದ ಭತ್ತವನ್ನು ಇನ್ನೇನು ಒಂದೇ ವಾರದಲ್ಲಿ ಕಟಾವು ಮಾಡಿ, ರಾಶಿ ಮಾಡಬೇಕೆಂದಿದ್ದರು. ಇನ್ನೇನು ಲಾಕ್‌ಡೌನ್ ಮುಗಿಯುತ್ತದೆ, ವಾಹನಗಳ ಓಡಾಟ ಸುಗಮವಾಗಿ, ಪಂಜಾಬಿ ಮಷೀನ್ ಗಳನ್ನು ಗದ್ದೆಗಳಿಗೆ ಇಳಿಸಿಬಿಡಬೇಕು ಎನ್ನುವ ಆತುರದಲ್ಲಿದ್ದರು. ಆದರೆ ವಿಧಿ ಯಾಟವೇ ಬೇರೆ ಆಗಿತ್ತು.
ಮಂಗಳವಾರ ಸಂಜೆ ಗುಡುಗು ಮಿಂಚು, ಬಿರುಗಾಳಿ ಜೊತೆಗೆ ಸುರಿದ ಅಕಾಲಿಕ ಮಳೆ, ಅನ್ನದಾತನ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಕುರುಳಗೇರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುಮಾರು 600ಕ್ಕೂ ಹೆಚ್ಚಿನ ಎಕರೆ ವಿಸ್ತೀರ್ಣದ ಭತ್ತದ ಬೆಳೆ ಮಳೆ-ಬಿರುಗಾಳಿಗೆ ನೆಲಕ್ಕುರುಳಿ ಅಪಾರ ನಷ್ಟವುಂಟಾಗಿದೆ. ಮುಂಗಾರಿನಲ್ಲಿ ಬೆಳೆದ ಭತ್ತದ ಖರ್ಚುನ್ನು ಈ ಹಿಂಗಾರಿನ ಬೆಳೆ ತೂಗಿಸಿಕೊಂಡು ಹೋಗುತ್ತದೆ. ಈ ಹಿಂಗಾರಿ ಪೀಕು ಒಂದಿಷ್ಟು ಲಾಭವನ್ನು ಕೊಡುತ್ತಿತ್ತು. ಆದರೆ ಮಳೆ-ಗಾಳಿಯಿಂದ ಇದಕ್ಕೂ ಕುತ್ತ ಬಂದಿದೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.