30 ಅಡಿ ಎತ್ತರದ ಆಂಜನೇಯಸ್ವಾಮಿ ಮೆರವಣಿಗೆ
ಚುಂಚನ ಕಟ್ಟೆಯ ಶ್ರೀರಾಮ ದೇವಾಲಯದ ಆರ್ಚಕರು ಮೂರ್ತಿಗೆ ಪೂಜೆ ಸಲ್ಲಿಸಿದರು.
Team Udayavani, May 7, 2022, 6:09 PM IST
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಯ ಕೋದಂಡರಾಮ ದೇವಾಲಯದ ಆವರಣದಲ್ಲಿ 30 ಅಡಿ ಎತ್ತರದ ಶ್ರೀ ಆಂಜನೇಯಸ್ವಾಮಿಯ ಏಕಶಿಲಾ ಮೂರ್ತಿ ಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಿ ಅಗತ್ಯ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಮೂರ್ತಿ ಯನ್ನು ಪುರಪ್ರವೇಶ ಶುಕ್ರವಾರ ಮೈಸೂರಿನಿಂದ ಕೆ.ಆರ್.ನಗರದ ಮಾರ್ಗವಾಗಿ ಚುಂಚನಕಟ್ಟೆಗೆ ಕರೆತರಲಾಯಿತು.
ಸಂಜೆ 4 ಗಂಟೆಗೆ ಮೈಸೂರಿನಿಂದ ಆಗಮಿಸಿದ ಏಕಶಿಲಾ ಮೂರ್ತಿಯ ಪುರಪ್ರವೇಶಕ್ಕೆ ಪಟ್ಟಣದ ಆದಿಶಕ್ತಿ ತೋಪಮ್ಮ ತಾಯಿ ದೇವಾಲಯದ ಬಳಿ ಅದ್ಧೂರಿ ಸ್ವಾಗತ ಕೋರಿ, ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಾಸನ-ಮೈಸೂರು ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಿ ಚೀರ್ನಹಳ್ಳಿ, ಹೆಬ್ಟಾಳು ಗ್ರಾಮದ ಮಾರ್ಗವಾಗಿ ಚುಂಚನಕಟ್ಟೆಗೆ ತೆರಳಿತು. ಮೆರವಣಿಗೆ ಉದ್ದಕ್ಕೂ ಹನುಮ ದೇವರ ಭಕ್ತರು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಹಾಜರಿದ್ದು, ಪೂರ್ಣಕುಂಭ ಕಳಸ ಹಾಗೂ ವಿವಿಧ ಕಲಾತಂಡ ಮತ್ತು ಎತ್ತಿನ ಗಾಡಿಗಳ ಮೆರವಣಿಗೆ ಮಾಡಿದ್ದಲ್ಲದೆ ಪಟಾಕಿ ಸಿಡಿಸಿ ಮಜ್ಜಿಗೆ ಪಾನಕ ಸೇರಿದಂತೆ ಇತರ ಪ್ರಸಾದವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಚುಂಚನ ಕಟ್ಟೆಯ ಶ್ರೀರಾಮ ದೇವಾಲಯದ ಆರ್ಚಕರು ಮೂರ್ತಿಗೆ ಪೂಜೆ ಸಲ್ಲಿಸಿದರು.
ಅರಕೆರೆ ವಿರಕ್ತ ಮಠದ ಶ್ರೀಸಿದ್ದೇಶ್ವರಸ್ವಾಮೀಜಿ, ಜಾಮಿಯಾ ಮಸೀದಿಯ ಧರ್ಮಗುರು ಹಜರತ್ ಅಲೀಹಸನ್ ಇಮಾಮ್, ಚರ್ಚಿನ ಫಾದರ್ ಜೆ.ಜೋಸೆಫ್, ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ತಿನ ಸದಸ್ಯ ಅಡಗೂರುಎಚ್.ವಿಶ್ವನಾಥ್, ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದಪ್ಪ, ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯರಾದ ಸಾ.ರಾ.ನಂದೀಶ್, ಸಿ.ಜೆ.ದ್ವಾರಕೀಶ್, ವೀಣಾಕೀರ್ತಿ, ಎಂ.ಟಿ.ಕುಮಾರ್, ನವನಗರ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿ, ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸರ್ವ ಧರ್ಮಗಳ ಬೀಡಾಗಿರುವುದರ ಜತೆಗೆ ಸಾಮರಸ್ಯದ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಚುಂಚನಕಟ್ಟೆ ಮತ್ತು ಹಳೆಯ ಎಡತೊರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ತಲಾ 12 ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಹಳೇ ಎಡತೊರೆಯ ಕಾವೇರಿ ನದಿಯ ಮಧ್ಯಭಾಗದಲ್ಲಿ ಶೀಘ್ರದಲ್ಲಿಯೇ ಶಿವನಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗುತ್ತದೆ.ಏಕಶಿಲಾ ಆಂಜನೇಯ ಸ್ವಾಮಿಯನ್ನು ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ತಹಶೀಲ್ದಾರ್ ಎಸ್.ಸಂತೋಷ್, ಮೋಹನ್ ಕುಮಾರ್, ತಾಪಂ ಇಒ ಎಚ್.ಕೆ.ಸತೀಶ್, ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಹಾರಂಗಿ ಇಲಾಖೆ ಎಇಇ ಬಿ.ಗುರುರಾಜ್, ಎಇ ಮೋಹನ್, ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಎಲ್. ಜಗದೀಶ್, ಸಂತೋಷ್‌ಗೌಡ, ಮಂಜುಳಚಿಕ್ಕವೀರು, ಮುಖಂಡರಾದ ಚಂದ್ರಶೇಖರ್, ಎಂ.ಟಿ. ಅಣ್ಣೇಗೌಡ, ಕುಪ್ಪೆನವೀನ್, ವೈ.ಎಸ್.ಸುರೇಶ್, ಎಲ್.ಎಸ್.ಮಹೇಶ್, ಎಂ.ಎಸ್.ಕಿಶೋರ, ಕೆ.ಟಿ. ರವೀಂದ್ರ, ಸಿ.ವಿ.ಮೋಹನ್‌ಕುಮಾರ್, ಕೆ.ಎಸ್. ಮಲ್ಲಪ್ಪ, ಎಚ್.ಪಿ.ಶಿವಣ್ಣ, ಮಂಜುನಾಥ್, ವಡ್ಡರವಿ ಇದ್ದರು. ಸಿಪಿಐ ಎಂ.ಆರ್.ಲವ ನೇತೃತ್ವದಲ್ಲಿ ಪೋಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.