ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಿ
Team Udayavani, Jun 16, 2020, 5:34 AM IST
ಎಚ್.ಡಿ.ಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೈತರನ್ನುದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.ಹಿಂದೆ ದಿವಂಗತ ದೇವರಾಜ ಅರಸು ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೊಳಿಸುವ ಮೂಲಕ ಭೂಮಿ ಉಳ್ಳವರೇ ಭೂಮಿ ಖರೀದಿಸುವಂತೆ ಕಾಯ್ದೆ ಜಾರಿಗೆ ತಂದು ತುಂಡು ಭೂಮಿ ಮತ್ತು ಸಣ್ಣ ಇಳುವರಿದಾರರನ್ನು ಉಳಿಸಿದರು.
ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಿಜೆಪಿ ಸರ್ಕಾರ ಭೂಮಿ ಉಳ್ಳವರಷ್ಟೇ ಭೂಮಿ ಖರೀದಿಸುವ ಕಾಯ್ದೆತಿದ್ದುಪಡಿಗೊಳಿಸಿ ದಲ್ಲಾಳಿಗಳು, ಏಜೆಂಟರು ಸೇರಿದಂತೆ ಬಂಡವಾಳ ಶಾಹಿಗಳು ಭೂಮಿ ಖರೀದಿಸಬಹುದು ಅನ್ನುವ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಈ ಆದೇಶ ಜಾರಿಯಾದರೆ ಈಗ ತುಂಡು ಭೂಮಿ ಹೊಂದಿರುವ ಬಡ ರೈತರು ತಮ್ಮಲ್ಲಿರುವ ಅಲ್ಪಸ್ಪಲ್ಪ ಭೂಮಿ ಮಾರಾಟ ಮಾಡಿ ನಗರ ಪ್ರದೇಶಗಳ ವ್ಯಾಮೋಹಕ್ಕೆ ಬಲಿಯಾಗಿ ಬೀದಿ ಪಾಲಾಗುತ್ತದೆ.
ಹಾಗಾಗಿ ಸರ್ಕಾರ ಕೂಡಲೆ ಭೂ ಸುಧಾರಣೆ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಳನಿಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ನಾಗರಾಜು, ದೇವರಾಜು, ಬಸವರಾಜು, ರವಿಕುಮಾರ್ ಜಕ್ಕಳ್ಳಿ, ಕುಮಾರಸ್ವಾಮಿ, ಮಹದೇವನಾಯ್ಕ, ಪ್ರಸಾದಿ, ನಾಗರಾಜು, ಕೆಂಪೇಗೌಡ, ಮಹದೇವಪ್ಪ, ಮಹದೇವು, ಕುಮಾರ್, ನಿಂಗಯ್ಯ ತಹಶೀಲ್ದಾರ್ ಮಂಜುನಾಥ್‌ಗೆ ಮನವಿ ಪತ್ರ ಸಲ್ಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.